- ಅನಗತ್ಯ ಸ್ಕ್ಯಾನಿಂಗ್‌ಗೆ ಕಡಿವಾಣ: ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮ
- ಹೊಸ ನಿಯಮಾವಳಿಯಿಂದ ಸಿಟಿ ಸ್ಕ್ಯಾನಿಂಗ್ 76% ಕಡಿಮೆ, ಸಾರ್ವಜನಿಕ ಹಣದ ಸಮರ್ಪಕ ಬಳಕೆ
- ಪರಿಶೀಲನಾ ಕ್ರಮಗಳಿಂದ ಸ್ಕ್ಯಾನಿಂಗ್ ಪ್ರಮಾಣ ಗಣನೀಯ ಇಳಿಕೆ: ಏಳು ಸರ್ಕಾರಿ ಆಸ್ಪತ್ರೆಗಳಲ್ಲಿ(CUT DOWN ON CT – MIR SCANNING ) ಹೊಸ ಎಂಆರ್‌ಐ ಯಂತ್ರಗಳಿಗೆ ಟೆಂಡರ್
Bengaluru: ರಾಜ್ಯದಲ್ಲಿ ಆರೋಗ್ಯ ಚಿಕಿತ್ಸೆ ಹೆಸರಿನಲ್ಲಿ ನಡೆಯುತ್ತಿದ್ದ ಅನಗತ್ಯ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಸರ್ಕಾರ ಕಟ್ಟುನಿಟ್ಟಿನ ನಿಯಮಾವಳಿ ಜಾರಿಗೆ ತಂದಿದ್ದು, ಇದರಿಂದ ಕಳೆದ ಒಂದೂವರೆ ವರ್ಷಗಳಲ್ಲಿ ಸಾರ್ವಜನಿಕ ಹಣದಲ್ಲಿ ಸುಮಾರು 200 ಕೋಟಿ ರೂಪಾಯಿ ಉಳಿಕೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸೇವೆಯಲ್ಲಿ ಪಾರದರ್ಶಕತೆ ಹಾಗೂ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವ ಮೂಲಕ ಅನಗತ್ಯ ವೆಚ್ಚವನ್ನು ತಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಗತ್ಯವಿರುವ ರೋಗಿಗಳಿಗೆ ಮಾತ್ರ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಸಿಟಿ ಮತ್ತು ಎಂಆರ್‌ಐ ಸೇವೆ ನೀಡುತ್ತಿದ್ದ Krsnaa Diagnostics Ltd ಸಂಸ್ಥೆ ಸರಿಯಾದ ದಾಖಲೆ ನಿರ್ವಹಣೆ ಮತ್ತು ದೃಢೀಕರಣ ಕ್ರಮಗಳನ್ನು ಸಮರ್ಪಕವಾಗಿ ಅನುಸರಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ 2024ರ ಆಗಸ್ಟ್ 30ರಂದು ಸರ್ಕಾರ ಹೊಸ ನಿಯಮಾವಳಿ ಮತ್ತು ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತಂದಿತು.
ಹೊಸ ನಿಯಮದ ಪ್ರಕಾರ, ಸ್ಕ್ಯಾನಿಂಗ್ ಅಗತ್ಯವಿರುವ ಪ್ರಕರಣಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.( CUT DOWN ON CT – MIR SCANNING ) ವೈದ್ಯಕೀಯ ಅವಶ್ಯಕತೆಯ ದೃಢೀಕರಣದ ಬಳಿಕವೇ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಯುವಂತೆ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
ಅಂಕಿಅಂಶಗಳ ಪ್ರಕಾರ, 2024ರ ಏಪ್ರಿಲ್‌ನಿಂದ ಜುಲೈವರೆಗೆ ಒಟ್ಟು 98,311 ಸಿಟಿ ಸ್ಕ್ಯಾನಿಂಗ್ ನಡೆದಿದ್ದು, ಇದಕ್ಕೆ 15.24 ಕೋಟಿ ರೂಪಾಯಿ ವೆಚ್ಚವಾಗಿದೆ.
ಆದರೆ ಹೊಸ ನಿಯಮಾವಳಿ ಜಾರಿಯಾದ ನಂತರ 2024ರ ಆಗಸ್ಟ್‌ನಿಂದ ನವೆಂಬರ್‌ವರೆಗೆ ಸ್ಕ್ಯಾನಿಂಗ್ ಸಂಖ್ಯೆ 76,217ಕ್ಕೆ ಇಳಿದು, ವೆಚ್ಚ 11.81 ಕೋಟಿ ರೂಪಾಯಿಗೆ ಕುಸಿತ ಕಂಡಿದೆ.
ನಂತರ ಡಿಸೆಂಬರ್ 2024ರಿಂದ 2025ರ ಮಾರ್ಚ್ ಅವಧಿಯಲ್ಲಿ ಸ್ಕ್ಯಾನಿಂಗ್ ಪ್ರಮಾಣ ಗಣನೀಯವಾಗಿ ತಗ್ಗಿ 23,426ಕ್ಕೆ ಇಳಿದಿದ್ದು, ವೆಚ್ಚ ಕೇವಲ 3.36 ಕೋಟಿ ರೂಪಾಯಿಗೆ ಸೀಮಿತವಾಗಿದೆ.
ಒಟ್ಟು ಸಿಟಿ ಸ್ಕ್ಯಾನಿಂಗ್ (City scanning) ಪ್ರಮಾಣದಲ್ಲಿ 76.18 ಶೇಕಡಾ ಮತ್ತು ಎಂಆರ್‌ಐನಲ್ಲಿ 64.32 ಶೇಕಡಾ ಇಳಿಕೆ ದಾಖಲಾಗಿದೆ. ಇದರಿಂದ ಅನಗತ್ಯ ಸ್ಕ್ಯಾನಿಂಗ್‌ಗಳಿಗೆ ಕಡಿವಾಣ ಬಿದ್ದಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರದ ಪ್ರಕಾರ, ಈ ನಿಯಂತ್ರಣ ಕ್ರಮಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಹಣದ ಸಮರ್ಪಕ ಬಳಕೆ ಸಾಧ್ಯವಾಗಿದೆ.
ಸಾರ್ವಜನಿಕರ ತೆರಿಗೆ ಹಣವನ್ನು ಅನಗತ್ಯ ಚಿಕಿತ್ಸೆಗೆ ಬಳಸದೇ, ಅಗತ್ಯವಿರುವ ಕಡೆಗೆ ಮರುಹಂಚಿಕೆ ಮಾಡುವ ಅವಕಾಶ ಸಿಕ್ಕಿದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಈಗ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ನಿಗಾ ವಹಿಸಿ ಪರಿಶೀಲಿಸುತ್ತಿದ್ದಾರೆ.
ಇದರಿಂದ ರೋಗಿಗಳಿಗೆ ಯಾವುದೇ ತೊಂದರೆ ಆಗದೆ, ಗುಣಮಟ್ಟದ ಸೇವೆ ಒದಗಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಸಚಿವರು ಹೇಳಿದರು.
ಅಗತ್ಯವಿರುವವರಿಗೆ ತ್ವರಿತ ಸ್ಕ್ಯಾನಿಂಗ್ ಸೇವೆ ದೊರಕುವಂತೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಲಾಗಿದೆ.
ಇದರ ಜೊತೆಗೆ, ಕೇಂದ್ರ ಸರ್ಕಾರದಿಂದ ಬರಬೇಕಾದ National Health Mission (NHM) ಅನುದಾನದಲ್ಲಿ ವಿಳಂಬವಾದರೂ, ರಾಜ್ಯದಲ್ಲಿ ಆರೋಗ್ಯ ಸೇವೆಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಈಗಾಗಲೇ ಏಳು ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಹಾಗೂ ಮೂರು ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಯಂತ್ರಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ.
ಶೀಘ್ರದಲ್ಲೇ ಸುಧಾರಿತ ಯಂತ್ರೋಪಕರಣಗಳನ್ನು ಪೂರೈಸುವ ಮೂಲಕ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸೇವೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ.
ಈ ಕ್ರಮಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಪಾರದರ್ಶಕತೆ ಹೆಚ್ಚುವ ಜೊತೆಗೆ, ಸಾರ್ವಜನಿಕರಿಗೆ ಸಮರ್ಪಕ ಮತ್ತು ಸಮಾನ ಸೇವೆ ದೊರಕುವಂತಾಗಲಿದೆ ಎಂಬ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.
ಇದನ್ನು ಓದಿ : https://vijayatimes.com/put-down-mobile-grab-a-book/