Chikkamaglur : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊಳೆದು ಅರಬ್ಬಿ ಸಮುದ್ರಕ್ಕೆ ಎಸೆದು ಬಿಡಿ. ರಾಜ್ಯದ ಒಂದೂ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಡಿ, ಆಗ ರಾಜಕಾರಣ ಸ್ವಚ್ಛವಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ ರವಿ(CT Ravi controversy statement) ಅವರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಹೇಳಿದ್ದಾರೆ.

ಈ ಕುರಿತು ಚಿಕ್ಕಮಗಳೂರಿನಲ್ಲಿ (Chikmagaluru)ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊಳೆದು ಅರಬ್ಬಿ ಸಮುದ್ರಕ್ಕೆ ಎಸೆಯಿರಿ.
ಕರ್ನಾಟಕ ಬಿಜೆಪಿಗೆ, ಪ್ರಧಾನಿ ಮೋದಿ(Narendra Modi) ಅವರಿಗೆ ಕೊಡುವ ಮೆಜಾರಿಟಿ ಕೊಡಿ, ಸ್ಪಷ್ಟ ಬಹುಮತ ನೀಡಿದರೆ ಈಗ ಇರುವ ಸಣ್ಣ-ಪುಟ್ಟ ದೋಷಗಳು ದೂರವಾಗುತ್ತದೆ.
ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಯಾವುದೇ ಒಂದು ಕ್ಷೇತ್ರದಲ್ಲೂ ಗೆಲ್ಲಲು ಅವಕಾಶ ಕೊಡಬೇಡಿ. ಆಗ ರಾಜಕಾರಣ ಸ್ವಚ್ಛವಾಗುತ್ತದೆ ಎಂದು ಸಿ.ಟಿ ರವಿ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಮಾತ್ರ ಹಿಯಾಳಿಸದ ಸಿ.ಟಿ ರವಿ ಅವರು, ಅಧಿಕಾರಕ್ಕಾಗಿ ಎಲ್ಲಿ ಬೇಕಾದರೂ ಹೋಗುವ ಸಿದ್ಧಾಂತವಿಲ್ಲದ ಜೆಡಿಎಸ್(JDS) ಪಕ್ಷಕ್ಕೂ ಮತ ಹಾಕಬೇಡಿ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008-2018 ನೇ ವರ್ಷದಲ್ಲೂ ಬಹುಮತ ಇರಲಿಲ್ಲ, ಸೇರಿಸಿಕೊಂಡು ಸರ್ಕಾರ ಮಾಡಬೇಕಾಯ್ತು.
ಅಂತಹ ಪರಿಸ್ಥಿತಿ ಮತ್ತೊಮ್ಮೆ ಬರಬಾರದು ಎಂದರೇ ಜನ ಸ್ಪಷ್ಟ ಬಹುಮತ ನೀಡಬೇಕು. ಜೆಡಿಎಸ್ ಬಿಜೆಪಿ ಟೀಂ ಎಂದು ಹೇಳಿದ ಕಾಂಗ್ರೆಸ್ ಪಕ್ಷ 2018 ರಲ್ಲಿ ಮಾಡಿದ್ದೇನು?
ಸರ್ಕಾರ ಹಾಗೂ ಸಂಸತ್ತಿನ ಚುನಾವಣೆಯನ್ನು ಅವರ ಜೊತೆಯೇ ಸೇರಿ ಮಾಡಿದ್ದರು ಎಂದು ಹೇಳುವ ಮುಖೇನ ಸಿದ್ದರಾಮಯ್ಯ(Siddaramaiah) ಅವರಿಗೆ ತಿರುಗೇಟು ನೀಡಿದರು.

ನನ್ನ ಅವಧಿಯಲ್ಲಿ ಅವ್ಯವಹಾರ ನಡೆದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ. ರವಿ (CT Ravi controversy statement) ಅವರು, ನಿಮಗೆ ನೀವೇ ಸತ್ಯಹರಿಶ್ಚಂದ್ರ ಎಂದು ಎಂದಿಗೂ ಸರ್ಟಿಫಿಕೇಟ್ ಕೊಟ್ಟುಕೊಳ್ಳಲಾಗದು.
ಹಾಗಾದರೆ ರಿಡ್ಯೂ ಅಂದರೇನು ಎಂಬುದನ್ನು ಸ್ವಲ್ಪ ಬಿಡಿಸಿ ಹೇಳಿ. ಹಾಸಿಗೆ-ದಿಂಬು ವಿಷಯದಲ್ಲಿ ಹಣ ತಿಂದು ಕೇಸ್ ದಾಖಲಾಗಿದ್ದು ಮರೆತು ಹೋಯಿತೇ? ಸ್ಯಾಂಡ್ ಸ್ಕ್ಯಾಮ್ ನಲ್ಲಿ(Sand scam) ಯಾರು ಭಾಗಿಯಾಗಿದ್ದರು ಎಂದು ಬಿಡಿಸಿ ಹೇಳಬೇಕೆ ಎಂದು ತಿರುಗೇಟು ನೀಡಿದರು.
ಸದ್ಯ ವಿಧಾನಸಭಾ ಚುನಾವಣಾ ಸಮೀಪಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್(Congress) ಮತ್ತು ರಾಜ್ಯ ಬಿಜೆಪಿ(BJP) ನಡುವೆ ಮಾತಿನ ಸಮರ ಬಿರುಸಾಗಿ ನಡೆಯುತ್ತಿದ್ದು, ಸಿದ್ದರಾಮಯ್ಯ ಮತ್ತು ಸಿ.ಟಿ ರವಿ ಅವರ ನಡುವೆ ಏಕವಚನದ ಆರೋಪಗಳು ತೀವ್ರ ಬುಗಿಲೆದ್ದಿವೆ.
ಸಿ.ಟಿ ರವಿ ಅವರು ಪ್ರತಿಬಾರಿಯೂ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎಂದು ಉಲ್ಲೇಖಿಸಿ ಹೇಳುವುದನ್ನು ಖಂಡಿಸಿರುವ ಸಿದ್ದರಾಮಯ್ಯ ಅವರು, ನನಗೆ ಸಿದ್ರಾಮುಲ್ಲಾಖಾನ್ ಎಂದು ಕರೆಯಲು ಅವನ್ಯಾರು? ನಮ್ಮ ಅಪ್ಪ ನನಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟರು! ಇವನು ಯಾರು ನನಗೆ ಹೆಸರಿಡಲು ಎಂದು ಹೇಳುವ ಮೂಲಕ ಸಿ.ಟಿ ರವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.