Bengaluru : ಕನ್ನಡ ಚಲನಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್(Box office Sulthan) ದರ್ಶನ್(D Boss Darshan) ಅವರು ಇಂದು ತಮ್ಮ 46ನೇ ಹುಟ್ಟುಹಬ್ಬವನ್ನು (D Boss Darshan birthday) ಆಚರಿಸಿಕೊಳ್ಳುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕೊರೋನಾ ಮತ್ತು ಪುನೀತ್ ರಾಜಕುಮಾರ(Punith Rajkumar) ಅವರ ಸಾವಿನ ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಸರಳತೆ ಮೆರೆದಿದ್ದ,
ದರ್ಶನ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸೇರಿ ಭರ್ಜರಿಯಾಗಿಯೇ ಆಚರಿಸಿಕೊಳ್ಳುತ್ತಿದ್ದಾರೆ.

ಕಳೆದ ಅನೇಕ ವರ್ಷಳಿಂದ ದರ್ಶನ್(Challenging star Darshan) ಅವರು ತಮ್ಮ ಹುಟ್ಟುಹಬ್ಬಕ್ಕಾಗಿ ಹೂ, ಹಾರ, ಉಡುಗರೆ ತರಬೇಡಿ,
ಬದಲಾಗಿ ಬಡವರಿಗೆ ನೆರವಾಗುವ ದೃಷ್ಟಿಯಿಂದ ಅಕ್ಕಿ, ಬೆಳೆ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ತನ್ನಿ. ಅವುಗಳನ್ನು ಬಡವರಿಗೆ ನೀಡೋಣ ಎಂದು ಕರೆ ನೀಡಿದ್ದರು.
ಈ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ದರ್ಶನ್ ನಿರ್ಧರಿಸಿದ್ದರು. ಅದೇ ರೀತಿ ಈ ಬಾರಿಯೂ ದರ್ಶನ್‌ಅವರ ಅಭಿಮಾನಿಗಳು,
ಮೂಟೆಗಟ್ಟಲೆ ದಿನಸಿ ಸಾಮಗ್ರಿಗಳನ್ನು ಹೊತ್ತು ದರ್ಶನ್ ಮನೆ ತಲುಪಿಸಿದ್ದಾರೆ. ನೂರಾರು ವಾಹನಗಳು ದಿನಸಿ ಹೊತ್ತುಕೊಂಡು ಬಂದು ದರ್ಶನ್‌ಅವರ ಮನೆ ಮುಂದೆ ಜಮಾಯಿಸಿವೆ.

ಇನ್ನು ಈ ಬಾರಿ ದರ್ಶನ ಅವರು ತಮ್ಮನ್ನು ನೋಡಲು ದೂರದ ಊರಿನಿಂದ ಬರುವ ಅಭಿಮಾನಿಗಳಿಗಾಗಿ ಭರ್ಜರಿ ಊಟದ ವ್ಯವಸ್ಥೆಯನ್ನೂ (D Boss Darshan birthday) ಮಾಡಿದ್ದಾರೆ.
ಮಧ್ಯರಾತ್ರಿಯಿಂದಲೇ ಊಟ ವಿತರಣೆ ಮಾಡಲಾಗುತ್ತಿದೆ. ಅನ್ನ ಸಾಂಬಾರ್ ಹಾಗೂ ಮೈಸೂರು ಪಾಕ್ ಸ್ವೀಟ್ ಅನ್ನು ನೀಡಲಾಗುತ್ತಿದ್ದು, ಬೆಳಗ್ಗೆ ತಿಂಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು ಸುಮಾರು 20 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ.

ಇನ್ನು ಸಾವಿರಾರು ಅಭಿಮಾನಿಗಳು ಜಾಮಾಯಿಸುವ ಕಾರಣ ಅಹಿತಕರ ಘಟನೆಗಳು ಉಂಟಾಗಬಾರದು ಎಂಬ ಕಾರಣಕ್ಕಾಗಿ ಪೊಲೀಸ್ ಇಲಾಖೆ ಸುಮಾರು ನೂರು ಪೊಲೀಸ್ ಸಿಬ್ಬಂದಿಯನ್ನು
ನಟ ದರ್ಶನ ಅವರ ಮನೆಮುಂದೆ ನಿಯೋಜನೆ ಮಾಡಿದೆ. ನೂರಾರೂ ಅಭಿಮಾನಿಗಳು ಪ್ರೀತಿಯ ಉಡುಗರೆಗಳೊಂದಿಗೆ ದರ್ಶನ ಮನೆಮುಂದೆ ಜಮಾಯಿಸಿದ್ದಾರೆ.
ದಾವಣಗೆರೆಯ ದರ್ಶನ್ ಅಭಿಮಾನಿಯೊಬ್ಬ ಹಸುಗಳಿಗೆ ಕಟ್ಟುವ ಕಲರ್‌ಫುಲ್ ಗಂಟೆಯನ್ನು ತಂದಿದ್ದು ಎಲ್ಲರ ಗಮನ ಸೆಳೆದಿದೆ. ಇನ್ನು ದರ್ಶನ ಅವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್‌ವುಡ್‌ನ(Sandalwood) ಅನೇಕ ತಾರೆಯರು ಶುಭಕೋರಿದ್ಧಾರೆ.