ಮಾಜಿ ಸಿಎಂ(Former Chiefminsiter) ಸಿದ್ದರಾಮಯ್ಯ(Siddaramaiah) ಸೋನಿಯಾ ಗಾಂಧಿಯ(Sonia Gandhi) ಗುಲಾಮರಾಗಿದ್ದಾರೆ ಎಂದು ಬಿಜೆಪಿಯ(BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi) ಹೇಳಿದರು.

ತುಮಕೂರಿನಲ್ಲಿ(Tumkuru) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡವೇ ಶ್ರೇಷ್ಠ ಅದರಲ್ಲಿ ಯಾವುದೇ ಅನುಮಾನ ಬೇಡ. ನಾವು ಬೇರೆ ಭಾಷೆಯ ಗುಲಾಮರಾಗುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಗೃಹ ಸಚಿವ ಅಮಿತ್ ಹೇಳಿಕೆಯನ್ನು ತಿರುಚಿ ಹೇಳುತ್ತಿದ್ದಾರೆ. ನಿಮ್ಮ ಮಾತೃಭಾಷೆಯನ್ನು ಬಿಟ್ಟು ಹಿಂದಿ ಭಾಷೆಯನ್ನು ಮಾತನಾಡಿ ಎಂದು ಅಮಿತ್ ಶಾ ಹೇಳಿಲ್ಲ. ಎಲ್ಲ ರಾಜ್ಯಗಳು ಅವರ ಪ್ರಾದೇಶಿಕ ಭಾಷೆಗಳನ್ನು ಬಳಸಲು ಅವರು ಆಕ್ಷೇಪ ಎತ್ತಿಲ್ಲ.
ಆದರೆ ಸಂಪರ್ಕ ಭಾಷೆಯಾಗಿ ಬ್ರಿಟಿಷರು ಹೇರಿರುವ ಇಂಗ್ಲಿಷ್ ಭಾಷೆಯ ಬದಲಿಗೆ ನಮ್ಮ ದೇಶದಲ್ಲಿ ಹೆಚ್ಚು ಜನ ಮಾತನಾಡುವ ಹಿಂದಿ ಭಾಷೆಯನ್ನು ಬಳಸಬೇಕೆಂದು ಸೂಚಿಸಿದ್ದಾರೆ. ಬ್ರಿಟಿಷರ ಗುಲಾಮಗಿರಿಯ ಸಂಕೇತವಾಗಿರುವ ಇಂಗ್ಲಿಷ್ ಭಾಷೆಯ ಬದಲಾಗಿ ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಬಳಸಿ, ಆದರೆ ನಿಮ್ಮ ರಾಜ್ಯಗಳಲ್ಲಿ ನಿಮ್ಮ ಮಾತೃಭಾಷೆಯನ್ನೇ ಬಳಸಿ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಅಮಿತ್ ಶಾ ಹೇಳಿಕೆಯನ್ನು ತಿರುಚಿದ್ದಾರೆ. ಕನ್ನಡ ಭಾಷೆಯನ್ನು ಬಿಟ್ಟು ಹಿಂದಿ ಭಾಷೆಯನ್ನೇ ಮಾತನಾಡಿ ಎಂದಿದ್ದರೆ ನಾವು ಧ್ವನಿ ಎತ್ತುತ್ತಿದ್ದೇವು ಎಂದು ಸಿಟಿ ರವಿ ಹೇಳಿದರು.

ಅಮಿತ್ ಶಾ ಮಾತನ್ನು ಸಿದ್ದರಾಮಯ್ಯ ತಿರುಚಿ ಹೇಳುವುದಾರೆ, ಅವರೇ ಸ್ವತಃ ಒಪ್ಪಿಕೊಳ್ಳಬೇಕು. ನಾನು ಇಂಗ್ಲಿಷ್ ಭಾಷೆಯ ಗುಲಾಮ, ಸೋನಿಯಾ ಗಾಂಧಿ ಗುಲಾಮ ಎಂದು ಮೊದಲು ಒಪ್ಪಿಕೊಂಡು ನಂತರ ನಮಗೆ ಪಾಠ ಮಾಡಲಿ ಎಂದು ವ್ಯಂಗ್ಯವಾಡಿದರು. ಇನ್ನು ಪಿಎಸ್ಐ ಪರೀಕ್ಷೆಯನ್ನು ರದ್ದು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಅವರು, ನಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಅಕ್ರಮದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ.
ಅಕ್ರಮವನ್ನು ಮುಚ್ಚಿಹಾಕುವ ಯಾವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಿಲ್ಲ. ಈ ರೀತಿಯ ಪ್ರಕರಣಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕೆಲಸವನ್ನು ಕಾಂಗ್ರೆಸ್ ಬಳಹ ಹಿಂದಿನಿಂದಲೂ ಮಾಡಿದೆ ಎಂದರು.