- ದರ್ಶನ್ ಸೇರಿ ಏಳು ಮಂದಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು
- ಮಹತ್ವದ ಆದೇಶ ಹೊರಡಿಸಿದ ಸುಪ್ರೀಂ ಕೋರ್ಟ್ (Darshans bail cancelled)
- ದರ್ಶನ್ ವೃತ್ತಿ ಜೀವನದ ಮೇಲೆ ಭಾರಿ ಪರಿಣಾಮ
Bengaluru: ಕನ್ನಡ ಸಿನಿಮಾ ನಟ ದರ್ಶನ್‌ಗೆ(Darshan) ಸುಪ್ರೀಂಕೋರ್ಟ್ ಭಾರೀ ಆಘಾತ ನೀಡಿದೆ.
ಕರ್ನಾಟಕ ಹೈಕೋರ್ಟ್(High Court of Karnataka) ನೀಡಿದ್ದ ಜಾಮೀನು ಸಡಿಲಿಕೆಯನ್ನು ಉನ್ನತ ನ್ಯಾಯಾಲಯವು ಸಂಪೂರ್ಣವಾಗಿ ರದ್ದುಪಡಿಸಿದೆ.
ಕಳೆದ ವರ್ಷ ಜೂನ್ 11ರಂದು ದರ್ಶನ್ ಬಂಧಿತರಾದ ನಂತರ, ಅವರು ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆಯಬೇಕಾಯಿತು.
ಬಳಿಕ, ಬೆನ್ನು ನೋವಿನ ಕಾರಣ ನೀಡಿ ತಾತ್ಕಾಲಿಕ ಬಿಡುಗಡೆಯಾದ ಅವರು, ಡಿಸೆಂಬರ್‌ನಲ್ಲಿ ಪೂರ್ಣ ಜಾಮೀನು ಪಡೆದಿದ್ದರು.

ಆದರೆ, ಈ ನಿರ್ಧಾರವನ್ನು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ(Supreme Court) ಪ್ರಶ್ನಿಸಿತ್ತು. ಇಂದು ನ್ಯಾ. ಜೆ.ಬಿ. ಪಾರ್ದಿವಾಲಾ(J.B. Pardiwala) ಮತ್ತು ನ್ಯಾ. ಆರ್. ಮಹಾದೇವನ್(R. Mahadevan) ನೇತೃತ್ವದ ದ್ವಿಸದಸ್ಯ ಪೀಠವು ಹೈಕೋರ್ಟ್ ತೀರ್ಪಿನಲ್ಲಿ ತಾಂತ್ರಿಕ ದೋಷವಿದೆ(Technical error) ಎಂದು ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದು ಸ್ಪಷ್ಟಪಡಿಸಿದ ಪೀಠ, “ಆರೋಪಿ ಎಷ್ಟೇ ಖ್ಯಾತಿಯವರಾದರೂ, ಅವರು ಕಾನೂನಿಗಿಂತ ಮೇಲಲ್ಲ” ಎಂಬ ತೀಕ್ಷ್ಣ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ.
ನ್ಯಾಯಾಲಯವು ಕಾನೂನು ಆಡಳಿತದ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ “ಕಾನೂನಿನ ಮುಂದೆ ಯಾರೂ ದೊಡ್ಡವರೂ ಅಲ್ಲ, ಚಿಕ್ಕವರೂ ಅಲ್ಲ” ಎಂದು ಹೇಳಿದೆ.
ಇದಲ್ಲದೆ, ದರ್ಶನ್ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು(luxury facility) ಪಡೆದಿದ್ದರು ಎಂಬ ಆರೋಪಗಳನ್ನೂ ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
“ಜೈಲಿನಲ್ಲಿ ಆರೋಪಿ 5-ಸ್ಟಾರ್ ತರದ ಜೀವನ ನಡೆಸಿದರೆ, ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಾಗಿತ್ತು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ದರ್ಶನ್ ಮಾತ್ರವಲ್ಲ, ಅವರೊಂದಿಗೆ ಆರೋಪಿಗಳಾದ ಪವಿತ್ರಾ ಗೌಡ(Pavitra Gowda), ಜಗದೀಶ್ ಅಲಿಯಾಸ್ ಜಗ್ಗ, ಅನುಕುಮಾರ್ ಅಲಿಯಾಸ್ ಅನು,
ಪ್ರದೂಶ್, ನಾಗರಾಜು ಅಲಿಯಾಸ್ ನಾಗ, ಲಕ್ಷ್ಮಣ್ ಇವರ ಜಾಮೀನುಗಳನ್ನೂ ರದ್ದುಪಡಿಸಲಾಗಿದೆ. ಸರ್ಕಾರದ ಪರ ವಕೀಲರು, “ನಾವು ಕಲೆಹಾಕಿದ ಸಾಕ್ಷ್ಯವನ್ನು ಸುಪ್ರೀಂ ಒಪ್ಪಿಕೊಂಡಿದೆ.
ಜೈಲಿನಲ್ಲಿದ್ದ ಐಷಾರಾಮಿ ಬದುಕು ಹಾಗೂ ಹೊರಬಂದ ನಂತರ ಅವರ ನಡೆ-ನುಡಿಗಳನ್ನು ನಾವು ಕೋರ್ಟ್‌ಗೆ ಮನವಿ ಮಾಡಿದ್ದೇವೆ” ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ವಿಚಾರಣೆ ಸಮಯದಲ್ಲಿ, ಜುಲೈ 24ರಂದು ಪೀಠವು ತೀರ್ಪನ್ನು ಕಾಯ್ದಿಟ್ಟಿತ್ತು. ಇದಕ್ಕೂ ಮುನ್ನ, ಜುಲೈ 17ರಂದು ಪೀಠವು ಹೈಕೋರ್ಟ್ ಜಾಮೀನು ನೀಡುವ ಕ್ರಮದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು.
ಹೈಕೋರ್ಟ್ ತೀರ್ಪು ಮೂಲತಃ ಆರೋಪಿಗಳಿಗೆ ಖುಲಾಸೆಯಂತೆ ಪರಿಣಮಿಸಿದೆ ಎಂದು ನ್ಯಾಯಾಧೀಶರು ಸೂಚಿಸಿದ್ದರು.ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಾಮಾಣಿಕತೆಯನ್ನು ಪರಿಶೀಲಿಸಲು ಸಾಕ್ಷಿ ಇದೆಯೇ ಎಂದು ರಾಜ್ಯವನ್ನು ಸುಪ್ರೀಂಕೋರ್ಟ್ ಕೇಳಿತ್ತು. ಜೊತೆಗೆ, ಹೈಕೋರ್ಟ್ ತನ್ನ ವಿವೇಚನೆ ಬಳಸುವಲ್ಲಿ ಎಲ್ಲಿ ತಪ್ಪುಮಾಡಿದೆ ಎಂಬುದನ್ನು ಕೋರ್ಟ್ ಸ್ಪಷ್ಟಪಡಿಸಿತ್ತು.
ಇದನ್ನು ಓದಿ : ಅ*ಚಾರಿ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ! ಜೀವಾವಧಿ ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ನ್ಯಾಯಾಲಯ
ಈ ತೀರ್ಪು ದರ್ಶನ್ ಅವರ ವೈಯಕ್ತಿಕ ಹಾಗೂ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ನೀಡಿದೆ. ಇದುವರೆಗೆ ಜಾಮೀನಿನ ಸಹಾಯದಿಂದ ಹೊರಗೆ ನಿರಾಳವಾಗಿ ಓಡಾಡಿಕೊಂಡಿದ್ದ ಅವರು, ಈಗ ಮತ್ತೆ ಬಳ್ಳಾರಿ ಜೈಲು ಸೇರಬೇಕಾಗಿದೆ. ಅಭಿಮಾನಿಗಳಿಗೆ ಇದು ಭಾರೀ ನಿರಾಶೆ ಉಂಟುಮಾಡಿದೆ. (Darshans bail cancelled)