Karnataka : ಹುಬ್ಬಳ್ಳಿ-ಧಾರವಾಡ ದೇವಸ್ಥಾನಗಳ ತೆರವಾದಾಗ ಸುಮ್ಮನಿದ್ದ ಸಿದ್ದರಾಮಯ್ಯ , ದರ್ಗಾ ತೆರವಿನ ಬಗ್ಗೆ ಸಿಡಿದಿದ್ದೇಕೆ? ಜನರಿಗೆ ಇದೆಲ್ಲ ಸ್ಪಷ್ಟವಾಗಿ ಗೋಚರವಾಗಿದ್ದಕ್ಕೇ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ ಎಂದು ರಾಜ್ಯ ಬಿಜೆಪಿ (dargah eviction controversy), ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಟ್ವೀಟ್‌ಮಾಡಿ ವಾಗ್ದಾಳಿ ನಡೆಸಿದೆ.

ಹುಬ್ಬಳ್ಳಿ-ಧಾರವಾಡ ನಡುವಿನ ರಸ್ತೆ ನಿರ್ಮಾಣಕ್ಕಾಗಿ ದರ್ಗಾವನ್ನು ಕೆಡವಿದ್ದಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದ ಸಿದ್ದರಾಮಯ್ಯ ವಿರುದ್ದ ಇದೀಗ ಬಿಜೆಪಿ ಸರಣಿ ಟ್ವೀಟ್‌ಮೂಲಕ ವಾಗ್ದಾಳಿ ನಡೆಸಿದೆ.
ಹಿಂದೂ ಕಾರ್ಯಕರ್ತರ ವಿರುದ್ಧ ಹೋರಾಡಿ ಎಂದವರು ಸಿದ್ದರಾಮಯ್ಯ ಆದರೆ ಇವರ ಬೆಂಬಲದಿಂದನೇ ದೇಶದ್ರೋಹಿ ಪಿಎಫ್ಐ (dargah eviction controversy) ಸದಸ್ಯರು, ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದ್ದಾರೆ.
ಪಿಎಫ್ಐ ಕಾರ್ಯಕರ್ತರ ಬಗ್ಗೆ ಮೃದು ಧೋರಣೆ ತಳೆದು ಪ್ರಕರಣಗಳನ್ನು ಕೈ ಬಿಟ್ಟಿದ್ದಕ್ಕೇ ಅಲ್ಲವೇ ಇನ್ನೂ ಕುಕ್ಕರ್ ಬ್ಲಾಸ್ಟ್ ಆಗಿದ್ದು?
ಇದನ್ನೂ ಓದಿ : https://vijayatimes.com/covid-entry/
ಹಿಂದೂ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣ ಸಾಧಿಸುವ, ದತ್ತಿ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಹೊರಟವರು ಸಿದ್ದರಾಮಯ್ಯ.
ಹಿಂದೂಗಳನ್ನು ದಮನಿಸಲು ಹವಣಿಸಿದ್ದಕ್ಕೇ ಅಲ್ಲವೇ ನಿಮಗಿನ್ನೂ ಭದ್ರ ನೆಲೆ ಸಿಗದಿರುವುದು? ಎಂದು ಬಿಜೆಪಿ ಟ್ವೀಟ್‌ನಲ್ಲಿ (Twitter) ಪ್ರಶ್ನಿಸಿದೆ.
https://vijayatimes.com/tajmahal-received-tax-notice/
ಇನ್ನೊಂದು ಟ್ವೀಟ್‌ನಲ್ಲಿ, ಹಿಂದೂ ಧರ್ಮದಲ್ಲಿ ಗೋವಿಗೆ ತಾಯಿಯ ಸ್ಥಾನವಿದೆ. ಮುಖ್ಯಮಂತ್ರಿಯಾಗಿದ್ದಾಗ ಗೋಮಾಂಸ ತಿನ್ನುತ್ತೇನೆ ಎಂದು ಹೇಳಿಕೆ ನೀಡಿದವರು ಸಿದ್ದರಾಮಯ್ಯ.
ಹಿಂದೂ ರಾಷ್ಟ್ರದಲ್ಲಿ ಹಿಂದೂವಾಗಿ ಹಿಂದೂಗಳನ್ನೇ ಅವಮಾನಿಸುವುದು ಎಂಥ ವಿಕೃತ ಮನಸ್ಥಿತಿ?

ಜಯಂತಿಯ ಕಲ್ಪನೆಯೇ ಇಲ್ಲದ ಸಮುದಾಯದಲ್ಲಿ ಜಯಂತಿ ಆಚರಿಸಿದವರು ಸಿದ್ದರಾಮಯ್ಯ.
ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಯಂತಿ ಆಚರಿಸಿ, ಹಿಂದೂಗಳ ಭಾವನೆ ಕೆರಳಿಸಿದರೆ ಎಷ್ಟು ದಿನ ಜನರು ಕಾಂಗ್ರೆಸ್ಸನ್ನು ಸಹಿಸುತ್ತಾರೆ? ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವೀರಶೈವ ಮತ್ತು ಲಿಂಗಾಯತರ ಪ್ರತ್ಯೇಕ ಧರ್ಮ ಸ್ಥಾಪಿಸಲು ಸಿದ್ದರಾಮಯ್ಯ ಮುಂದಾಗಿದ್ದರು.
ಹೀಗೆ ಹಿಂದೂಗಳ ನಡುವೆ ಕಂದಕ ಸೃಷ್ಟಿಸಿ, ಒಡೆದು ಆಳುವ ನೀತಿ ಪ್ರಯೋಗಿಸಿದ್ದಕ್ಕೇ ಅಲ್ಲವೇ ಇವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
- ಮಹೇಶ್.ಪಿ.ಎಚ್