ವಾಣಿಜ್ಯ ಗ್ಯಾಸ್ ಅಭಾವ: ದುಪ್ಪಟ್ಟು (Cylinders sold at high price) ದರಕ್ಕೆ ಸಿಲಿಂಡರ್ ಮಾರಾಟ
1,700 ರೂ. ಸಿಲಿಂಡರ್ 3,600 ರೂ.ಗೆ ಏರಿಕೆ; ಸಂಕಷ್ಟದಲ್ಲಿ ಹೋಟೆಲ್ ಮಾಲೀಕರು
ಗ್ಯಾಸ್ ಅಭಾವದಿಂದ ಆಹಾರ ದರ ಏರಿಕೆ ಭೀತಿ
Bengaluru: ರಾಜ್ಯದಲ್ಲಿ ವಾಣಿಜ್ಯ ಗ್ಯಾಸ್ ಅಭಾವ ದಿನದಿಂದ ದಿನಕ್ಕೆ ಗಂಭೀರ (Cylinders sold at high price) ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ.
ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಮರ್ಷಿಯಲ್ ಗ್ಯಾಸ್ (Commercial Gas) ಪೂರೈಕೆ ಆಗದ ಹಿನ್ನೆಲೆ, ಹೋಟೆಲ್ ಮಾಲೀಕರು ಖಾಸಗಿ ಏಜೆನ್ಸಿಗಳಿಂದ ದುಪ್ಪಟ್ಟು ದರಕ್ಕೆ ಸಿಲಿಂಡರ್ ಖರೀದಿಸಲು ಮುಂದಾಗಿದ್ದಾರೆ .
ಯುದ್ಧ ಪರಿಸ್ಥಿತಿಯ ಪರಿಣಾಮದಿಂದ ಗ್ಯಾಸ್ ಪೂರೈಕೆ ಮತ್ತು ಇಂಧನ ಸಂಬಂಧಿತ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರ ನೇರ ಪರಿಣಾಮವಾಗಿ ಸಿಲಿಂಡರ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಈ ಪರಿಸ್ಥಿತಿಯಿಂದ ಹೋಟೆಲ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

17 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಮೊದಲು ಸುಮಾರು 1,700 ರೂ. ಇದ್ದು, ಈಗ ಅದೇ ಸಿಲಿಂಡರ್ ಬೆಲೆ 3,600 ರೂ.ವರೆಗೆ ಏರಿಕೆಯಾಗಿದೆ.
ಖಾಸಗಿ ಏಜೆನ್ಸಿಗಳು ದುಪ್ಪಟ್ಟು ದರಕ್ಕೆ ಸಿಲಿಂಡರ್ ಮಾರಾಟ ಮಾಡುತ್ತಿರುವುದಕ್ಕೆ ಹೋಟೆಲ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದಿಂದ ಕೇವಲ 33 ಶೇಕಡಾ ಸಿಲಿಂಡರ್ ಮಾತ್ರ ಪೂರೈಕೆ ಆಗುತ್ತಿದ್ದು, ಅದು ಕೂಡ ಸಮಯಕ್ಕೆ (Cylinders sold at high price) ಸರಿಯಾಗಿ ಸಿಗುತ್ತಿಲ್ಲ ಎಂದು
ಹೋಟೆಲ್ ಉದ್ಯಮಿಗಳು ಆರೋಪಿಸಿದ್ದಾರೆ. ಇದರಿಂದ ಸಣ್ಣ ಹೋಟೆಲ್‌ಗಳು ಮತ್ತು ಪಿಜಿಗಳು ಹೆಚ್ಚಿನ ಸಂಕಷ್ಟ ಎದುರಿಸುತ್ತಿವೆ.
ಗ್ಯಾಸ್ ಅಭಾವದ ಕಾರಣದಿಂದ ಹೋಟೆಲ್‌ಗಳಲ್ಲಿ ಆಹಾರದ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಕೆಲವು ಹೋಟೆಲ್‌ಗಳು ತಿಂಡಿಗಳ ಮತ್ತು ಊಟದ ಬೆಲೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿವೆ.
ಗ್ಯಾಸ್ ದರ ಏರಿಕೆ, ತರಕಾರಿ ಬೆಲೆ ಏರಿಕೆ, ವಿದ್ಯುತ್ ವೆಚ್ಚ ಹೆಚ್ಚಳ ಇವೆಲ್ಲವೂ ಸೇರಿ ಹೋಟೆಲ್ ಉದ್ಯಮದ ಮೇಲೆ ಭಾರೀ ಹೊರೆ ಉಂಟುಮಾಡಿವೆ.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಹೋಟೆಲ್ ನಡೆಸುವುದು ಕಷ್ಟವಾಗುತ್ತದೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ, ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ರಬ್ಬರ್ ಬೆಲೆ ಏರಿಕೆಯ ಪರಿಣಾಮ ವಾಹನಗಳ ಟೈಯರ್‌ಗಳ ದರದಲ್ಲೂ ಏರಿಕೆ ಕಂಡುಬಂದಿದೆ.
ಬಸ್ ಟೈಯರ್ ದರ 30 ಸಾವಿರದಿಂದ 31 ಸಾವಿರಕ್ಕೆ, ಲಾರಿ ಟೈಯರ್ 25 ಸಾವಿರದಿಂದ 26 ಸಾವಿರಕ್ಕೆ, ಕಾರು ಟೈಯರ್ 3,500 ರಿಂದ 3,700ಕ್ಕೆ ಮತ್ತು ದ್ವಿಚಕ್ರ ವಾಹನ ಟೈಯರ್ 1,200 ರಿಂದ 1,300ಕ್ಕೆ ಏರಿಕೆಯಾಗಿದೆ. ಇದರಿಂದ ಸಾರಿಗೆ ಕ್ಷೇತ್ರಕ್ಕೂ ಹೆಚ್ಚುವರಿ ಹೊರೆ ಉಂಟಾಗಿದೆ.
ಒಟ್ಟಾರೆ, ಅಂತರರಾಷ್ಟ್ರೀಯ ಯುದ್ಧದ ಪರಿಣಾಮ ರಾಜ್ಯದ ಜನಜೀವನದ ಮೇಲೂ ಪರಿಣಾಮ ಬೀರುತ್ತಿದ್ದು, ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದೆ.
ಗ್ಯಾಸ್, ಟೈಯರ್, ಇಂಧನ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರು ಆರ್ಥಿಕ ಒತ್ತಡ ಅನುಭವಿಸುತ್ತಿದ್ದಾರೆ.
ಸರ್ಕಾರ ತಕ್ಷಣ ಕ್ರಮ ಕೈಗೊಂಡು ಗ್ಯಾಸ್ ಪೂರೈಕೆ ಹೆಚ್ಚಿಸಿದರೆ ಮಾತ್ರ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂಬುದು ಹೋಟೆಲ್ ಮಾಲೀಕರ ಅಭಿಪ್ರಾಯವಾಗಿದೆ.
ಇದನ್ನು ಓದಿ : https://vijayatimes.com/petrol-diesel-excise-duty-cut/