• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ನಟ ದರ್ಶನ್ ಪ್ರಕರಣ: ರೇಣುಕಾಸ್ವಾಮಿ ಶವ ಸಾಗಿಸಿದ್ದ ಕಾರು ವಶಕ್ಕೆ, ಕಾರು ಯಾರ ಹೆಸರಿನಲ್ಲಿದೆ?

Bhavya by Bhavya
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ನಟ ದರ್ಶನ್ ಪ್ರಕರಣ: ರೇಣುಕಾಸ್ವಾಮಿ ಶವ ಸಾಗಿಸಿದ್ದ ಕಾರು ವಶಕ್ಕೆ, ಕಾರು ಯಾರ ಹೆಸರಿನಲ್ಲಿದೆ?
0
SHARES
1.1k
VIEWS
Share on FacebookShare on Twitter

Bengaluru: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸಿನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ (Challenging Star Darshan)ನನ್ನುಅರೆಸ್ಟ್ ಮಾಡಲಾಗಿದ್ದು, ಈ ಪ್ರಕರಣವು ಹೊಸ ಹೊಸ ಟ್ವಿಸ್ಟ್ ಪಡೆಯುತ್ತಿದೆ. ಕೊಲೆಯ ನಂತರ ರೇಣುಕಾ ಸ್ವಾಮಿಯ ಶವ ಸಾಗಿಸಲು ಬಳಸಲಾಗಿದೆ ಎನ್ನಲಾಗುತ್ತಿರುವ ಸ್ಕಾರ್ಪಿಯೋ ಕಾರು ಸೇರಿದಂತೆ ದರ್ಶನ್ ಬಳಸುತ್ತಿದ್ದ ಜೀಪ್ ರ್ವಾಂಗ್ಲರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಿಂದ ಇನ್ನು ಕೆಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಒಂದೊಂದಾಗಿ ಹೊರಬೀಳುತ್ತಿದ್ದು, ಇದೀಗ ಅಪರಾಧಕ್ಕೆ ಬಳಕೆಯಾಗಿದೆ ಎನ್ನಲಾಗುತ್ತಿರುವ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಸಿಸಿಟಿವಿ (CCTV) ದೃಶ್ಯಾವಳಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಹಾಗೂ ಜೀಪ್ ರ್ವಾಂಗ್ಲರ್ ಕಾರು, ರೇಣುಕಾಸ್ವಾಮಿ (Renuka Swamy)ಯನ್ನು ಕೂಡಿ ಹಾಕಿದ್ದ ರಾಜರಾಜೇಶ್ವರಿ ನಗರದ ಶೆಡ್​ಗೆ ಹೋಗುತ್ತಿರುವುದು ಬಹಿರಂಗವಾಗಿದೆ ಇದೀಗ ಪೊಲೀಸರು ಈ ಎರಡೂ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಕೆಲವು ವಸ್ತುಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜೀಪ್, ಕಾರು (Zeep, Car)ದರ್ಶನ್ ಆಪ್ತ ವಿನಯ್ ಹೆಸರಿನಲ್ಲಿ ನೊಂದಾವಣಿ ಆಗಿದೆ, ಬೆಂಗಳೂರಿನಲ್ಲಿ ಓಡಾಡಲು ದರ್ಶನ್ ಇದೇ ಕಾರನ್ನು ಹೆಚ್ಚಾಗಿ ಬಳಸುತ್ತಿದ್ದರು. ಕೊಲೆಯಾದ ರಾತ್ರಿ ಇದೇ ಕಾರಿನಲ್ಲಿ ರಾಜರಾಜೇಶ್ವರಿ ನಗರದ ಶೆಡ್​ಗೆ ಆಗಮಿಸಿದ್ದರು ಎನ್ನಲಾಗುತ್ತಿದೆ. ಈ ಕಾರಿನಿಂದ ಒಂದು ಮದ್ಯದ ಬಾಟಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ವಾಹನಗಳಿಂದ ಒಂದು ತುಂಬಿದ ಮದ್ಯದ ಬಾಟಲಿ ಹಾಗೂ ಮಹಿಳೆಯರು ಬಳಸುವ ವ್ಯಾನಿಟಿ ಬ್ಯಾಗ್ (Vanity Bag) ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ವ್ಯಾನಿಟಿ ಬ್ಯಾಗು ಪವಿತ್ರಾ ಗೌಡ ಅವರಿಗ್ಗೆ ಸೇರಿದ್ದು ಎನ್ನಲಾಗುತ್ತಿದೆ.

ಇನ್ನು ಸ್ಕಾರ್ಪಿಯೋ ಕಾರು (Scorpio Car) ದರ್ಶನ್​ರ ಮತ್ತೊಬ್ಬ ಆಪ್ತ ಪ್ರದೋಶ್ ಹೆಸರಿನಲ್ಲಿ ನೊಂದಾವಣಿ ಆಗಿದೆ. ಈ ಕಾರು ಸೆಕೆಂಡ್ಸ್ ಆಗಿದ್ದು, ಮೊದಲ ಮಾಲೀಕನಿಂದ ಪ್ರದೋಶ್ ಖರೀದಿಸಿದ್ದಾರೆ ಎನ್ನುತ್ತಿವೆ ಆರ್​ಟಿಓ (RTO) ದಾಖಲೆಗಳು. ಮೂಲಗಳ ಪ್ರಕಾರ ಇದೇ ಸ್ಕಾರ್ಪಿಯೋ ಕಾರಿನಲ್ಲಿ ಆರೋಪಿಗಳು ರೇಣುಕಾ ಸ್ವಾಮಿಯ ಶವವನ್ನು ಕೊಂಡೊಯ್ದು ಸುಮನಹಳ್ಳಿ ಮೋರಿಗೆ ಎಸದಿದ್ದರು ಎನ್ನಲಾಗುತ್ತಿದೆ.

ಎರಡೂ ಕಾರುಗಳು ಸದ್ಯ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ (DCP Office) ಬಳಿ ಇವೆ. ಬೆರಳಚ್ಚು ತಜ್ಞರು ಕಾರಿನಲ್ಲಿ ಬೆರಳಚ್ಚುಗಳ ಪ್ರತಿಯನ್ನು ತೆಗೆದುಕೊಳ್ಳಲಿದ್ದಾರೆ. ಶವವನ್ನು ಸಹ ಸಾಗಾಟ ಮಾಡಿರುವ ಕಾರಣ ಇನ್ನೂ ಕೆಲವು ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಲಿದ್ದಾರೆ.

ರೇಣುಕಾ ಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು 17 ಮಂದಿಯನ್ನು ಬಂಧಿಸಿದ್ದಾರೆ. ಅವರ ಮೊಬೈಲ್​ಗಳನ್ನು ಈಗಾಗಲೇ ವಶಕ್ಕೆ ಪಡೆದಿದ್ದು ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದರ ನಡುವೆ ಕಾರುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಇನ್ನು ವಿನಯ್​ಗೆ ಸೇರಿದ ಸ್ಟೋನಿ ಬ್ರೂಕ್ಸ್ ಹೋಟೆಲ್ (Stony Brooks Hotel) ​ನಲ್ಲಿಯೂ ಸಹ ಪೊಲೀಸರು ತನಿಖೆ ನಡೆಸಿ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Tags: challenging star darshanDCP OfficeRenukaswamy Murder CaseRTOScorpio Car

Related News

ತಿಂಗಳಿಗೆ ₹10,000 ಹೂಡಿಕೆ ಮಾಡಿದರೆ ನಿವೃತ್ತಿ ಜೀವನ ಭದ್ರ: ಪೋಸ್ಟ್ ಆಫೀಸ್ FD ಮತ್ತು RD ಯೋಜನೆಗಳಿಂದ ಸುರಕ್ಷಿತ ಭವಿಷ್ಯ ಕಟ್ಟಿಕೊಳ್ಳುವ ಸುಲಭ ಮಾರ್ಗ
ಪ್ರಮುಖ ಸುದ್ದಿ

ತಿಂಗಳಿಗೆ ₹10,000 ಹೂಡಿಕೆ ಮಾಡಿದರೆ ನಿವೃತ್ತಿ ಜೀವನ ಭದ್ರ: ಪೋಸ್ಟ್ ಆಫೀಸ್ FD ಮತ್ತು RD ಯೋಜನೆಗಳಿಂದ ಸುರಕ್ಷಿತ ಭವಿಷ್ಯ ಕಟ್ಟಿಕೊಳ್ಳುವ ಸುಲಭ ಮಾರ್ಗ

May 9, 2026
ಬಂಗಾಳ ರಾಜಕೀಯದಲ್ಲಿ ಹೊಸ ಅಧ್ಯಾಯ: ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ
ಪ್ರಮುಖ ಸುದ್ದಿ

ಬಂಗಾಳ ರಾಜಕೀಯದಲ್ಲಿ ಹೊಸ ಅಧ್ಯಾಯ: ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ

May 9, 2026
ಪಂಚರಾಜ್ಯ ಫಲಿತಾಂಶ: ಬಂಗಾಳದಲ್ಲಿ ಅರಳಿದ ಕಮಲ, ತಮಿಳುನಾಡಿನಲ್ಲಿ ವಿಜಯ್ ಜಯ,ದೀದಿ-ಸ್ಟಾಲಿನ್-ಪಿಣರಾಯಿ ಮಹಾ ಪತನ
ಪ್ರಮುಖ ಸುದ್ದಿ

ಮ್ಯಾಜಿಕ್ ಸಂಖ್ಯೆಗೆ ಇನ್ನೂ ಎರಡು ಸ್ಥಾನ ಕೊರತೆ: ಟಿವಿಕೆ ಸರ್ಕಾರ ರಚನೆಗೆ ಮುಂದುವರಿದ ಕಸರತ್ತು

May 9, 2026
ಮನರೇಗಾ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾದ ರಾಜ್ಯ ಸರ್ಕಾರ
ಪ್ರಮುಖ ಸುದ್ದಿ

ಮನರೇಗಾ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾದ ರಾಜ್ಯ ಸರ್ಕಾರ

May 8, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.