Sandalwood : ಕಾಂತಾರ (Kantara) ಸಿನಿಮಾ (Cinema) ಸೆಪ್ಟೆಂಬರ್ 30, 2022 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಸ್ವತಃ ರಿಷಬ್ ಶೆಟ್ಟಿ (Rishab Shetty) ಬರೆದು ನಿರ್ದೇಶಿಸಿದ್ದಾರೆ,
ಮತ್ತು ಹೊಂಬಾಳೆ ಫಿಲ್ಮ್ಸ್(Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು (Vijay Kirangandur) ನಿರ್ಮಿಸಿದ್ದಾರೆ.

ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಕಂಬಳ ಚಾಂಪಿಯನ್ ಆಗಿ ನಟಿಸಿದರೆ, ಕಿಶೋರ್, ಅಚ್ಯುತ್ ಕುಮಾರ್ ಮತ್ತು ಸಪ್ತಮಿ ಗೌಡ (Sapthami Gowda) ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇ
ನ್ನು, ಕಾಂತಾರ ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳು ಕಳೆದರೂ, ಸಿನಿಮಾದ ಸದ್ದೇನೂ ಕಡಿಮೆಯಾಗಿಲ್ಲ.
ಹೌದು, ಮೊದಲಿಗೆ ಕನ್ನಡದಲ್ಲಿ ಮಾತ್ರ ತೆರೆಕಂಡಿದ್ದ ಕಾಂತಾರ, ಪರಭಾಷಾ ಸಿನಿ ರಸಿಕರಿಂದಲೂ ಬೃಹತ್ ಪ್ರಶಂಸೆ ಗಿಟ್ಟಿಸಿಕೊಂಡು ಡಬ್ಬಿಂಗ್ ಬೇಡಿಕೆ ಪಡೆದುಕೊಂಡಿತ್ತು.
ಈ ಕಾರಣದಿಂದಾಗಿ, ಈಗ ಕಾಂತಾರ ಸಿನಿಮಾ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಆಗಿದೆ.

ಹೀಗೆ, ಏಕಭಾಷೆಯ ಚಿತ್ರವಾಗಿದ್ದ ಕಾಂತಾರ, ಬೃಹತ್ ಯಶಸ್ಸು ಕಂಡ ಬೆನ್ನಲ್ಲೇ ಪ್ಯಾನ್ ಇಂಡಿಯಾ (Pan India) ಚಿತ್ರವಾಗಿ ಪರಿವರ್ತನೆಗೊಂಡಿದೆ.
ಅಕ್ಟೋಬರ್ 14 ರಂದು ಕಾಂತಾರ ಹಿಂದಿ ಅವತರಣಿಕೆ ಬಿಡುಗಡೆಯಾಗಿದ್ದು, ಅಕ್ಟೋಬರ್ 15 ರಂದು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಕಾಂತಾರ ಬಿಡುಗಡೆಗೊಳ್ಳುತ್ತಿದೆ ಮತ್ತು ಅಕ್ಟೋಬರ್ 20ರಂದು ಮಲಯಾಳಂ ಆವೃತ್ತಿ ಬಿಡುಗಡೆಗೊಳ್ಳಲಿದೆ.
ಇದನ್ನೂ ಓದಿ : https://vijayatimes.com/fish-seller-wins-70-lakh-lottery/
ಇನ್ನು, ಪ್ಯಾನ್ ಇಂಡಿಯಾ ಸ್ಟಾರ್ ಮತ್ತು ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ (Darling Prabhas) ಕೂಡ ಈ ಚಿತ್ರವನ್ನು ನೋಡಿ ಪ್ರಶಂಸೆ ಮಾಡಿದ್ದಾರೆ. ಹೌದು,
ಈಗಾಗಲೇ ಕಾಂತಾರ ಚಿತ್ರದ ಸಕರಾತ್ಮಕ ವಿಮರ್ಶೆಯನ್ನು (Critic) ಕಂಡು ನಿರೀಕ್ಷೆ ಹೆಚ್ಚಿಸಿಕೊಂಡಿರುವ ತೆಲುಗು ಪ್ರೇಕ್ಷಕರಿಗೆ, ಇದೀಗ ಡಾರ್ಲಿಂಗ್ ಪ್ರಭಾಸ್ ಶೇರ್ ಮಾಡಿರುವ ಪೋಸ್ಟ್ ನಿಂದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಅಲ್ಲದೇ, ಪ್ರಭಾಸ್ ಅವರು ಕಾಂತಾರ ಚಿತ್ರವನ್ನು ಎರಡನೇ ಬಾರಿಗೆ ವೀಕ್ಷಿಸಿರುವುದು ವಿಶೇಷವಾಗಿದೆ. ಈ ಹಿಂದೆಯೇ ಕಾಂತಾರ ಚಿತ್ರವನ್ನು ಕನ್ನಡದಲ್ಲಿ ವೀಕ್ಷಿಸಿದ್ದ ಪ್ರಭಾಸ್,
ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದರು. “ಕಾಂತಾರ ಚಿತ್ರ ನೋಡಿ ಬಹಳ ಎಂಜಾಯ್ ಮಾಡಿದೆ, ಅದರಲ್ಲೂ ಕ್ಲೈಮ್ಯಾಕ್ಸ್ (Climax) ಅದ್ಭುತವಾಗಿತ್ತು.
ಇಂಥದ್ದೊಂದು ಚಿತ್ರವನ್ನು ಕಟ್ಟಿಕೊಟ್ಟ ಚಿತ್ರತಂಡಕ್ಕೆ ಶುಭವಾಗಲಿ ಮತ್ತು ಚಿತ್ರ ದೊಡ್ಡ ಯಶಸ್ಸು ಗಳಿಸಲಿ” ಎಂದು ಶುಭ ಹಾರೈಸಿದ್ದಾರೆ. ಇದೀಗ ಪ್ರಭಾಸ್, ತೆಲುಗಿನಲ್ಲಿಯೂ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದಾರೆ ಹಾಗೂ ಇದರ ಬಗ್ಗೆ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.

“ಎರಡನೇ ಸಲ ನಾನು ಕಾಂತಾರ ಸಿನಿಮಾ ವೀಕ್ಷಿಸಿದ್ದು, ಇದೊಂದು ಅತ್ಯದ್ಭುತ ಅನುಭವವಾಗಿದೆ. ಹಾಗಾಗಿ ಯಾರೂ ಈ ಚಿತ್ರ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ” ಎಂದು ಬರೆದುಕೊಂಡಿದ್ದಾರೆ.
ಇನ್ನು, ಪ್ರಭಾಸ್ ಅಷ್ಟೇ ಅಲ್ಲದೆ ರಮ್ಯಾ, ರಕ್ಷಿತ್ ಶೆಟ್ಟಿ, ಅಮೂಲ್ಯ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಕಾಂತಾರ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
https://youtu.be/EyLZ5K3m7zo ಸ್ಟೋನ್ ಕ್ರಷರ್ ಅನ್ನು ಈ ಕೂಡಲೇ ರದ್ದುಗೊಳಿಸಿ.
ಸಿನಿಮಾದಲ್ಲಿ, ಕರಾವಳಿ ಭಾಗದ ವಿಶಿಷ್ಟ ಆಚರಣೆಗಳನ್ನು ಕಟ್ಟಿಕೊಟ್ಟಿರುವ ರೀತಿಯ ಜೊತೆಗೆ, ಅದ್ಭುತವಾದ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಶೆಟ್ಟಿ ನಟಿಸಿರುವ ರೀತಿಯ ಬಗ್ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
- ಪವಿತ್ರ