- ಐಪಿಎಲ್ ಬೆಟ್ಟಿಂಗ್ ಪ್ರಮೋಷನ್ ಮಾಡಿದ ಇನ್ಫ್ಲುಯೆನ್ಸ್ರ್ಸ್ಗೆ ನೋಟೀಸ್ (Cyber Police Warn Influencers)
- ಇನ್ಸ್ಟಾ ಸ್ಟೋರಿಯಲ್ಲಿ ಬೆಟ್ಟಿಂಗ್ ಪ್ರಮೋಷನ್ ಮಾಡದಂತೆ ವಾರ್ನಿಂಗ್
- ಜನರ ಹಾದಿ ತಪ್ಪಿಸದಂತೆ 40 ಕ್ಕೂ ಹೆಚ್ಚು ಇನ್ಫ್ಲುಯೆನ್ಸ್ರ್ಸ್ ಗೆ ಎಚ್ಚರಿಕೆ
Bengaluru: ಕಳೆದ ಕೆಲ ದಿನಗಳಿಂದ ಐಪಿಎಲ್ ಮ್ಯಾಚ್ (IPL match) ಆರಂಭವಾಗಿದೆ. ಅದರ ಬೆನ್ನಲ್ಲೇ ಬೆಟ್ಟಿಂಗ್ಗಳು (Betting) ಕೂಡ ಜೋರಾಗಿ ನಡೆಯುತ್ತವೆ. ಕೇವಲ ಮ್ಯಾಚ್ ಯಾರು ವಿನ್ ಆಗುತ್ತಾರೆ ಎಂಬುದರ ಮೇಲೆ ಮಾತ್ರ ಬೆಟ್ಟಿಂಗ್ ನಡೆಯೋದಿಲ್ಲ. ಯಾರು ಟಾಸ್ ಗೆಲ್ಲುತ್ತಾರೆ, ಯಾವ ಓವರ್ನಲ್ಲಿ ಎಷ್ಟು ರನ್ ಬರುತ್ತದೆ ಈ ರೀತಿ ಹಲವು ರೀತಿಗಳಲ್ಲಿ ಬೆಟ್ಟಿಂಗ್ ಮಾಡಲಾಗುತ್ತದೆ.
ಈಗ ಈ ರೀತಿಯ ಬೆಟ್ಟಿಂಗ್ಗಳನ್ನು ಪ್ರಮೋಷನ್ (Betting promotions) ಮಾಡುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಸೈಬರ್ ಕ್ರೈಮ್ ಪೊಲೀಸರು (Cybercrime police) ಬಿಸಿ ಮುಟ್ಟಿಸಿದ್ದಾರೆ. ನೋಟಿಸ್ ಕೊಟ್ಟು ಎಚ್ಚರಿಕೆ ನೀಡಿದ್ದಾರೆ. ಇದು ಮರುಕಳಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ವಾರ್ನಿಂಗ್ (Warning) ನೀಡಿದ್ದಾರೆ.
ಒಂದಿಷ್ಟು ವೀಡಿಯೊಗಳನ್ನು ಮಾಡಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು (Social media influencers) ಎನಿಸಿಕೊಂಡಿರೋ ವರುಣ್ ಆರಾಧ್ಯ, ಸೋನುಗೌಡ, ಶಿಲ್ಪಾಗೌಡ, ದೀಪಕ್ ಗೌಡ ಸೇರಿ 40ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಸೈಬರ್ ಕ್ರೈಂ ಪೊಲೀಸರಿಂದ ವಾರ್ನಿಂಗ್ ಸಿಕ್ಕಿದೆ.

ಇವರ ಇನ್ಸ್ಟಾಗ್ರಾಂ (Instagram) ಚಟುವಟಿಕೆಗಳನ್ನು ನೋಡಿ ಈ ವಾರ್ನಿಂಗ್ ನೀಡಲಾಗಿದೆ.ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ (Instagram Story) ಇವರುಗಳು ಬೆಟ್ಟಿಂಗ್ ಪ್ರಮೋಷನ್ ಮಾಡುತ್ತಿದ್ದರು. ಯಾವ ಟೀಂ ಗೆಲ್ಲುತ್ತದೆ, ಯಾವ ಟೀಮ್ ಟಾಸ್ ಗೆಲ್ಲುತ್ತದೆ, ಯಾವ ಟೀಂ ಸೋಲುತ್ತದೆ ಎಂದು ಮಾಹಿತಿ ತಿಳಿಸೋ ವಾಟ್ಸಾಪ್ ಗ್ರೂಪ್ಗಳ (WhatsApp groups) ಲಿಂಕ್ ಹಾಕಿ ಅದಕ್ಕೆ ಜಾಯಿನ್ ಆಗುವಂತೆ ಹಿಂಬಾಲಕರ ಬಳಿ ಕೋರುತ್ತಿದ್ದರು.
ಬೆಟ್ಟಿಂಗ್ ಬುಕ್ಕಿಗಳು ನೀಡೋ ಡೀಟೆಲ್ಸ್ ಮೇರೆಗೆ ಸ್ಟೋರಿ ಹಾಕಲಾಗುತ್ತಿತ್ತು ಅದನ್ನು ಜನ ಫಾಲೋ ಮಾಡಬೇಕಿತ್ತು.ಅದರಿಂದ ಹಣ ಕಳೆದುಕೊಳ್ಳುವ ಸಂಭವ ಹೆಚ್ಚಾಗಿದ್ದ ಕಾರಣದಿಂದಾಗಿ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ಕೂಲಿಂಗ್ ಉತ್ಪನ್ನಗಳ ಬೆಲೆಯೂ ಏರಿಕೆ: ಖರೀದಿಗೂ ಮುನ್ನವೇ ಬೆವರುತ್ತಿರುವ ಗ್ರಾಹಕರು
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಯಾವುದೇ ಬ್ರ್ಯಾಂಡ್ ಪ್ರಮೋಟ್ (Promote the brand) ಮಾಡಿದರೂ ಸಾಕಷ್ಟು ಹಣ ಪಡೆಯುತ್ತಾರೆ. (Cyber Police Warn Influencers) ಅದೇ ರೀತಿ ಇವರುಗಳು ಕೂಡ ಪ್ರತಿ ಇನ್ಸ್ಟಾಗ್ರಾಮ್ ಸ್ಟೋರಿಗೆ ಸಾವಿರದಿಂದ ಐದು ಸಾವಿರ ರೂಪಾಯಿ ತನಕ ಹಣ ಪಡೆದಿದ್ದರು. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ (Social media) ಸೈಬರ್ ಪೊಲೀಸರು ಗಮನಿಸಿದ್ದರು.
ಇನ್ಸ್ಟಾಗ್ರಾಮ್ ಚಟುವಟಿಕೆ ಗಮನಿಸಿರುವ ಪೊಲೀಸರು ಕರೆ ಮಾಡಿ ಇವರುಗಳನ್ನು ವಿಚಾರಣೆಗೆ (Inquiry) ಪೊಲೀಸರು ಕರೆದಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಜನ ರೀಲ್ಸ್ ಇನ್ಫ್ಲುಯೆನ್ಸರ್ಗಳ ವಿಚಾರಣೆ ನಡೆದಿದೆ ಎನ್ನಲಾಗಿದೆ. ಇಲ್ಲಿ ಕೇವಲ ಬೆಂಗಳೂರಿನವರು ಮಾತ್ರ ಇಲ್ಲ. ಮಂಗಳೂರು, ಮಂಡ್ಯ, ಹುಬ್ಬಳ್ಳಿ ಎಲ್ಲಾ ಜಿಲ್ಲೆಗಳ ಇನ್ಫ್ಲುಯೆನ್ಸರ್ಗಳನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಇನ್ಮುಂದೆ ಬೆಟ್ಟಿಂಗ್ ಪ್ರಮೋಷನ್ (Betting Promotion) ಮಾಡದಂತೆ ಖಡಕ್ ವಾರ್ನ್ ಮಾಡಿ ಕಳುಹಿಸಲಾಗಿದೆ.