ಜೈಪುರ, ಮೇ. 20: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಡಿಯಾ (89) ಕೋವಿಡ್‌ನಿಂದ ಬುಧವಾರ ರಾತ್ರಿ ನಿಧನರಾದರು.
ʻಜಗನ್ನಾಥ್ ಪಹಡಿಯ ಅವರ ನಿಧನ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು. ಕೇಂದ್ರ ಸಚಿವರು, ಸಿಎಂ, ರಾಜ್ಯಪಾಲರಾಗಿ ಪಹಡಿಯ ಅವರು ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದ್ದಾರೆʼ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೊಟ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಜಗನ್ನಾಥ್ ಅವರು ಹರಿಯಾಣ, ಬಿಹಾರ್ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಸ್ಥಾನದ ದಲಿತ ಸಮುದಾಯದ ಮೊದಲ ಸಿಎಂ ಆಗಿದ್ದರು.