Bangalore: ಮಕ್ಕಳು ಚೆನ್ನಾಗಿ ಓದಲಿ ಒಳ್ಳೆ ವಿದ್ಯಾಭ್ಯಾಸ ಪಡೆಯಲಿ ಎಂದು ಪೋಷಕರು ಲಕ್ಷಗಟ್ಟಲೆ ಖರ್ಚು ಮಾಡಿ ಖಾಸಗಿ ಶಾಲೆಗೆ (Private school) ತಮ್ಮ ಮಕ್ಕಳನ್ನ ಸೇರಿಸುತ್ತಾರೆ. ಕೆಲವೊಮ್ಮೆ ಪೋಷಕರು ತಡಮಾಡಿ ಶಾಲೆಗೆ ಫೀಸ್ ಕಟ್ಟುತ್ತಾರೆ, ಕಾರಣಾಂತರದಿಂದ ಇನ್ನೂ ಕೆಲ ಪೋಷಕರು ಫೀಸ್ ಕಟ್ಟಿರೋದಿಲ್ಲ. ಪೋಷಕರು ಪೀಸ್ ಕಟ್ಟದ ಕಾರಣ ಖಾಸಗಿ ಶಾಲೆಯಲ್ಲಿ ಮಕ್ಕಳು ಶಿಕ್ಷೆ (Punishment) ಅನುಭವಿಸುವಂತಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ (Reputed private school) ಮಕ್ಕಳು ಫೀಸ್ ಕಟ್ಟಿಲ್ಲ ಎಂದು ಕತ್ತಲೆ ಕೋಣೆಯಲ್ಲಿ (Dark room) ಕೂಡಿ ಹಾಕಿ ಹಿಂಸೆ ನೀಡುತ್ತಿದ್ದಾರೆ. ಈ ಶಾಲೆಯ ಕರಾಳ ಮುಖವನ್ನ ಸ್ವತಃ ಪೋಷಕರೇ ಬಯಲು ಮಾಡಿದ್ದಾರೆ.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪಟ್ಟಣಗೆರೆ ಮೆಟ್ರೋ ಬಳಿ ಇರುವ ಆರ್ಕಿಡ್ ಇಂಟರ್‌ನ್ಯಾಷನಲ್ ಸ್ಕೂಲ್ (Orchid International School) ವಿರುದ್ಧ ಈ ಗಂಭೀರ ಆರೋಪ (Accusation) ಕೇಳಿ ಬಂದಿದೆ. ಈ ಹಿಂದೆ ಮಾನ್ಯತೆ ಹಾಗೂ ನವೀಕರಣದಲ್ಲಿ ಈ ಶಾಲೆ ಸುದ್ದಿ ಆಗಿತ್ತು. ಮಕ್ಕಳಿಗೆ ಇದೇ ಮೊದಲ ಭಾರಿ ಅಲ್ಲ ಪೀಸ್ ಕಟ್ಟದೆ ಇದ್ದಾಗ ಪದೇ ಪದೇ ಈ ರೀತಿ ಮಕ್ಕಳಿಗೆ ಡಾರ್ಕ್ ರೂಮ್ ಪನಿಶ್‌ಮೆಂಟ್ ನೀಡುತ್ತಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಮಕ್ಕಳ ಪೋಷಕರು ಶಾಲೆಯ ಪೀಸ್ ಕಟ್ಟೋದು ತಡ ಆಗಿದೆ. ಹೀಗಾಗಿ ಮಕ್ಕಳನ್ನ ಲೈಬ್ರೆರಿಯಲ್ಲಿ (Library) ಕೂಡಿ ಹಾಕಿ ಹಿಂಸೆ ನೀಡಿದ್ದಾರೆ. ಇದ್ರಿಂದ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಸ್ಥಿತಿ ಹದಗೆಡುತ್ತಿದೆ. ಈ ಬಗ್ಗೆ ಪೋಷಕರಿಗೆ ಹೇಳಿದ್ರೆ ಇನ್ನೂ ಹೆಚ್ಚಿನ ಟಾರ್ಚರ್ ನೀಡೋದಾಗಿ ಬೆದರಿಸಿದ್ದಾರೆ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಈಗಾಗಲೇ ಪೋಷಕರು ಮಕ್ಕಳ ಸುರಕ್ಷತಾ & ಸಂರಕ್ಷಣಾ (Child Safety & Protection) ಇಲಾಖೆಗೆ ದೂರು (Complaint) ಕೊಟ್ಟಿದ್ದಾರೆ. ಒಟ್ಟು ಆರು ಜನ ಮಕ್ಕಳಿಗೆ ಕಳೆದೆರಡು ವಾರದಲ್ಲಿ ಕೂಡಿ ಹಾಕಿರೋ ಆರೋಪ ಕೇಳಿಬಂದಿದೆ. ಲೈಬ್ರರಿಯಲ್ಲಿ ಇಡೀ ದಿನ ಕೂಡಿ ಹಾಕಿದ್ದರು ಎಂದು ಖುದ್ದು ಮಕ್ಕಳೇ ಆರೋಪ ಮಾಡಿದ್ದಾರೆ. ಈ ಶಾಲೆಯಲ್ಲೇ ಕೆಲ ಪೋಷಕರು 7 ರಿಂದ 8 ವರ್ಷ ಮಕ್ಕಳನ್ನ ಓದಿಸುತ್ತಿದ್ದು, ಒಂದು ಸಾರಿ ಫೀಸ್ ಲೇಟಾಗಿದ್ದಕ್ಕೆ ಈ ಶಿಕ್ಷೆ ನೀಡಿದ್ದಾರೆ. ಖಾಸಗಿ ಶಾಲೆಯ ನಡೆಯ ವಿರುದ್ಧ ಕಠಿಣ ಕ್ರಮ (Strict action) ಕೈಗೊಳ್ಳಲೇಬೇಕು, ಶಾಲೆಯನ್ನ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.