- ಬೆಂಗಳೂರಿನಲ್ಲಿ 35 ಜನರಿಗೆ ಕೋವಿಡ್
- ಮತ್ತೆ ಬಂತು ಮಾಸ್ಕ್, ಸ್ಯಾನಿಟೈಸರ್ (Covid-19 cases in rise Karnataka)
- ರಾಜ್ಯ ಆರೋಗ್ಯ ಇಲಾಖೆಯಿಂದ ಕೆಲವು ಮಾರ್ಗಸೂಚಿಗಳ ಪ್ರಕಟ
Bengaluru: ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಕೊರೊನಾ ವೈರಸ್ (Coronavirus) ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆರೋಗ್ಯ ಇಲಾಖೆ (Health Deapartment) ಹೊಸದಾಗಿ ಕೋವಿಡ್-19 ಮಾರ್ಗಸೂಚಿ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಒಟ್ಟು 35 ಸಕ್ರಿಯ ಕೋವಿಡ್ (35 active Covid) ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 32 ಬೆಂಗಳೂರಿನಲ್ಲಿ ದೃಢಪಟ್ಟಿವೆ (32 confirmed in Bengaluru) .
ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದರೂ ಮುನ್ನೆಚ್ಚರಿಕಾ ಕ್ರಮಗಳನ್ನು (Precautionary measures) ಕೈಗೊಳ್ಳುವಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ 20 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏಕಾಏಕಿ ಹೆಚ್ಚಳ ( increase in outbreaks) ಕಂಡುಬಂದಿದೆ.
ಹೀಗಾಗಿ ಮಕ್ಕಳು, ವೃದ್ಧರು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ವಹಿಸಿಕೊಳ್ಳಬೇಕು ಎಂದು ಇಲಾಖೆ ಸಲಹೆ ನೀಡಿದೆ.
ಇನ್ನು 2025ನೇ ಸಾಲಿನಲ್ಲಿ ಈವರೆಗೆ ಯಾವುದೇ ಕೋವಿಡ್ ಮರಣಗಳು (Covid deaths) ವರದಿಯಾಗಿರುವುದಿಲ್ಲ.
ಪ್ರಸ್ತುತ, ಕೋವಿಡ್-19 (Covid-19) ಪರಿಸ್ಥಿತಿಯು ಹತೋಟಿಯಲ್ಲಿದ್ದು ಸಾರ್ವಜನಿಕರು ಅನಗತ್ಯ ಭಯಪಡುವ ಅಗತ್ಯವಿಲ್ಲ, ಆದರೆ ಎಚ್ಚರಿಕೆಯನ್ನು ವಹಿಸುವುದು (Exercise caution) ಅಗತ್ಯವಾಗಿದೆ.
ಆದಾಗ್ಯೂ, ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಗರ್ಭಿಣಿಯರು, ಮಕ್ಕಳು (Pregnant women, children) ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮುಂಜಾಗ್ರತಾ ಕ್ರಮವಾಗಿ ಜನನಿಬಿಡ ಪ್ರದೇಶಗಳಿಗೆ (Densely populated areas) ತೆರಳುವಾಗ ಮಾಸ್ಕ್ ಧರಿಸುವುದು ಸೂಕ್ತವಾಗಿದೆ.
ಹಾಗೂ ಕೋವಿಡ್ ಸ್ವಚ್ಛತೆ (Covid cleanliness) , ಹ್ಯಾಂಡ್ ಸ್ಯಾನಿಟೈಸರ್ ನ ಬಳಕೆ ಇತ್ಯಾದಿಗಳನ್ನು ಪಾಲಿಸುವುದು ಅಗತ್ಯವಾಗಿದೆ.

Severe Acute Respiratory Illness (SARI) ಲಕ್ಷಣಗಳನ್ನು ಹೊಂದಿರುವವರು, ಆದ್ಯತೆಯ ಮೇಲೆ ಕೋವಿಡ್ – 19 ಪರೀಕ್ಷೆಗೆ (covid-19 test) ಒಳಪಡುವುದರಿಂದ, ಸೂಕ್ತ ಚಿಕಿತ್ಸೆ ಪಡೆಯುವುದರೊಂದಿಗೆ ಕೋವಿಡ್ ಪ್ರಸರಣವನ್ನು ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದೆ.
ಅಲ್ಲದೆ ಈಗಾಗಲೇ ತೀವ್ರ ಉಸಿರಾಟದ ಕಾಯಿಲೆಯ (Respiratory disease) ಲಕ್ಷಣಗಳನ್ನು ಹೊಂದಿರುವವರು ಸಕಾಲಿಕವಾಗಿ ಚಿಕಿತ್ಸೆಯನ್ನು ಪಡೆಯಬೇಕು.
ಸಂಭಾವ್ಯ ಅಪಾಯ (Potential risk) ತಡೆಗಟ್ಟಲು ಕೋವಿಡ್ -19 ಪರೀಕ್ಷೆಯನ್ನು ತಕ್ಷಣವೇ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ (Bangalore countryside) ಜಿಲ್ಲೆಯ ಹೊಸಕೋಟೆಯ ಒಂಬತ್ತು ತಿಂಗಳ ಮಗುವಿಗೆ (9 Month Baby) ಕೋವಿಡ್ -19 ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿತ್ತು.
ಆರೋಗ್ಯ ಇಲಾಖೆ ಅಧಿಕಾರಿಗಳು (Health Department officials) ಕೂಡ ಇದನ್ನು ದೃಢಪಡಿಸಿದ್ದಾರೆ.
ಇದನ್ನು ಓದಿ : ಯಾವುದೇ ಕಾರಣಕ್ಕೂ ಕನ್ನಡದಲ್ಲಿ ಮಾತನಾಡಲ್ಲವೆಂದ SBI ಮ್ಯಾನೇಜರ್ ಎತ್ತಂಗಡಿ: ಇದು ಕನ್ನಡಿಗರ ತಾಕತ್ತು
ಶಿಶುವಿಗೆ ಸೋಂಕು ತಗುಲಿರುವುದು ಮೇ 22 ರಂದು ರಾಪಿಡ್ ಆಂಟಿಜೆನ್ ಪರೀಕ್ಷೆ (Rapid antigen test) ನಡೆಸಿದಾಗ ದೃಢಪಟ್ಟಿದೆ (Covid-19 cases in rise Karnataka) ಎಂದು ಕರ್ನಾಟಕ ಆರೋಗ್ಯ (Karnataka Health) ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ (Harsha Gupta) ಶುಕ್ರವಾರ ದೃಢಪಡಿಸಿದ್ದಾರೆ.