ನಮ್ಮ ಭಾರತೀಯ ತಂತ್ರಜ್ಞರ ಪರಿಣಿತಿಯನ್ನು ಗಮನಿಸಿ ಸೌದಿ ಅರೇಬಿಯಾ(Saudi Arabia) ಭಾರತೀಯರಿಗೆ ಉದ್ಯೋಗ ನೀಡಿದೆ. ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಅನೇಕ ಅಭಿವೃದ್ದಿ(Developing) ಕಾರ್ಯಗಳಲ್ಲಿ ಭಾರತೀಯ ತಂತ್ರಜ್ಞರ ಪಾತ್ರ ಪ್ರಮುಖವಾದದು. ಕೇವಲ ‘ಭಾರತೀಯರು’ ಎಂಬ ಕಾರಣಕ್ಕೆ ಅವರು ನಮಗೆ ಉದ್ಯೋಗ ನೀಡಿಲ್ಲ. ನಮ್ಮಲ್ಲಿರುವ ಸ್ಕಿಲ್‍ನ ಅವಶ್ಯಕತೆ ಅವರಿಗೂ ಇದೆ ಎಂದು ಬಿಜೆಪಿ ನಾಯಕ(BJP Leader) ಸಿಟಿ ರವಿ(CT Ravi) ಹೇಳಿದರು.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸೌದಿ ಅರೇಬಿಯಾದವರು ತೈಲವನ್ನು ನಮಗೆ ಪುಕ್ಕಟೆಯಾಗಿ ನೀಡುತ್ತಿಲ್ಲ. ಅವರು ನೀಡುವ ತೈಲಕ್ಕೆ ತಕ್ಕ ಬೆಲೆಯನ್ನು ನಾವು ನೀಡುತ್ತಿದ್ದೇವೆ. ಅದೇ ರೀತಿ ಸೌದಿ ಅರೇಬಿಯಾ ‘ಭಾರತೀಯ’ ಎಂಬ ಕಾರಣಕ್ಕೆ ತನ್ನ ದೇಶದಲ್ಲಿ ಉದ್ಯೋಗ ನೀಡಿಲ್ಲ. ಬದಲಾಗಿ ಭಾರತೀಯರಲ್ಲಿರುವ ‘ಸ್ಕಿಲ್’ ಕಾರಣಕ್ಕೆ ಉದ್ಯೋಗ ನೀಡಿದೆ. ಸೌದಿ ಅರೇಬಿಯಾದಲ್ಲಿರುವ ಭಾರತೀಯರು ಸೌದಿಯನ್ನು ತೊರೆದರೆ ಸೌದಿ ಏನಾಗಲಿದೆ ಎಂಬುದನ್ನು ನೀವೇ ಹೇಳಬೇಕು ಎಂದು ವ್ಯಂಗ್ಯವಾಡಿದರು.
ಇನ್ನು ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಮದುವೆಯಾಗಬಹುದು. ಆದರೆ ಮುಸ್ಲಿಂ ಯುವತಿಯನ್ನು ಹಿಂದೂ ಯುವಕ ಮದುವೆಯಾಗುವುದಕ್ಕೆ ಸಾಧ್ಯವಿದೆಯೇ? ಹಾಗೇ ಮದುವೆಯಾದವರು ಅನೇಕರು ಕೊಲೆಯಾಗಿದ್ದಾರೆ. ಪ್ರೀತಿ ‘ಒನ್ ವೇ’ ಆದರೆ ಡೇಂಜರ್. ‘ಟು ವೇ’ ಆದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಪ್ರೀತಿಗೆ ಯಾವುದೇ ಜಾತಿ-ಧರ್ಮಗಳ ಗಡಿಯಿಲ್ಲದೇ ‘ಟು ವೇ’ ಆಗಿದ್ದರೆ ಅಂತ ಪ್ರೀತಿಯನ್ನು ನಾನು ಬೆಂಬಲಿಸುತ್ತೇನೆ. ಆದರೆ ಮುಸ್ಲಿಂ ಯುವಕರು ಧರ್ಮದ ಕಾರಣದಿಂದ ಹಿಂದೂ ಯುವತಿಯರನ್ನು ಮದುವೆಯಾಗುತ್ತಿರುವಾಗ ಕೆಲವರು ನಮಗೆ ಜಾತ್ಯಾತೀತತೆಯ ಪಾಠ ಹೇಳುತ್ತಿದ್ದಾರೆ ಎಂದರು.

ಇನ್ನು ನಮ್ಮ ದೇಶದಲ್ಲಿ ಎಲ್ಲ ಜಾತಿ-ಧರ್ಮಗಳಿಗೂ ದೇವರಗಳಿವೆ. ಎಲ್ಲ ಜಾತಿಗಳ ಅರ್ಚಕರು ಇದ್ದಾರೆ. ವಿಭಜಿಸಿ ನೋಡುವ ಜಾಯಮಾನ ನಮ್ಮದಲ್ಲ. ಆದರೆ ಕೆಲವರು ವಿಭಜನೆ ಮಾಡಿ ನೋಡುತ್ತಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ಮುಸ್ಲಿಂ ದೇಶಗಳು ಕೋಪಗೊಳ್ಳುತ್ತವೆ ಎಂದು ಭಾರತ ಇಸ್ರೇಲ್‍ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಹೊಂದಿರಲಿಲ್ಲ. ಆದರೆ ಇಂದು ಇಸ್ರೇಲ್ ನಮ್ಮ ಅಗತ್ಯ ಪಾಲುದಾರ ದೇಶವಾಗಿದೆ. ಭಾರತ ಕೇವಲ ತನ್ನ ಹಿತಾಸಕ್ತಿಗಾಗಿ ಕೆಲಸ ಮಾಡುತ್ತದೆ. ನಮ್ಮ ವಿದೇಶಾಂಗ ನೀತಿಯೂ ಕೂಡಾ ಭಾರತದ ಹಿತಾಸಕ್ತಿಗಳನ್ನು ಕಾಪಾಡುವುದರ ಕಡೆಗೆ ಹೆಚ್ಚಿನ ಗಮನ ಹರಿಸಿದೆ ಎಂದರು.