UttarPradesh : ಉತ್ತರ ಪ್ರದೇಶದ (UttarPradesh) ಲಖಿಂಪುರ ಖೇರಿ(Lakhimpur Kheri) ಎಂಬಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ದಲಿತ ಹದಿಹರೆಯದ ಬಾಲಕಿಯರ ಶವ ಪತ್ತೆಯಾಗಿದೆ.
ಈ ಬಗ್ಗೆ ಹತ್ಯೆಯಾದ(Dalit teens Raped and Hanged) ಯುವತಿಯರ ತಾಯಿ ಮಾತನಾಡಿ, ತನ್ನ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಹದಿಹರೆಯದ ಇಬ್ಬರು ಯುವತಿಯರನ್ನು ಬೈಕ್ಗಳಲ್ಲಿ ಬಂದು ಅಪಹರಿಸಿ, ಅತ್ಯಾಚಾರ ಎಸಗಲಾಗಿದೆ ಮತ್ತು ಅವರ ದೇಹಗಳನ್ನು ಮರಕ್ಕೆ ನೇಣು ಹಾಕಲಾಗಿದೆ(Dalit teens Raped and Hanged) ಎಂದು ಅವರ ತಾಯಿ, ಪೊಲೀಸರಿಗೆ ತಿಳಿಸಿದ್ದಾರೆ.
ಸಂತ್ರಸ್ತೆಯ ತಾಯಿ ಎಫ್‌ಐಆರ್ ದಾಖಲಿಸಿದ ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಎಫ್‌ಐಆರ್‌ನ ಪ್ರಕಾರ, ಪ್ರಮುಖ ಆರೋಪಿ ಚೋಟು ತನ್ನ ಸ್ನೇಹಿತರೊಂದಿಗೆ ಯುವತಿಯರ ಮನೆಗೆ ನುಗ್ಗಿ ಬಲವಂತವಾಗಿ ಬೈಕ್‌ನಲ್ಲಿ ಕರೆದೊಯ್ದಿದ್ದಾನೆ.
ಆರೋಪಿಗಳು ಯುವತಿಯ ತಾಯಿಯನ್ನು ಥಳಿಸಿ, ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಮತ್ತು ಅವರ ದೇಹವನ್ನು ಮರಕ್ಕೆ ನೇಣು ಹಾಕಿದ್ದಾರೆ ಎಂದು ಎಫ್‌ಐಆರ್ ತಿಳಿಸಿದೆ.
ಇಲ್ಲಿನ ನಿಘಾಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ದಲಿತ ಹದಿಹರೆಯದ ಸಹೋದರಿಯರು ತಮ್ಮ ಮನೆಯಿಂದ ಸುಮಾರು,
ಒಂದು ಕಿಲೋಮೀಟರ್ ದೂರದಲ್ಲಿರುವ ಕಬ್ಬಿನ ಗದ್ದೆಯಲ್ಲಿರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಹತ್ಯೆಯನ್ನು ವಿರೋಧಿಸಿ ಗ್ರಾಮಸ್ಥರು ನಿಘಸನ್ ಕ್ರಾಸ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
https://twitter.com/yadavakhilesh/status/1570094559253917696?s=20&t=4lS1UhJmnYB69b95x7EF6g
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302,323,452,376 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಆದ್ರೆ, ಸಹೋದರಿಯರಿಬ್ಬರೂ ಮನಸೋ ಇಚ್ಛೆ ಆರೋಪಿಯೊಂದಿಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಇಬ್ಬರು ಆರೋಪಿಗಳನ್ನು ಮದುವೆಯಾಗುವಂತೆ ಹುಡುಗಿಯರ ಮೇಲೆ ಒತ್ತಡ ಹೇರಲಾಗುತ್ತಿತ್ತು, ಅವರು ತಮ್ಮ ನಾಲ್ವರು ಸಹಚರರೊಂದಿಗೆ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾರೆ.
ಲಖಿಂಪುರ ಖೇರಿ ಜಿಲ್ಲೆಯ ನಿಘಸನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ದಲಿತ ಹದಿಹರೆಯದ ಸಹೋದರಿಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಂತರ,
ಪ್ರತಿಪಕ್ಷ ನಾಯಕರು ಉತ್ತರಪ್ರದೇಶ ಸರ್ಕಾರವನ್ನು(UttarPradesh Government) ತರಾಟೆಗೆ ತೆಗೆದುಕೊಂಡಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Yadav) ಮತ್ತು ಕಾಂಗ್ರೆಸ್(Congress) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi),
ಅವರು ರಾಜ್ಯದಲ್ಲಿ ಮಹಿಳೆಯರ ಮೇಲಿನ ‘ಹೆಚ್ಚುತ್ತಿರುವ’ ಅಪರಾಧಗಳ ಬಗ್ಗೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಅವಳಿ ಸಾವುಗಳನ್ನು ಹತ್ರಾಸ್ (Hathras Gang Rape) ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ ಹೋಲಿಸಿದ್ದಾರೆ.
ಘಟನೆಯನ್ನು ‘ಹತ್ರಾಸ್‌ನ ಘೋರ ಪುನರಾವರ್ತನೆ’ ಎಂದು ಬಣ್ಣಿಸಿದ ಅಖಿಲೇಶ್ ಯಾದವ್, “ನಿಘಾಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ದಲಿತ ಸಹೋದರಿಯರನ್ನು ಅಪಹರಿಸಿ ನಂತರ ಹತ್ಯೆ ಮಾಡಲಾಗಿದೆ.
ಕುಟುಂಬದ ಒಪ್ಪಿಗೆಯಿಲ್ಲದೆ ಮರಣೋತ್ತರ ಪರೀಕ್ಷೆ!
ಇದನ್ನೂ ಓದಿ : https://vijayatimes.com/central-government-decision-over-tribe-community/
ಲಖಿಂಪುರದಲ್ಲಿ ರೈತರ ನಂತರ ದಲಿತರ ಹತ್ಯೆಯು ಈಗ ‘ಹತ್ರಾಸ್’ ಮಗಳ ಹತ್ಯೆಯ ಪುನರಾವರ್ತನೆಯಾಗಿದೆ ಎಂದು ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಘಟನೆಯನ್ನು ಖಂಡಿಸಿದ್ದು, ಟ್ವಿಟರ್ ಮೂಲಕ “ಲಖೀಂಪುರದಲ್ಲಿ ಇಬ್ಬರು ಸಹೋದರಿಯರ ಹತ್ಯೆ ಹೃದಯವಿದ್ರಾವಕವಾಗಿದೆ.
ಹೆಣ್ಣು ಮಕ್ಕಳನ್ನು ಹಗಲು ಹೊತ್ತಿನಲ್ಲಿ ಅಪಹರಿಸಲಾಗಿದೆ ಎಂದು ಕುಟುಂಬದವರು ಹೇಳುತ್ತಾರೆ. ದಿನನಿತ್ಯ ಪತ್ರಿಕೆಗಳು ಮತ್ತು ಟಿವಿಗಳಲ್ಲಿ ಸುಳ್ಳು ಜಾಹೀರಾತುಗಳನ್ನು ನೀಡುವುದರಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುತ್ತಿಲ್ಲ. ಸರ್ಕಾರ ಯಾವಾಗ ಎಚ್ಚೆತ್ತುಕೊಳ್ಳುತ್ತದೆ?
