ಚೆನ್ನೈ ಸೂಪರ್ ಕಿಂಗ್ಸ್‌ನ(Chennai Super Kings) ಹೊಸ ಬ್ಯಾಟಿಂಗ್ ಸೆನ್ಸೇಶನ್ ಶಿವಂ ದುಬೆ(Shivam Dube) ಅವರ ಬ್ಯಾಟಿಂಗ್ ದಾಳಿಗೆ ಸೋತು ಶರಣಾಯಿತು ಆರ್.ಸಿ.ಬಿ(RCB) ತಂಡ. ಹೌದು, ಮಂಗಳವಾರ ನಡೆದ ಟಾಟಾ ಐಪಿಎಲ್ 2022(Tata IPL 2022) ರಲ್ಲಿ ಶಿವಂ ದುಬೆ ಅಜೇಯ 95 ಸ್ಥಿರವಾದ ರನ್ ಗಳಿಸಿದ್ದಕ್ಕಾಗಿ ಎಂ.ಎಸ್ ಧೋನಿಯವರ(MS Dhoni) ಸಹಕಾರ, ಪ್ರೋತ್ಸಾಹ ನನಗೆ ಹೆಚ್ಚಾಗಿ ದೊರೆತಿದೆ. ಸಿಎಸ್‌ಕೆ ಈ ಸೀಸನ್ ನಲ್ಲಿ ಇದೇ ಮೊದಲ ಗೆಲುವನ್ನು ಕಂಡಿತು. 95 ರನ್ ಗಳಿಸಿ ತಂಡಕ್ಕೆ ಆಸರೆಯಾಗಿ, ಗೆಲುವಿಗೆ ಕಾರಣರಾದ ಶಿವಂ ದುಬೆ ಮಾಜಿ ನಾಯಕನ ಸಲಹೆಯ ಮಾತುಗಳನ್ನು ಗೆಲುವಿನ ಸಂಭ್ರಮದಲ್ಲಿ ಹೇಳಿದರು.

ಏಪ್ರಿಲ್ 12 ರಂದು ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನ್ನು ಅನುಭವಿಸಿತು. 2019 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ದುಬೆ, ಈ ಹಿಂದೆ ತಮ್ಮ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಆಟದ ವೈಖರಿಯನ್ನು ಪ್ರದರ್ಶಿಸಿದ್ದಾರೆ. ಆದ್ರೆ ತಮ್ಮ ಪವರ್ ಫುಲ್ ಸ್ಟ್ರೋಕ್ ನೀಡುವಲ್ಲಿ ಯಶಸ್ವಿಯಾಗಿರಲಿಲ್ಲ! ಆದಾಗ್ಯೂ, 28 ವರ್ಷದ ಆಲ್‌ರೌಂಡರ್ ಸಿಎಸ್‌ಕೆಯೊಂದಿಗೆ 4 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡ ನಂತರ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ ಎಂದೇ ಹೇಳಬಹುದು.
217 ಬೃಹತ್ ರನ್ ಟಾರ್ಗೆಟ್ ನೀಡಿದ ಸಿಎಸ್ಕೆ ತಂಡ, ಆರ್.ಸಿ.ಬಿ ತಂಡ ಮೊದಲ 5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಳ್ಳುವ ಮೂಲಕ ಗೆಲುವಿನ ಆಸೆಯನ್ನು ಕಳೆದುಕೊಂಡಿತು. ಗೆಲುವಿಗೆ ಬೇಕಿರುವ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಲು ಅಖಾಡಕ್ಕಿಳಿದ ದಿನೇಶ್ ಕಾರ್ತಿಕ್ಗೆ ಜೊತೆಯಾಗಿ ಯಾರು ಸಾಥ್ ನೀಡಲಿಲ್ಲ. ಹೀಗಾಗಿ ಆರ್.ಸಿ.ಬಿ ಸೋಲಿಗೆ ತಂಡದ ಬ್ಯಾಟಿಂಗ್ ಲೈನ್ ವೈಫಲ್ಯವೇ ಪ್ರಮುಖ ಕಾರಣವಾಯಿತು.