ದೆಹಲಿ, ಡಿ. 23: ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯಜು಼ವೇಂದ್ರ ಚಹಲ್ ತಮ್ಮ ಪ್ರೇಯಸಿ ಧನಶ್ರೀ ವರ್ಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಗುರುಗ್ರಾಮ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರೇಮಿಗಳ ವಿವಾಹ ಮಹೋತ್ಸವ ನೆರವೇರಿದೆ. ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ತಮ್ಮ ಮದುವೆಯ ಫೋಟೋಗಳನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ಯುಟ್ಯೂಬರ್ ಧನಶ್ರೀ ವರ್ಮಾ, “We started at “Once upon a time” and found “Our happily ever after,” coz’ finally, DhanaSaidYuz for infinity & beyond!! yuzi_chahal” ಎಂದು ಬರೆದುಕೊಂಡಿದ್ದಾರೆ.