ನವದೆಹಲಿ, ಜು. 03: ಕೊರೊನಾ ವೈರಸ್ ವಿರುದ್ಧ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆಯ ಅಂತಿಮ ವಿಶ್ಲೇಷಣೆಯನ್ನು ಭಾರತ್ ಬಯೋಟೆಕ್ ಕಂಪನಿ ಪೂರ್ಣಗೊಳಿಸಿದ್ದು, ಪರಿಣಾಮಕಾರಿತ್ವದ ವಿವರ ಬಿಡುಗಡೆ ಮಾಡಿದೆ.
ಸೌಮ್ಯ ಹಾಗೂ ತೀವ್ರ ರೋಗಲಕ್ಷಣದ ಕೋವಿಡ್ ಪ್ರಕರಣಗಳನ್ನು ತಡೆಯುವಲ್ಲಿ ಲಸಿಕೆಯು ಶೇ 77.8ರಷ್ಟು ಪರಿಣಾಮಕಾರಿಯಾಗಿರುವುದು. ತೀವ್ರವಾದ ರೋಗಲಕ್ಷಣ ತಡೆಯುವುದು ಮತ್ತು ಆಸ್ಪತ್ರೆಗೆ ದಾಖಲಾಗದಂತೆ ಮಾಡುವಲ್ಲಿ ಲಸಿಕೆಯು ಶೇ 93.4ರಷ್ಟು ಪರಿಣಾಮಕಾರಿತ್ವ ಹೊಂದಿದೆ. ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ಬಿ.1.617.2 ವಿರುದ್ಧ ಲಸಿಕೆಯ ಪರಿಣಾಮಕಾರಿತ್ವ ಶೇ 65.2ರಷ್ಟಿದೆ ಎಂದು ಭಾರತ್ ಬಯೋಟೆಕ್ ತಿಳಿಸಿರುವುದಾಗಿ ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಕೋವಿಡ್ ದೃಢಪಟ್ಟ 130 ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು.