Chikkaballapur : ಬೆಂಗಳೂರಿನ ಕೇಂಪೇಗೌಡ(Kempegowda) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಅನುಸರಿಸಬೇಕಾದ ಕೋವಿಡ್ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರದ(covid guidelines published) ಸೂಚನೆಯ ಮೇರೆಗೆ ಪ್ರಕಟಿಸಲಾಗಿದೆ.

ಚೀನಾ(China), ಜಪಾನ್, ಕೊರಿಯಾ ಮತ್ತು ಯುಎಸ್ನಲ್ಲಿ ಹೆಚ್ಚುತ್ತಿರುವ ಕೋವಿಡ್(covid guidelines published) ಪ್ರಕರಣಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಕೋವಿಡ್ ಅನ್ನು ಪ್ರಾರಂಭಿಕ ಹಂತದಲ್ಲೇ ನಿಯಂತ್ರಿಸಬೇಕೆಂದು ನಿರ್ಧರಿಸಿರುವ ರಾಜ್ಯ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ದೇಶಾದ್ಯಂತ ನಿರ್ಮಾಣವಾಗಿರುವ ಕೋವಿಡ್ ಭೀತಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದಲ್ಲಿ ಉನ್ನತ ಮ್ಟಟದ ಸಭೆಯನ್ನು ಇತ್ತೀಚೆಗೆ ನಡೆಸಲಾಗಿದೆ.
ಇನ್ನು ಕೋವಿಡ್ ಹೆಚ್ಚುತ್ತಿರುವುದರ ಬಗ್ಗೆ ಪೊಲೀಸ್ ಇಲಾಖೆಯಲ್ಲೂ ಆತಂಕ ಶುರುವಾಗಿದೆ. ಹೊಸವರ್ಷ ಮತ್ತು ಕ್ರಿಸ್ಮಸ್ಹಬ್ಬಗಳ ವೇಳೆ ಜನರನ್ನು ನಿಯಂತ್ರಿಸುವ ದೊಡ್ಡ ಸವಾಲು ಪೊಲೀಸ್ ಇಲಾಖೆಯ ಮೇಲಿದೆ.
https://vijayatimes.com/tajmahal-received-tax-notice/
ಇದನ್ನೂ ನೋಡಿ : https://fb.watch/hCuJRVUyQ2/ IPL ಮಿನಿ ಹರಾಜಿನ ಬಳಿಕ RCB ಯ ಸಂಪೂರ್ಣ ತಂಡ ಹೀಗಿದೆ
ಹೊಸವರ್ಷದ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಕೂಡಾ ಸಭೆ ನಡೆಸಿದ್ದು, ಪೊಲೀಸ್ ಇಲಾಖೆಯೂ ಪ್ರತ್ಯೇಕ ನಿಯಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಏನಿದೆ?
- 12 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಇಲ್ಲ.
- ಶೇಕಡಾ 2ರಷ್ಟು ಪ್ರಯಾಣಿಕರಿಗೆ ರಾಂಡಮ್ ಕೋವಿಡ್ ಟೆಸ್ಟ್ ಕಡ್ಡಾಯ
- ವಿಮಾನ ನಿಲ್ದಾಣಕ್ಕೆ(Airport) ಬರುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

- ಕೋವಿಡ್ರೋಗ ಲಕ್ಷಣಗಳು ಕಂಡುಬರುವ ಪ್ರಯಾಣಿಕರು ತಕ್ಷಣವೇ ಐಸೋಲೇಷನ್ ಗೆ(Isolation) ಒಳಪಡಿಸಬೇಕು.
- ರೋಗ ಗುಣ ಲಕ್ಷಣಗಳು ಕಂಡುಬಂದರೆ ಮಾತ್ರ ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು.
- ರೋಗ ಲಕ್ಷಣಗಳಿಲ್ಲದ ಪ್ರಯಾಣಿಕರು ಸ್ವಯಂ ನಿಗಾವಹಿಸಬೇಕು.
- ವಿದೇಶದಿಂದ ಬರುವ ಪ್ರಯಾಣಿಕರು ತಮ್ಮ ವಿಳಾಸವನ್ನು ನೀಡಬೇಕು.