Bengaluru: 2022 ಇನ್ನೇನು ಮುಗಿಯುವ ಹಂತದಲ್ಲಿದೆ, 2023 ರನ್ನು ಸ್ವಾಗತಿಸಲು ಕೆಲವೇ ದಿನಗಳು ಬಾಕಿ ಉಳಿದಿದ್ದು ಭರ್ಜರಿ ಸಂಭ್ರಮಾಚರಣೆಗೆ ಬೆಂಗಳೂರು ಸಜ್ಜಾಗಿದೆ. ಆದರೆ ಕೊರೊನಾ(covid entry) ಅಬ್ಬರದ ಆತಂಕ ಶುರುವಾಗಿರುವ ಬೆನ್ನಲ್ಲೇ ಪೊಲೀಸರು ಅಖಾಡಕ್ಕಿಳಿದಿದ್ದಾರೆ.

ವಿದೇಶಗಳಲ್ಲಿ ಕ್ರಿಸ್ಮಸ್ (covid entry) ಹಾಗೂ ಹೊಸ ವರ್ಷದ (New Year) ಆಚರಣೆಗಳಿಗೆ ಹೆಚ್ಚಿನ ರಜೆಗಳಿರುವುದರಿಂದ ವಿದೇಶಗಳಿಂದ ಬೆಂಗಳೂರಿಗೆ ಬರುವ ಭಾರತೀಯರು ರಾಜಧಾನಿಯಲ್ಲಿ 90ರಷ್ಟು ಹೋಟೆಲ್ಗಳನ್ನು ಭರ್ತಿ ಮಾಡಿದ್ದಾರೆ.
ಈ ನಡುವೆ ಕೊರೊನಾ ಆತಂಕ ಶುರುವಾಗಿದೆ, 56 ಸಾವಿರ ರೂಂಗಳು ಮುಂಗಡ ಬುಕಿಂಗ್ ಆಗಿರುವುದರಿಂದ ಸಹಜವಾಗಿಯೇ ಖುಷಿಯಾಗಿರುವ ಹೋಟೆಲ್ ಮಾಲೀಕರಿಗೆ ಆತಂಕ ಶುರುವಾಗಿದೆ.
ಎರಡು ವರ್ಷಗಳ ಬಳಿಕ ಹೊಸ ವರ್ಷವನ್ನು ಸಂಭ್ರಮಾಚರಿಸಬೇಕೆಂದು ರಾಜಧಾನಿಯ ಜನತೆ ಸಿದ್ಧತೆಯಲ್ಲಿರುವಾಗಲೇ ಕೊರೊನಾ ಕರಿ ನೆರಳು ಆವರಿಸಿದೆ.
ಬ್ರಿಗೇಡ್ ರೋಡ್ (Brigade Road), ಎಂಜಿ ರೋಡ್ಗಳಲ್ಲಿ (MG Road) ದೊಡ್ಡಮಟ್ಟದಲ್ಲಿ ಪಾರ್ಟಿ ಪ್ಲಾನ್ ಆಗಿರುವುದರಿಂದ ಕಠಿಣ ನಿಯಮಗಳನ್ನು ಹಾಕಲು ಡಿಸಿಪಿ ಶ್ರೀನಿವಾಸ ಗೌಡ ಮುಂದಾಗಿದ್ದಾರೆ.

ಕರೋನಾ ಬ್ರೇಕಿಗೆ ಗೈಡ್ ಲೈನ್ಸ್
- ಸೆಲೆಬ್ರೇಶನ್ ವೇಳೆ ಎಲ್ಲರ ಮೇಲೂ ಪಿಕಪ್ ಸ್ಟಾಫ್ ನಿಗ
- ಮಫ್ತಿಯಲ್ಲಿ ಕಾರ್ಯಾಚರಣೆಗೆ ತಂಡಗಳ ರಚನೆ
- ಬ್ರಿಗೇಡ್ ರೋಡ್, ಎಂಜಿ ರೋಡ್ಗಳಲ್ಲಿ ಪ್ರತಿ 100 ಮೀಟರ್ ಗೆ ಕ್ಯಾಂಪ್
- ಅಂಬ್ರೆಲ್ಲಾ ಕ್ಯಾಂಪ್ಗಳ ರಚನೆ
- ಕ್ಯಾಬ್ ಡ್ರೈವರ್ ಗಳಿಗೂ ಗೈಡ್ ಲೈನ್ಸ್
ಇದನ್ನೂ ಓದಿ: https://vijayatimes.com/reecetopley-selected-to-rcb/
ಇಷ್ಟೆಲ್ಲಾ ಕ್ರಮ ಕೈಗೊಂಡರೂ , ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಬರುವ ಸಾಧ್ಯತೆ ಇರುವುದರಿಂದ ಕಠಿಣ ನಿಯಮಗಳನ್ನು ಹಾಕುವ ಸಾಧ್ಯತೆ ಇದೆ. ಒಟ್ಟಾರೆ ಬೆಂಗಳೂರಿನಲ್ಲಿ ಬಿಗಿ ಬಂದೋಬಸ್ತಿಗೆ ಪೊಲೀಸರು ಅಖಾಡಕ್ಕಿಳಿದಿದ್ದಾರೆ.
ರೆಸ್ಟೋರೆಂಟ್ ಪಬ್ಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯ ಮಾಡಲಾಗಿದೆ ಹಾಗೂ ಡ್ರಗ್ಸ್ ಪೆಡ್ಲರ್ಸ್ಗಳ ಮೇಲೂ ನಿಗಾ ಇಡಲಾಗಿದೆ. ಜನರು ಕೂಡ ಸಹಕರಿಸಬೇಕಾಗಿ ಪೊಲೀಸರು ಸೂಚಿಸಿದ್ದಾರೆ.
- ರಶ್ಮಿತಾ ಅನೀಶ್