Bengaluru: ಕ್ರೆಡಿಟ್ ಕಾರ್ಡ್ (Credit Card) , ಡೆಬಿಟ್ ಕಾರ್ಡ್ (Debit card) ಆಯ್ತು. ಕೋರಿಯರ್, ಪೊಸ್ಟ್ (Post) ,ಕರೆ (Calls) , ಮೆಸೇಜ್ ಗಳ (Messages) ಮೂಲಕವೆಲ್ಲ ಹಣ ದೋಚಿದ ಸೈಬರ್ (Money robbery cyber) ವಂಚಕರು ಇದೀಗ ಸಂಚಾರಿ ವ್ಯವಸ್ಥೆಯ ಬಳಸಿಕೊಂಡು ಜನರ ಹಣವನ್ನು ಕದಿಯಲು ಪ್ರಯತ್ನವನ್ನು ನಡೆಸುತ್ತಾರೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ದಂಡ ಮೊತ್ತವನ್ನು ಪಾವತಿ ಮಾಡಿ ಎಂದು ನಕಲಿ ಕರೆಗಳು (Fake Calls) ಬರುತ್ತಿವೆ. ಆದ್ದರಿಂದ ನಗರ ಸಂಚಾರಿ ಪೊಲಿಸರು ಈ ಕುರಿತು ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಕರೆ ಮಾಡಿದ್ದು ಪೋಲಿಸರು ಎಂದು ನಂಬಿ ವೈಯಕ್ತಿಕ ಮಾಹಿತಿಯನ್ನು (Personal Detals) ಒದಗಿಸಬೇಡಿ ಅಥವಾ ಹಣ ಪಾವತಿಯನ್ನು ಮಾಡಬೇಡಿ. ನಮ್ಮ ಇಲಾಖೆಯನ್ನು (Department) ನೇರವಾಗಿ ಸಂಪರ್ಕಿಸಿ ಎಂದು ಕರೆ ನೀಡಿದ್ದಾರೆ. ಇನ್ನು ಈ ಕುರಿತಾಗಿ ಸಂಚಾರಿ ಪೊಲೀಸರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ನಕಲಿ ಕರೆಗಳು (Fake Calls) ಮತ್ತು ದುರುದ್ದೇಶಪೂರಿತ ಲಿಂಕ್‌ಗಳ (Malicious links) ಬಗ್ಗೆ ಜಾಗರೂಕರಾಗಿರಿ ಎಂದು ಹೇಳಿದ್ದಾರೆ. ಬೆಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ಎಂದು ಹೇಳಿಕೊಳ್ಳುವ ನಕಲಿ ಕರೆಗಳು ಮತ್ತು ಸಂದೇಶಗಳ (Calls and messages) ಬಗ್ಗೆ ಸಂಚಾರ ಪೊಲೀಸ್ ಇಲಾಖೆಗೆ ಹಲವಾರು ದೂರುಗಳು ಬರುತ್ತಿವೆ. ಈ ಕರೆಗಳು ಮತ್ತು ಸಂದೇಶಗಳು ನಾಗರೀಕರನ್ನು ಮೋಸಗೊಳಿಸಲು ಮತ್ತು ವೈಯಕ್ತಿಕ ಮಾಹಿತಿ ಅಥವಾ ಹಣವನ್ನು ದೋಚಲು ವಾಮಮಾರ್ಗದಲ್ಲಿ ಪಯತ್ನಿಸುತ್ತಿವೆ ಎಂದು ತಿಳಿಸಿದ್ದಾರೆ.
*ಹೊಸ ನಂಬರ್ ಗಳಿಂದ ಕರೆಗಳು ಅಥವಾ ಸಂದೇಶಗಳು ಬಂದರೆ ಪ್ರತಿಕ್ರಿಯಿಸಬೇಡಿ. (Do not respond to calls or messages from new numbers.)
* ಅನುಮಾನಾಸದ ಲಿಂಕ್‌ಗಳ ಮೇಲೆ ಕ್ಲಿಕ್, ಡೌನ್‌ಲೋಡ್ ಮಾಡಬೇಡಿ (Do not download, click on suspicious links)
* ವೈಯಕ್ತಿಕ ಮಾಹಿತಿಯನ್ನು ಒದಗಿಸಬೇಡಿ, ಹಣ ಪಾವತಿಸಬೇಡಿ (Do not provide personal information, do not pay)
* ನಮ್ಮ ಇಲಾಖೆಯನ್ನು ನೇರವಾಗಿ ಸಂಪರ್ಕಿಸುವ ಮೂಲಕ ಕರೆಗಳು ಅಥವಾ ಸಂದೇಶಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ. (Check the authenticity of calls or messages by contacting our department directly.)
* ಅಧಿಕೃತ ವೆಬ್‌ಸೈಟ್ ಅಥವಾ ಸಹಾಯವಾಣಿ ಸಂಖ್ಯೆಗಳಲ್ಲಿ (080-22868550/22868444) ದೂರುಗಳನ್ನು ದಾಖಲಿಸಿ. (File complaints on official website or helpline numbers (080-22868550/22868444)
* ಮಾಹಿತಿಯನ್ನು ಒದಗಿಸುವ ಮೊದಲು ಅಧಿಕಾರಿಗಳ ಗುರುತುಗಳನ್ನು ಪರಿಶೀಲಿಸಿ. (Check the identity of the authorities before providing the information.)
* ದಂಡ ಅಥವಾ ಸೇವೆಗಳಿಗಾಗಿ, ದಂಡ ಪಾವತಿಗಾಗಿ ಅಧಿಕೃತ ವೆಬ್‌ಸೈಟ್‌ಗಳನ್ನು ಬಳಸಿ. (For fines or services, use official websites for fine payment.)
- ಒಂದು ವೇಳೆ ನೀವು ಯಾವುದೇ ಅನುಮಾನಾಸ್ಪದ ಕರೆಗಳು (Suspicious calls) ಅಥವಾ ಸಂದೇಶಗಳನ್ನು ಸ್ವೀಕರಿಸಿದರೆ, ತಕ್ಷಣ Dacpplanningoffice@gmail.com ಗೆ ವರದಿ ಮಾಡಿ. ಸುರಕ್ಷಿತವಾಗಿರಿ, ಜಾಗರೂಕರಾಗಿರಿ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.