ಜೀರಿಗೆ (Cumin) ಇಲ್ಲದ ಅಡುಗೆಯಿಲ್ಲ, ಜೀರಿಗೆ ಇರದ ಮನೆಯಿಲ್ಲ. ಮಸಾಲೆ ಪದಾರ್ಥಗಳಲ್ಲಿ (Spices) ಅತಿ ಹೆಚ್ಚು (cumin is a miracle) ಪ್ರಾಮುಖ್ಯತೆ ಪಡೆದ ವಸ್ತುವೆಂದರೆ ಅದು ಜೀರಿಗೆ ಮಾತ್ರ. ಅಡಿಗೆಯ ಒಗ್ಗರಣೆಯಿಂದ ಹಿಡಿದು ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಜೀರಿಗೆ ಪಾತ್ರ ಅಗ್ರ.
ಇವುಗಳಲ್ಲಿ ಥೈಮೊಕ್ವಿನೋನ್ಗೆ (Thymoquinone) ಬ್ರಾಂಕೊಡಿಯಲೇಷನ್ ಗುಣಧರ್ಮವಿದ್ದು, ಶ್ವಾಸಕೋಶದ ಸೂಕ್ಷ್ಮನಾಳಗಳನ್ನು ಹಿಗ್ಗಿಸುವ ಸಾಮರ್ಥ್ಯ ಹೊಂದಿರುವುದರಿಂದ ಆಸ್ತಮಾ ರೋಗಿಗಳಿಗೆ ಒಂದು ರೀತಿಯಲ್ಲಿ ದಿವ್ಯೌಷಧ. ಸಸಾರಜನಕ ಹಾಗೂ 41ರಷ್ಟು ಕೊಬ್ಬಿನ ಅಂಶವಿರುವುದರಿಂದ ಇದನ್ನು ಪೌಷ್ಟಿಕಾಂಶಗಳ (Nutrients) ಆಗರ ಎಂದು ಕರೆಯಬಹುದು.
ಮನುಷ್ಯ ದೇಹಕ್ಕೆ ಅತ್ಯುಪಯುಕ್ತ ಎಂದೇ ಪರಿಗಣಿಸಲಾಗಿರುವ ಒಮೆಗಾ-3 ಆಮ್ಲ (Omega-3 acid) ಕೂಡ ಜೀರಿಗೆಯಲ್ಲಿ ಅಧಿಕ ಪ್ರಮಾಣದಲ್ಲಿ ಲಭ್ಯವಿದೆ.

ಮಧುಮೇಹ, ಕ್ಯಾನ್ಸರ್, ರಕ್ತದೊತ್ತಡ, ಚರ್ಮವ್ಯಾಧಿ, ಹೊಟ್ಟೆಯಲ್ಲಿ ಉಂಟಾಗುವ ಜಂತು ಬಾಧೆ, ವಾತ, ಊತ, ನೆಗಡಿ, ಕೆಮ್ಮು, ನೋವುಗಳು ಅಲ್ಲದೇ ಏಡ್ಸ್ (AIDS) ನಿಯಂತ್ರಣಕ್ಕೆ ಕೂಡ ಜೀರಿಗೆ ಒಳ್ಳೆಯ ಮದ್ದು.ಜೀರ್ಣ ಶಕ್ತಿಯನ್ನು (Digestive power) ಹೆಚ್ಚಿಸುವ ಜೀರಿಗೆ ಆಸಿಡಿಟಿಯನ್ನು ದೂರ ಓಡಿಸುತ್ತದೆ. ಬಾಣಂತಿಯರು ಜೀರಿಗೆ ಹೆಚ್ಚಾಗಿ ಸೇವಿಸಿದರೆ ಎದೆಹಾಲು ವೃದ್ಧಿಸುತ್ತದೆ.ಮಗುವಿಗೆ ಹೊಟ್ಟೆನೋವು (Stomach ache) ಸಹ ಬರುವುದಿಲ್ಲ.
ಇದನ್ನು ಓದಿ: ನಿಂಬೆಯಂತೆ ಸುವಾಸನೆ ಬೀರುವಲೆಮನ್ ಗ್ರಾಸ್ ಅನಾರೋಗ್ಯಕ್ಕೆ ರಾಮಬಾಣ !
ಉದರ ಸಂಬಂಧಿ ಸಮಸ್ಯೆಗಳಿಗೆ (Abdominal problem) ಜೀರಿಗೆ ರಾಮಬಾಣ. ಇನ್ನು ಸಾಕಷ್ಟು ಜನರಿಗೆ ಅಜೀರ್ಣತೆ ಇರುತ್ತದೆ. ಪ್ರತಿದಿನ ಜೀರಿಗೆ ವಾಟರ್ (Cumin Water) ಕುಡಿಯುವ ಅಭ್ಯಾಸ ಮಾಡಿಕೊಂಡರೆ ಹೊಟ್ಟೆಯ ಹಾಗೂ ಕರುಳಿನ ಭಾಗದಲ್ಲಿ ನೀವು ತಿಂದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುವ ಜೀರ್ಣರಸಗಳು (Digestive juices) ಉತ್ಪತ್ತಿಯಾಗುತ್ತವೆ.
ಇದರಿಂದ ಕ್ರಮೇಣವಾಗಿ ನಿಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಹೊಟ್ಟೆಯಲ್ಲಿ ಆಮ್ಲಿಯತೆ, ಗ್ಯಾಸ್ಟ್ರಿಕ್ (Gastric), ಬೆಳಗಿನ ಆರೋಗ್ಯದ ಅಸ್ವಸ್ಥತೆ, ವಾಕರಿಕೆ ಇಂತಹ ಸಮಸ್ಯೆಗಳು ಮಾಯವಾಗುತ್ತವೆ.
ಈಗಾಗಲೇ ಹೆಚ್ಚು ದೈಹಿಕ ತೂಕ ಹೊಂದಿರುವವರು ತಾವು ಮಾಡುವ ಡಯಟ್ ಪದ್ಧತಿಯ ಜೊತೆಗೆ ಜೀರಾ ವಾಟರ್ ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.ಏಕೆಂದರೆ ಇದು ಮೆಟಬಾಲಿಸಂ (Metabolism) ಹೆಚ್ಚಿಸುತ್ತದೆ ಮತ್ತು ತನ್ನ ನಾರಿನಾಂಶದಿಂದ (fiber) ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡಿ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಗೆ ಹಾಕಿ ತೂಕ ನಿಯಂತ್ರಣ ಮಾಡುತ್ತದೆ.
ಇನ್ನು ಜೀರಿಗೆಯಲ್ಲಿ ಪೊಟಾಶಿಯಂ ಹೆಚ್ಚಾಗಿರುತ್ತದೆ. ಹೀಗಾಗಿ ಇದು ಎಲೆಕ್ಟ್ರೋಲೈಟ್ ಬ್ಯಾಲೆನ್ಸ್ (Electrolyte balance) ಮಾಡುವುದರಿಂದ ದೇಹದಲ್ಲಿ ರಕ್ತದ ಒತ್ತಡ ಸುಲಭವಾಗಿ ನಿರ್ವಹಣೆಯಾಗುತ್ತದೆ.ಹೃದಯದ ಕಾಯಿಲೆ (Heart disease) ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೂಡ ಜೀರಾ ವಾಟರ್ ಬೆಸ್ಟ್ ಆಯ್ಕೆ. ಹೃದಯ ಬಡಿತವನ್ನು (cumin is a miracle) ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಹೃದಯದ ಕಾರ್ಯ ಚಟುವಟಿಕೆ ಯನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ.