Bangalore: ರಾಜಧಾನಿಯಲ್ಲಿ ಹೊಸ ವರ್ಷವನ್ನು (New year) ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.ಹಲವು ಕಡೆಗಳಲ್ಲಿ ಪಾರ್ಟಿ (Party), ಮೋಜು, ಮಸ್ತಿ ಜೋರಾಗಿಯೇ ನಡೆದಿದೆ.ಆದರೆ ಈ ಪಾರ್ಟಿಗಳಿಗೆ ಹೋಗಬೇಕಾಗಿದ್ದ ಕೋಟಿ ಕೋಟಿ ಮೌಲ್ಯದ ಡ್ರಗ್ಸ್ (Drugs) ಅನ್ನು ಸಿಸಿಬಿ ಪೊಲೀಸರು (CCB Police) ಭರ್ಜರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.ಸುಮಾರು ಎರಡೂವರೆ ಕೋಟಿ ಮೌಲ್ಯದ ಡ್ರಗ್ಸ್ (Drugs) ಅನ್ನು ಪೊಲೀಸರು ವಶಪಡೆದುಕೊಂಡಿದ್ದಾರೆ.

ಹೊಸ ವರ್ಷ ಅಂದರೆ ಕೇಕ್ (Cake),ಚಾಕೊಲೇಟ್ (Chocolate)ಮತ್ತು ಮದ್ಯ (Alcohol) ಸೇವನೆ ಹೀಗೆ ನಾನಾ ರೀತಿಯಲ್ಲಿ ಆಚರಿಸಲಾಗುತ್ತದೆ.ಆದರೆ ಕೇಕ್ ಪ್ಯಾಕೆಟ್ ಚಾಕೋಲೇಟ್ ಪ್ಯಾಕೆಟ್ ಗಳಲ್ಲಿ ಕೇಕ್ ಮತ್ತು ಚಾಕೊಲೇಟ್ ಬದಲಾಗಿ ಹೈಡ್ರೋ ಗಾಂಜಾ (Hydro Cannabis) ಇವೆ. ಹೊಸ ವರ್ಷದ ಪಾರ್ಟಿಗೆ ಬೆಂಗಳೂರಿನ (Bangalore) ಮೂಲೆ ಮೂಲೆಗೆ ಸೇರಬೇಕಿದ್ದ ಹೈಡ್ರೋ ಗಾಂಜಾವನ್ನು (Hydro Cannabis) ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು (Seized), ಡ್ರಗ್ಸ್ ಮಾಲೀಕನನ್ನು ಕೂಡ ಬಂಧಿಸಿದ್ದಾರೆ (Arrested). ಸುಮಾರು 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಥೈಲ್ಯಾಂಡ್ನಿಂದ (Thailand) ತರಿಸಿದ್ದ ಹೈಡ್ರೋ ಗಾಂಜಾವನ್ನು (Hydro Cannabis) ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ದಾವಣಗೆರೆ ಮೂಲದ ರಕ್ಷಿತ್ ಎಂಬಾತನನ್ನು ಬಂಧಿಸಿ ಆತನ ಮನೆಯಲ್ಲಿ ಪರಿಶೀಲನೆ ಮಾಡಿದ್ದಾರೆ.ಹದಿನಾರು ಕೆಜಿ ಗಾಂಜಾ ಸೊಪ್ಪು ಮತ್ತು ಥೈಲ್ಯಾಂಡ್ನಿಂದ ತರಿಸಿದ್ದ ಸುಮಾರು ಮೂರು ಕೆಜಿ ಹೈಡ್ರೋ ಗಾಂಜಾ ವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಾಹಿತಿ ನೀಡಿದ್ದಾರೆ.ಎಂಡಿಎಂಎ (MDMA), ಎಲ್ಎಸ್ಡಿ (LSD) ಮತ್ತು ಚರಸ್ (Charas) ಎಲ್ಲ ಸೇರಿ ಸುಮಾರು 2.5 ಕೋಟಿ ರೂ. (2.5 crore Rs) ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ.