ಬೆಂಗಳೂರು: ಹೆಚ್ಚಾಗುತ್ತಿರುವ ಕೊರೊನಾ ಕೇಕೆಗೆ ಬ್ರೇಕ್ ಹಾಕಲು ರಾಜ್ಯಸರಕಾರ ಕೊನೇಗೂ ಮುಂದಾಗಿದ್ದು, ಪ್ರತೀ ಭಾನುವಾರದ ಕರ್ಫ್ಯೂವನ್ನು ಮತ್ತೆ ಜಾರಿಗೆ ತರಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಮುಂದಿನ ಭಾನುವಾರ ಅಂದರೆ ಜುಲೈ ಐದರಿಂದ ಭಾನುವಾರದ ಲಾಕ್‌ಡೌನ್ ರಾಜ್ಯದಲ್ಲಿ ಜಾರಿಗೆ ಬರಲಿದೆ. ಈ ಬಗ್ಗೆ ಸರಕಾರ ಶನಿವಾರ ತೀರ್ಮಾನ ಕೈಗೊಂಡಿದೆ.
ಅಲ್ಲದೇ ವಾರಕ್ಕೆ 5 ದಿನ ಕೆಲಸ ನಡೆಯಲಿದ್ದು ಶನಿವಾರ, ಭಾನುವಾರ ರಜೆ ಘೋಷಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ರಾತ್ರಿ ಹೊತ್ತಲ್ಲಿ ಅನಗತ್ಯ ಹೋರಾಟ ತಪ್ಪಿಸಲು ತೀರ್ಮಾನಿಸಿರುವ ಸರಕಾರ ನಾಳೆಯಿಂದಲೇ ಜಾರಿಗೆಬರುವಂತೆ ರಾತ್ರಿ 8ರಿಂದ ಬೆಳಗ್ಗೆ 5ರ ತನಕ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಸಹ ನಿರ್ಧರಿಸಲಾಗಿದೆ.
ಕೊರೊನಾ ನಿಯಂತ್ರಿಸಲು ತಜ್ಞರ ಸಮಿತಿ ಈ ನಿರ್ಧಾರವನ್ನು ಸರಕಾರಕ್ಕೆ ಸಲ್ಲಸಿತ್ತು, ವರದಿ ಪರಿಗಣಿಸಿರುವ ಸರಕಾರ ಕುರಿತು ರಾತ್ರಿ ಹೊತ್ತಿನ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕುವುದರ ಜೊತೆಗೆ ಭಾನುವಾರಗಳಂದು ಸಂಪೂರ್ಣ ನಿರ್ಬಂಧ ಹೇರುವ ನಿರ್ಧಾರ ಕೈಗೊಂಡಿದೆ.