Important News: ಭಾರತದಲ್ಲಿ ಕೋವಿಡ್(Covid) ಸಾಂಕ್ರಾಮಿಕ ರೋಗಕ್ಕೆ ಕೋವಿಶೀಲ್ಡ್(Covi shield) ಲಸಿಕೆಯನ್ನು ನೀಡಬಾರದಿತ್ತು, ಇದರಿಂದ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತಿವೆ ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ (covishield vaccine side effects) ಮೂಲದ ಖ್ಯಾತ ಹೃದ್ರೋಗ ತಜ್ಞ ಡಾ.ಅಸೀಮ್ ಮಲ್ಹೋತ್ರಾ(Dr. Aseem Malhotra) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಮಾದ್ಯಮವೊಂದಕ್ಕೆ(Media) ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಎಮ್ಆರ್‌ಎಎನ್ ಕೋವಿಡ್ -19 ಲಸಿಕೆಗಳಿಗೆ ಹೋಲಿಸಿದರೆ,
ಭಾರತದ ಸೀರಮ್ಇನ್ಸ್‌ಟಿಟ್ಯೂಟ್ ಭಾರತದಲ್ಲೇ ತಯಾರಿಸಲಾದ ಲಸಿಕೆಗಳು ಕಳಪೆ ಗುಣಮಟ್ಟವನ್ನು ಹೊಂದಿವೆ.
ಈ ಲಸಿಕೆಗಳಿಂದ ಹೃದಯಾಘಾತ(Heart attack) ಮತ್ತು ಸ್ಟ್ರೋಕ್ಉಂಟಾಗುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
ಇದನ್ನೂ ಓದಿ: ದಲಿತ ವಿದ್ಯಾರ್ಥಿಗೆ ಕಿರುಕುಳ ಮತ್ತು ತಾರತಮ್ಯ: ಬಾಂಬೆ ಐಐಟಿಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ
ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೂ ಕೋವಿಶೀಲ್ಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡಲು ಅನುಮತಿ ನೀಡಿತ್ತು.
ಆದರೆ ಆರಂಭಿಕ ಹಂತದಲ್ಲೇ ರೋಗಕ್ಕೆ ಲಸಿಕೆ ನೀಡಬಾರದು. ಇದರಿಂದ ಅನೇಕ ಅಡ್ಡಪರಿಣಾಮಗಳು ಉಂಟಾಗುತ್ತವೆ.
ಹೆಚ್ಚು ಲಸಿಕೆ ಕೊಟ್ಟಷ್ಟೂ ಅದರ ಅಡ್ಡಪರಿಣಾಮವೂ ಹೆಚ್ಚಾಗುತ್ತದೆ ಎಂದು ಡಾ. ಅಸೀಮ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಆಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆಯನ್ನು ಬ್ರಿಟನ್(Britain) ಸೇರಿದಂತೆ ಯೂರೋಪಿನ ಅನೇಕ ದೇಶಗಳು ಅದರಿಂದ ಉಂಟಾಗುವ ಅಡ್ಡಪರಿಣಾಮದಿಂದಾಗಿ ತಡೆಹಿಡಿದಿದ್ಧಾಗ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಗೆ ಏಕೆ ಅನುಮೋದನೆ ನೀಡಲಾಯಿತು? ಎಂಬುದು ನನಗೆ ತಿಳಿದಿಲ್ಲ.
ಇನ್ನೂ ಆಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆಯ ಕುರಿತು ಋಣಾತ್ಮಕ ವರದಿಗಳು ಬಂದಿವೆ. 90 ಲಕ್ಷ ಡೋಸ್ ಪಡೆದವರ (covishield vaccine side effects) ಪೈಕಿ 8 ಲಕ್ಷ ಗಂಭೀರ ಅಡ್ಡಪರಿಣಾಮಗಳ ವರದಿಗಳು ಬಂದಿವೆ.

ಇನ್ನು ಭಾರತದಲ್ಲಿ ಈಗಾಗಲೇ ಶೇಕಡಾ 90ರಷ್ಟು ಜನರಿಗೆ ಕೋವಿಡ್ ಬಂದು ಹೋಗಿದ್ದು, ಇನ್ನೂ ಮುಂದೆ ಕೋವಿಶೀಲ್ಡ್ ಲಸಿಕೆಯಾಗಲಿ ಅಥವಾ ಬೂಸ್ಟರ್ ಡೋಸ್(Booster Dose)
ಆಗಲಿ ನೀಡುವ ಅವಶ್ಯಕತೆ ಇಲ್ಲ. ಜನರಲ್ಲಿ ಈಗಾಗಲೇ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಅದರಿಂದಲೇ ಕೋವಿಡ್ ವಿರುದ್ದ ಹೋರಾಟ ನಡೆಸಬಹುದು. ಇದಕ್ಕೆ ಹೆಚ್ಚುವರಿ ಲಸಿಕೆ ಅಗತ್ಯವಿಲ್ಲ.
ಹೆಚ್ಚು ಲಸಿಕೆ ನೀಡಿದಷ್ಟು ಹೆಚ್ಚು ಅಡ್ಡಪರಿಣಾಮಗಳು ಉಂಟಾಗುತ್ತವೆ. ಮುಖ್ಯವಾಗಿ ಹೃದಯದ ಮೇಲೆ ಈ ಲಸಿಕೆಗಳು ಗಂಭೀರ ಪರಿಣಾಮ ಬೀರುತ್ತವೆ ಎಂದು ಡಾ. ಅಸೀಮ್ ಮಲ್ಹೋತ್ರಾ ಹೇಳಿದ್ಧಾರೆ.