ನಾನು 500 ಎಕರೆ ಜಮೀನು ಹೊಂದಿದ್ದೇನೆ ಎಂದು ಕಾಂಗ್ರೆಸ್(Congress) ಆರೋಪಿಸುತ್ತಿದೆ. ಈ ಆರೋಪವನ್ನು ಸಾಬೀತುಪಡಿಸಲು ದಾಖಲೆಗಳನ್ನು ಒದಗಿಸಿದರೆ 500 ಎಕರೆಯಲ್ಲಿ 250 ಎಕರೆ ಜಮೀನನ್ನು ದಾಖಲೆಗಳನ್ನು ಒದಗಿಸಿದವರಿಗೆ ಉಚಿತವಾಗಿ ನೀಡುತ್ತೇನೆ ಎಂದು ಬಿಜೆಪಿಯ(BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi) ಘೋಷಿಸಿದ್ದಾರೆ.

ಈ ರೀತಿಯ ಭ್ರಷ್ಟಾಚಾರ ಆರೋಪ ಮಾಡುವ ಮೂಲಕ ನನ್ನ ತೇಜೋವಧೆ ಮಾಡಲು ಸಾಧ್ಯವಿಲ್ಲ. ಈ ಆರೋಪವನ್ನು ಮಾಡಿರುವ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಕಾನೂನಿನ ಮೂಲಕ ನಿಮಗೆ ಉತ್ತರ ಕೊಡುತ್ತೇನೆ. ಕಾನೂನಿನ ಕಬಂಧ ಬಾಹುಗಳಿಂದ ನೀವು ಮತ್ತು ನಿಮ್ಮ ಜೀ ಹುಜೂರ್ ನಾಯಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನು ನಿಮಗೆ ಸೂಕ್ತ ಪಾಠ ಕಲಿಸಲಿದೆ ಎಂದರು. ಸದ್ಯ ನೀವು ನನ್ನ ವಿರುದ್ದ ಮಾಡಿರುವ ಆರೋಪವನ್ನು ಸಾಬೀತುಪಡಿಸಬೇಕು.
ಆರೋಪ ಮಾಡಿ ಪಲಾಯನ ಮಾಡುವುದಲ್ಲ. ಸೂಕ್ತ ದಾಖಲೆಗಳನ್ನು ಒದಗಿಸದಿದ್ದಲ್ಲಿ, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ದಾಖಲೆಗಳನ್ನು ಒದಗಿಸಿದ ಪುಣ್ಯಾತ್ಮನಿಗೆ ಅರ್ಧದಷ್ಟು ಜಮೀನನ್ನು ದಾನವಾಗಿ ನೀಡುತ್ತೇನೆ ಎಂದು ಸವಾಲು ಹಾಕಿದರು. ಇನ್ನು ಕಾಂಗ್ರೆಸ್ ಪಕ್ಷದ ನಾಯಕನೊರ್ವ ಹೊಲದಲ್ಲಿ ಗುದ್ದಲಿ, ಪಿಕಾಸಿ ಹಿಡಿದು ಕೂಲಿನಾಲಿ ಕೆಲಸ ಮಾಡಿ ನೂರಾರು ಕೋಟಿ ಸಂಪಾದಿಸಿದ್ದಾನೆಯೇ..?!

ಮಾದ್ಯಮಗಳ ಮುಂದೆ ಸತ್ಯ ಹರಿಶ್ಚಂದ್ರನಂತೆ ಮಾತನಾಡುವ ಮಹಾನ್ ಸುಳ್ಳುಗಾರ ಲಕ್ಷ್ಮಣ ತಮ್ಮದೇ ಪಕ್ಷದ ನಾಯಕರ ಬೇನಾಮಿ ಆಸ್ತಿ ಬಗ್ಗೆ ಮಾತನಾಡುವ ಬದಲು ನನ್ನ ಹೆಸರು ಹೇಳಿದ್ದಾರೆ ಎಂದು ದೂರಿದರು.