ಬೆಂಗಳೂರು, ಏ. 14: ಕನ್ನಡ ಚಿತ್ರರಂಗದ ಕ್ರೇಜಿ಼ ಸ್ಟಾರ್, ಅಭಿಮಾನಿಗಳ ಪಾಲಿನ ರಣಧೀರ ರವಿಚಂದ್ರನ್, ಫ್ಯಾನ್ಸ್ ಗಳ ನಿರೀಕ್ಷೆಯಂತೆ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.
ಅಭಿಮಾನಿಗಳ ಪಾಲಿನ ಪ್ರೇಮ ಲೋಕದ ಸರದಾರ ಸಾಮಾಜಿಕ ಸೋಶಿಯಲ್ ಮೀಡಿಯಾದಿಂದ ದೂರವಿದ್ದರು. ಆದರೆ ಇದೀಗ ಸಾಮಾಜಿಕ ಜಾಲತಾಣಗಳ ಬಳಕೆಗೆ ಎಂಟ್ರಿ ನೀಡಿರುವ ರವಿಚಂದ್ರನ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಮತ್ತು ಯೂಟ್ಯೂಬ್ ನಲ್ಲಿ ಏಕಕಾಲಕ್ಕೆ ಅಧಿಕೃತ ಖಾತೆಗಳನ್ನು ತೆರೆದಿದ್ದಾರೆ.
ಯುಗಾದಿ ಹಬ್ಬದ ಸಂಭ್ರಮದ ಜೊತೆಗೆ ನಟ ರವಿಚಂದ್ರನ್, ಸಾಮಾಜಿಕ ಜಾಲತಾಣಕ್ಕೆ ಎಂಟ್ರಿಕೊಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ‘ಒನ್ ಎಂಡ್ ಒನ್ಲೀ ರವಿಚಂದ್ರನ್’ ಎನ್ನುವ ಹೆಸರಿನಲ್ಲಿ ಟ್ವಿಟ್ಟರ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದಾರೆ.
ಜನರಿಗೆ ಹೊಸ ವಿಚಾರಗಳ ಕುರಿತಾಗಿ ಮಾಹಿತಿ ಮತ್ತು ಜಾಗೃತಿಯನ್ನು ರವಿಚಂದ್ರನ್ ಅವರು ಸೋಶಿಯಲ್ ಮೀಡಿಯಾ ಮೂಲಕವಾಗಿ ಮೂಡಿಸಲಿದ್ದಾರೆ. ಕ್ರೇಜ್ ಸ್ಟಾರ್ ಸೋಶಿಲ್ ಮೀಡಿಯಾಕ್ಕೆ ಎಂಟ್ರಿ ಕೊಟ್ಟಿರುವುದು ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ. ಈಗಾಗಲೇ ಅನೇಕರು ನಟ ರವಿಚಂದ್ರನ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡಿದ್ದಾರೆ.