Bareilly : ನೇರವಾಗಿ ಗೋಮೂತ್ರ ಕುಡಿಯುವುದರಿಂದ ಆರೋಗ್ಯಕ್ಕೆ ಕುತ್ತು ಎಂದು ದೇಶದ ಪ್ರಮುಖ ಪ್ರಾಣಿ ಸಂಶೋಧನಾ ಸಂಸ್ಥೆಯಾದ ಬರೇಲಿ ಮೂಲದ ಐಸಿಎಆರ್ (ICAR)-ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯು ಸಂಶೋಧನೆಯಿಂದ ಕಂಡುಹಿಡಿದಿದೆ. ಗೋಮೂತ್ರವನ್ನು ನೇರವಾಗಿ ಸೇವಿಸುವುದು ಸೂಕ್ತವಲ್ಲ ಎಂದು ಎಚ್ಚರಿಸಿದೆ.

ತಾಜಾ ಗೋಮೂತ್ರವು ಅತ್ಯಂತ ಸೂಕ್ಷ್ಮ ಬ್ಯಾಕ್ಟೀರಿಯಾವನ್ನು ಹೊಂದಿರುವುದರಿಂದ ಅದನ್ನು ನೇರವಾಗಿ ಸೇವಿಸುವುದು ತುಂಬಾ ಅಪಾಯಕಾರಿ. ಅದಲ್ಲದೆ ಎಮ್ಮೆಯ ಮೂತ್ರದಲ್ಲಿ ಕೆಲವೊಂದು ಸ್ಮೂಕ್ಷಣು ಜೀವಿಗಳು ಹೆಚ್ಚಾಗಿ ಕಂಡು ಬರುತ್ತದೆ ಎಂದು ಇದೆ ಸಂಶೋಧನಾ ವರದಿ ತಿಳಿಸಿದೆ.
ಐಸಿಎಆರ್-ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ಭೋಜ್ ರಾಜ್ ಸಿಂಗ್ (Bhoj Raj Singh) ನೇತೃತ್ವದಲ್ಲಿ ಮೂವರು ಪಿಎಚ್ಡಿ (PHD) ವಿದ್ಯಾರ್ಥಿಗಳು ನಡೆಸಿದ ಅಧ್ಯಯನದಲ್ಲಿ, ಆರೋಗ್ಯವಂತ ಹಸುಗಳು ಮತ್ತು ಎತ್ತುಗಳ ಮೂತ್ರದ ಮಾದರಿಯನ್ನು ಸಂಗ್ರಹ ಮಾಡಿ ಪರೀಕ್ಷಿಸಿದಾಗ, ಕನಿಷ್ಠ 14 ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.
ಇದನ್ನೂ ಓದಿ: https://vijayatimes.com/new-smart-phone/
ಹೊಟ್ಟೆಯ ಭಾಗದಲ್ಲಿ ಸೋಂಕನ್ನು ಉಂಟು ಮಾಡುವಂತಹ ಎಸ್ಚೆರಿಚಿಯಾ ಕೋಲಿ ಕೂಡ ಇರುತ್ತದೆ ಎಂದು ಅಧ್ಯಯನದ ವರದಿ ತಿಳಿಸಿದೆ. ಹಸುಗಳು, ಎಮ್ಮೆಗಳು ಮತ್ತು ಮಾನವರ 73 ಮೂತ್ರದ ಮಾದರಿಗಳ ಅಂಕಿ ಅಂಶಗಳ ವಿಶ್ಲೇಷಣೆಯನ್ನು ಮಾಡಲಾಗಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ರಾಬೋಜ್ ರಾಜ್ ಸಿಂಗ್ ಅವರ ಹೇಳಿಕೆಯನ್ನು ವರದಿ ಮಾಡುವುದರ ಜೊತೆಗೆ ಪೀರ್-ರಿವ್ಯೂಡ್ ಸಂಶೋಧನೆಯ (Peer-reviewed research) ಆವಿಷ್ಕಾರಗಳನ್ನು ಆನ್ಲೈನ್ ಸಂಶೋಧನೆ ವೆಬ್ಸೈಟ್ ರಿಸರ್ಚ್ ಗೇಟ್ ನಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ.

ಬಟ್ಟಿ ಇಳಿಸಿದ ಗೋಮೂತ್ರವು ಮಾನವರ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಹಾಗಾಗಿ ಈ ಸಂಶೋಧನೆಯನ್ನು ಬಟ್ಟಿ ಇಳಿಸಿದ ಮೂತ್ರದ ಮೇಲೆ ಪತ್ತೆ ಮಾಡಲಾಗಿದೆ ಎಂದು IVRI ಮಾಜಿ ನಿರ್ದೇಶಕ ಆರ್ ಎಸ್ ಚೌಹಾಣ್ (RS Chauhan) ತಿಳಿಸಿದ್ದಾರೆ.