ದಕ್ಷಿಣ ಕನ್ನಡ : ಮಾನ್ಯ ದಕ್ಷಿಣ ಕನ್ನಡದ(Dakshina Kannada) ಜಿಲ್ಲಾಧಿಕಾರಿಗಳೇ ಹಾಗೂ ನೀರಾವರಿ ನಿಗಮಕ್ಕೆ ಸಂಬಂಧಪಟ್ಟ ಅಧಿಕಾರಿ ವರ್ಗದವರೇ. ಬಂಟ್ವಾಳ(Bantwala) ತಾಲೂಕಿನ ಚೆನ್ನೈ ತೋಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಕೊರಗಟ್ಟೆಯ ಸಜಂಕ ಬೆಟ್ಟು( ಕನಸಡ್ಕ ) ಎಂಬಲ್ಲಿ ಇತ್ತೀಚೆಗಷ್ಟೇ 3-4 ತಿಂಗಳಗಳಿಂದ ಆರಂಭಗೊಂಡ ಕಿಂಡಿ ಅಣೆಕಟ್ಟು ಕಾರ್ಯ, ಸೇತುವೆಯ ಕಳಪೆ ಕಾಮಗಾರಿ ದುರಂತಕ್ಕೆ ಎಡಮಾಡಿಕೊಟ್ಟಿದೆ.

ಈ ಬಗ್ಗೆ ಸ್ಥಳೀಯರು ಮಾತನಾಡಿದ್ದು, “ದುರಂತದಿಂದ ಯಾವುದೇ ಸಾವು ನೋವುಗಳು ಸಂಭವಿಸುವ ಮೊದಲು ಕಾನೂನು ಕ್ರಮಕೈಗೊಳ್ಳಿ. ಬಂಟ್ವಾಳ ತಾಲೂಕಿನ ಶಾಸಕ ರಾಜೇಶ್ ನಾಯ್ಕ್ ರವರ ಅನುದಾನದಲ್ಲಿ ಚೆನ್ನೈ ತೋಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಕೊರಗಟ್ಟೆಯ ಸಜಂಕ ಬೆಟ್ಟು(ಕಳಸಡ್ಕ) ಎಂಬಲ್ಲಿ ಕಿಂಡಿ ಅಣೆಕಟ್ಟು ಹಾಗೂ ಸೇತುವೆಗೆ ಕಾಮಗಾರಿಗೆ ಶಾಸಕರ ಅನುದಾನದಲ್ಲಿ 5.40 ಕೋಟಿ ರೂಪಾಯಿ ಮಂಜೂರು ಆಗಿದ್ದು, ಕಾಮಗಾರಿಯು ಈಗಾಗಲೇ 80% ಮುಗಿದಿದೆ.
ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯ ಕರ್ಮಕಾಂಡ. ಕಾಮಗಾರಿ ಪೂರ್ಣ ಆಗುವ ಮೊದಲೇ ತಡೆಗೋಡೆಯ ಕಾಮಗಾರಿಯ ಅಡಿಪಾಯನೇ ಕಿತ್ತು ಹೊರಗೆ ಬಂದಿದೆ! ತಡೆಗೋಡೆಯು ಹೊಡೆದು ಹೋಗಿದೆ. ಸಂಪೂರ್ಣ ತಡೆಗೋಡೆಯು ಅಪಾಯ ಮಟ್ಟವನ್ನು ಎದುರಿಸುತ್ತಿದೆ. ಸಾರ್ವಜನಿಕರು ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ತಡೆಗೋಡೆಯ ಸಮೀಪ ಹೋಗದಂತೆ ಮನವಿಯನ್ನು ಮಾಡಿದ್ದೇವೆ.

ಯಾವ ಸಮಯದಲ್ಲಿ ಬೇಕಾದರೂ ದುರಂತ ಸಂಭವಿಸಬಹುದು. ಇದೆಂತಾ ಕಳಪೆ ಕಾಮಗಾರಿ ಶಾಸಕರೇ? ಯಾವುದೇ ದುರಂತಗಳು ನಡೆಯುವ ಮೊದಲು ಕಳಪೆಯಾದ ಕಾಮಗಾರಿಯ ಬಗ್ಗೆ ಇಲಾಖೆ ತಕ್ಷಣವೇ ಕಾನೂನಿನ ಕ್ರಮ ಕೈಗೊಳ್ಳಿ. ಮುಂದಾಗುವ ದುರಂತವನ್ನು ತಪ್ಪಿಸಿ” ಎಂದು ಮನವಿ ಸ್ಥಳೀಯರು ಮನವಿ ಮಾಡಿದ್ದಾರೆ.
ಕಾಮಗಾರಿಯ ವಿವರ ಹೇಗಿದೆ ನೋಡಿ :
ಕಿಂಡಿ ಅಣೆಕಟ್ಟು ಹಾಗೂ ಸೇತುವೆ ತಡೆಗೋಡೆಯು ಅಡಿಪಾಯವು ನದಿಯ( ಸಣ್ಣ ನದಿ, ದೊಡ್ಡದಾದ ತೋಡು ) ನೀರಿನ ಕೆಳಮಟ್ಟದಿಂದ ಕನಿಷ್ಠ 8 ಅಡಿಯಿಂದ ತಡೆಗೋಡೆ ಅಡಿಪಾಯವನ್ನು ಹಾಕಬೇಕು. ಆದರೆ ಈ ತಡೆಗೋಡೆಯ ಅಡಿಪಾಯವು ಮೇಲ್ನೋಟಕ್ಕೆ 1 ಅಡಿ ಅಂತರದಲ್ಲಿದೆ.

ತಡೆಗೋಡೆಯು ಅಡಿಪಾಯದಿಂದ ಹಿಡಿದು ಹಲವು ಕಡೆ ಬಿರುಕು ಬಿಟ್ಟಿದೆ. ಒಟ್ಟಿಗೆ ಸೇತುವೆ ಅಪಾಯ ಮಟ್ಟದಲ್ಲಿದೆ. ಒಂದು ಸೈಡಿನ ತಡೆಗೋಡೆಯು 2 ಇಂಚು ಈಗಾಗಲೇ ಹೊಡೆದು ಹೊರಗೆ ಬಂದಿದೆ, ಯಾವಾಗ ಬೇಕಾದರೂ ದುರಂತ ನಡೆಯಬಹುದು. ಯಾವಕಡೆ ನೀರು ಹರಿಯಬಾರದೆಂದು ತಡೆಗೋಡೆ ಕಟ್ಟಿದ್ದಾರೋ, ಆ ತಡೆಗೋಡೆಯ ಅಡಿಪಾಯದಿಂದಲೇ ನೀರು ಹೊರಗಡೆ ಬರುತ್ತಿದೆ. ಸೇತುವೆಯ ಮೇಲ್ಭಾಗದಲ್ಲಿ ಕೆಲವು ಕಡೆ ಬಿರುಕು ಬಿಟ್ಟಿದೆ.
ಸಾಮಾನ್ಯ ಒಬ್ಬ ನಾಗರಿಕನು RCC ಮನೆ ಕಟ್ಟುವಾಗ ಕಬ್ಬಿಣದ ಸಲಾಕೆಯನ್ನು 16/20 ಇಂಚಿನ ಸಲಾಕೆಯನ್ನು ಉಪಯೋಗಿಸುತ್ತಾನೆ. ಸರ್ಕಾರದ ಇಷ್ಟು ದೊಡ್ಡ ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯಲ್ಲಿ ಬಳಸಿದ ಕಬ್ಬಿಣದ ಸಲಹೆಯ ಇಂಚು 8-10-12 ಅಲ್ಲವೇ?( ಕಾಮಗಾರಿಯ ಕಿಂಡಿ ಅಣೆಕಟ್ಟಿನ ತಡೆಗೋಡೆಯ ಹಾಗೂ ಸೇತುವೆಯ ತಡೆಗೋಡೆಯಲ್ಲಿ ಕಾಣುವ ಕಬ್ಬಿಣದ ಸಲಾಕೆಯನ್ನು ಗಮನಿಸಬೇಕಾಗಿದೆ)

ಈ ಕಾಮಗಾರಿಯಲ್ಲಿ ಕನಿಷ್ಠ ಎಂದರು 30 ಇಂಚಿನ ಮೇಲ್ಪಟ್ಟ ಕಬ್ಬಿಣದ ಸಲಾಕೆಯನ್ನು ಉಪಯೋಗಿಸಬೇಕಿತ್ತು ಹಾಗೂ ತುರ್ತು ಸ್ಥಳಕ್ಕೆ ಆಗಮಿಸಿ ವೀಕ್ಷಣೆಯನ್ನು ಮಾಡಿ. ಯಾವುದೇ ದುರಂತ ನಡೆಯುವ ಮೊದಲು ಅಧಿಕಾರಿ ವರ್ಗದವರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.