ಚೀನಾ(China) ದೇಶ(Country) ಕೋವಿಡ್(Covid) ಮತ್ತೆ ಹರಡುತ್ತಿರುವ ಕಾರಣ ಈಗಾಗಲೇ ತಮ್ಮ ದೇಶವನ್ನು ಲಾಕ್ ಡೌನ್ ಮಾಡಿತ್ತು. ಈ ಬೆನ್ನಲ್ಲೇ ರಾಜ್ಯ(State) ಸರ್ಕಾರದ(Government) ಆರೋಗ್ಯ ಸಚಿವರಾದ(Health Minister) ಡಾ. ಸುಧಾಕರ್(Dr.Sudhakar) ಆಗಸ್ಟ್ ತಿಂಗಳಲ್ಲಿ ಕೊರೊನಾ 4ನೇ ಅಲೆ ಆರಂಭವಾಗುತ್ತದೆ. ಹೀಗಾಗಿ ನಮ್ಮ ಆರೋಗ್ಯ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು ಕೋವಿಡ್ 4ನೇ ಅಲೆಯ ಹೊಡೆತಕ್ಕೆ ಜನರು ಸಿಲುಕಬಾರದು.

ಈ ಸಂಕಷ್ಟಕವನ್ನು ಎದುರಿಸಲು ನಮ್ಮ ಆರೋಗ್ಯ ಇಲಾಖೆ ಎಲ್ಲ ರೀತಿಯಲ್ಲೂ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೂರನೇ ಅಲೆಯನ್ನು ನಿಯಂತ್ರಿಸುವಲ್ಲಿ ನಾವು ಯಶಸ್ವಿಯಾಗಿದ್ದು, ನಾಲ್ಕನೇ ಅಲೆಯನ್ನು ತಡೆಯುವುದರ ಬಗ್ಗೆ ನಮಗೆ ಸಾಕಷ್ಟು ಅನುಭವವಿದೆ. ಆದರೆ ನಮ್ಮ ಜನರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಇದು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಬಿಜೆಪಿ ಸದಸ್ಯ ಶಶಿಲ್ ನಮೋಶಿ, ಜಗತ್ತಿನಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ.

ಈ ಕಾರಣ ರಾಜ್ಯ ಸರ್ಕಾರವೂ ಕೊರೊನಾ 4ನೇ ಅಲೆಯ ಬಗ್ಗೆ ಕಟ್ಟೆಚ್ಚರ ವಹಿಸಬೇಕು, ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಒಳಿತು ಎಂದು ಹೇಳಿದ್ದಾರೆ. ಕರ್ನಾಟಕ ರಾಜ್ಯವೂ ಕೊರೊನಾ ನಾಲ್ಕನೇ ಅಲೆಯನ್ನು ಎದುರಿಸಲು ಸನ್ನದ್ದವಾಗಿದೆ. ಮುಂಜಾಗ್ರತಾ ಕ್ರಮವಾಗಿ 55 ಸಾವಿರ ಹಾಸಿಗೆಗಳು, ಮೂಲಭೂತ ಸೌಕರ್ಯಗಳು, ಪ್ರತಿದಿನ 2.5 ಲಕ್ಷಕ್ಕೂ ಅಧಿಕ ಕೋವಿಡ್ ಪರೀಕ್ಷೆಗಳು ನಮ್ಮಲ್ಲಿ ನಡೆಯಲಿದೆ. ಈಗಾಗಲೇ ಲಕ್ಷಗಟ್ಟಲೇ ಲಸಿಕಾ ಅಭಿಯಾನ ನಡೆಯುತ್ತಿರುವುದರಿಂದ ಭಯಪಡುವಂತ ಸಂಗತಿಯೇನಿಲ್ಲ. ಜನರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ ಎಂದು ಹೇಳಿದ್ದಾರೆ ಆರೋಗ್ಯ ಸಚಿವರು.