Breaking News
ರೈತ ವಿರೋಧಿ ಕಾನೂನುಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು: ಸಿದ್ದರಾಮಯ್ಯ72ನೇ ಗಣರಾಜ್ಯೋತ್ಸವ – ರಾಜ್​ಪಥ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ಕೋವಿಂದ್ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರೊಟೆಸ್ಟ್: ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಟ್ರ್ಯಾಕ್ಟರ್ ಪೆರೇಡ್2021ನೇ ಸಾಲಿನ “ಪದ್ಮ‌ ಪ್ರಶಸ್ತಿ” ಪ್ರಕಟ: ಕರ್ನಾಟಕದ ಐವರು ಸೇರಿದಂತೆ 119 ಮಂದಿಗೆ ಗೌರವ`ಡೆನ್ವರ್‌’ಗೆ ಈಗ ಸುದೀಪ್ ರಾಯಭಾರಿಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ಗೆ ಅನುಮತಿ ಇಲ್ಲ: ಕಮಲ್ ಪಂತ್ಮತ್ತೆ ಕೆ ಸುಧಾಕರ್ ಗೆ ಆರೋಗ್ಯ ಇಲಾಖೆ ಹೊಣೆಭಾರತದ ಗಡಿಗೆ ನುಸುಳಿದ ಚೀನಾ ಸೈನಿಕರು – ದಾಳಿಗೆ 20 ಸೈನಿಕರು ಗಾಯನನಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕೊಟ್ಟರೆ ನಿಭಾಯಿಸುತ್ತೇನೆ: ಎಂಟಿಬಿ ನಾಗರಾಜ್ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ

ದಾಖಲೆ ಸೃಷ್ಟಿಸಿದ ಮಹಿಳಾ ಪೈಲೆಟ್‌ಗಳು

Share on facebook
Share on google
Share on twitter
Share on linkedin
Share on print

ಬೆಂಗಳೂರು, ಜ. 11: ಸ್ಯಾನ್‌ ಫ್ರಾನ್ಸಿಸ್ಕೊ- ಬೆಂಗಳೂರು ನಡುವಣ ವಿಶ್ವದ ಅತೀ ದೀರ್ಘ ವಾಯು ಮಾರ್ಗದ ವಿಮಾನಯಾನವನ್ನು ಸಂಪೂರ್ಣವಾಗಿ ಕ್ರಮಿಸಿದ ಮೂಲಕ ಹೊಸ ಇತಿಹಾಸ ದಾಖಲಿಸಿದ್ದಾರೆ ಮಹಿಳಾ ಪೈಲಟ್‌ಗಳು.  ನಿರ್ವಹಣೆಯ ವಿಮಾನವು ಉತ್ತರ ಧ್ರುವದ ಮೇಲೆ ಹಾರಿ, ಅಟ್ಲಾಂಟಿಕ್ ಮಾರ್ಗದ ಮೂಲಕ, 16,000 ಕಿ.ಮೀ ದೂರವನ್ನು ಕ್ರಮಿಸಿ ಬೆಂಗಳೂರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಶನಿವಾರ ರಾತ್ರಿ 8.30ಕ್ಕೆ (ಸ್ಥಳೀಯ ಸಮಯ) ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಿಂದ ಹೊರಟ ಎಐ 176 ವಿಮಾನ, , ಸೋಮವಾರ (ಸ್ಥಳೀಯ ಸಮಯ) ಮುಂಜಾನೆ 4ಗಂಟೆ ಸುಮಾರಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಉತ್ತರ ಧ್ರುವವನ್ನು ಹಾದು ಬಂದು ಹೊಸ ಇತಿಹಾಸ ಸೃಷ್ಟಿ ಮಾಡಿದ್ದೇವೆ. ಈ ಸಾಧನೆಯ ಭಾಗವಾಗಿರುವುದಕ್ಕೆ ನಮಗೆ ತುಂಬಾ ಹೆಮ್ಮೆ ಎನಿಸಿದೆ. ಈ ಮಾರ್ಗವು 10 ಟನ್ ಇಂಧನವನ್ನು ಉಳಿಸಿದೆ ಎಂದು ಕ್ಯಾಪ್ಟನ್ ಜೊಯಾ ಅಗರ್ವಾಲ್ ಹೇಳಿದ್ದರೆ, ಇದೊಂದು ರೋಮಾಂಚನಕಾರಿ ಅನುಭವ ನೀಡಿತು ಎನ್ನುತ್ತಾರೆ ಶಿವಾನಿ ಮನ್ಹಾಸ್.

‘ಇದು ಹಿಂದೆಂದೂ ನಡೆಯದೇ ಇದ್ದ ವಿದ್ಯಮಾನ. ಈ ಸಾಹಸ ರೋಮಾಂಚಕಾರಿ ಅನುಭವ ನೀಡಿತು. ಸ್ಯಾನ್‌ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಬರಲು ಸುಮಾರು 17 ಗಂಟೆಗಳು ಬೇಕಾಯಿತು ಎಂದು ಅವರು ಮಾಹಿತಿ ನೀಡಿದರು.

ಸೇನೆಗಳಲ್ಲಿ ಮಹಿಳೆಯರು ಸಾರಥ್ಯ ವಹಿಸುತ್ತಾ ಹಲವಾರು ಸಾಧನೆಗಳನ್ನು ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆ. ಕೇವಲ ಪುರುಷರಿಗಷ್ಟೇ ಸಾಧ್ಯ ಎಂದುಕೊಂಡಿದ್ದ ಸೇನೆಯೆಂಬ ಕೋಟೆಯನ್ನು ಭೇದಿಸಿ ಅಲ್ಲಿ ಮಹಿಳೆಯರು ನುಗ್ಗಿ ಸಾಧನೆ ಮಾಡುತ್ತಿದ್ದಾರೆ.

ಅಂಥದ್ದೇ ಒಂದು ಸಾಧನೆಯನ್ನು ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ ನಾಲ್ವರು ಪೈಲಟ್‌ಗಳು. ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಪೈಲಟ್‌ಗಳಾಗಿರುವ ಕ್ಯಾಪ್ಟನ್ ಜೋಯಾ ಅಗರ್‌ವಾಲ್‌, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನಾವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರನ್ನೊಳಗೊಂಡ ತಂಡವು ಹೊಸ ದಾಖಲೆ ನಿರ್ಮಿಸಿದೆ.

ಸ್ಯಾನ್‌ ಫ್ರಾನ್ಸಿಸ್ಕೊ- ಬೆಂಗಳೂರು ನಡುವಣ ವಿಶ್ವದ ಅತೀ ದೀರ್ಘ ವಾಯು ಮಾರ್ಗದ ವಿಮಾನಯಾನವನ್ನು ಸಂಪೂರ್ಣವಾಗಿ ನಿರ್ವಹಿಸುವ ಮೂಲಕ ಹೊಸ ಇತಿಹಾಸ ದಾಖಲಿಸಿದ್ದಾರೆ. ಸ್ಯಾನ್‌ ಫ್ರಾನ್ಸಿಸ್ಕೊ – ಬೆಂಗಳೂರು ನಡುವಿನ ಮಾರ್ಗವು ವಿಶ್ವದ ಅತ್ಯಂತ ದೀರ್ಘ ವಾಯು ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಿಮಾನಗಳು ಭೂಮಿಯ ಮೇಲಿನ ದುರ್ಗಮ ಪ್ರದೇಶ ಎನ್ನುವ ಉತ್ತರ ಧ್ರುವವನ್ನು ದಾಟಿ ಬರುತ್ತವೆ.

Submit Your Article