Tamilnadu : ತಮಿಳುನಾಡಿನ ಕೊಯಮತ್ತೂರಿನ(Coimbatore) 22 ವರ್ಷದ ಯುವಕನೊಬ್ಬ ಡೇಟಿಂಗ್ ವೆಬ್‌ಸೈಟ್ (Dating Website Fraud) ಬಳಸುತ್ತಿದ್ದಾಗ ವಂಚಕನೊಬ್ಬನಿಂದ 7.84 ಲಕ್ಷ ರೂ. ಉಂಡೇನಾಮ ಹಾಕಿಸಿಕೊಂಡಿದ್ದಾನೆ.

ಅಕ್ಟೋಬರ್ 15 ರಂದು, 22 ವರ್ಷದ ಥಿಯಾಗು ಎಂಬ (Dating Website Fraud) ಯುವಕ ಗೂಗಲ್‌ನಲ್ಲಿ ಲೊಕಾಂಟೊ ಡೇಟಿಂಗ್ ವೆಬ್‌ಸೈಟ್‌ನಲ್ಲಿ ತನಗೆ ಬೇಕಾದ ಒಂದು ಸಂಗತಿಯನ್ನು ಪಡೆಯಲು ಜಾಲವನ್ನು ಹುಡುಕಾಡಿದ್ದಾನೆ.
ಈ ವೇಳೆ ಸ್ವಲ್ಪ ಸಮಯದ ನಂತರ, ಅಪರಿಚಿತ ವ್ಯಕ್ತಿಯೊಬ್ಬನು ತನ್ನನ್ನು ತಾನು ಕುಮಾರ್ ಎಂದು ಪರಿಚಯಿಸಿಕೊಂಡಿದ್ದಾನೆ ಮತ್ತು ತಾನು ಕಾಲ್ ಗರ್ಲ್ ಮತ್ತು ಮಸಾಜ್ ಸೇವೆಯನ್ನು ಏರ್ಪಡಿಸುವುದಾಗಿ ಹೇಳಿದ್ದಾನೆ.
ಅಪರಿಚಿತ ವ್ಯಕ್ತಿ ಹೇಳಿದ ಮಾತನ್ನೆಲ್ಲಾ ಕೇಳಿ ನಂಬಿದ ಯುವಕ, ಆತ ಕೊಟ್ಟ ವಿಳಾಸವನ್ನು ಅನುಸರಿಸಿ ಅಲ್ಲಿಗೆ ಹೋಗಿದ್ದಾನೆ.
ಅಪರಿಚಿತ ವ್ಯಕ್ತಿ ಮೊದಲು 2500 ರೂ. ಪಾವತಿ ಮಾಡಿಸಿಕೊಂಡಿದ್ದಾನೆ, ತದನಂತರ ವಿಳಾಸ ಕೊಟ್ಟು ಅಲ್ಲಿಗೆ ಬರಲು ಹೇಳಿದ್ದಾನೆ. ಈ ಆಧಾರದ ಮೇರೆಗೆ ಯುವಕ ಸ್ಥಳಕ್ಕೆ ಹೋಗಿದ್ದಾನೆ.
ಇದನ್ನೂ ಓದಿ : https://vijayatimes.com/goat-sold-at-highest/
ಯುವಕ ಸ್ಥಳಕ್ಕೆ ಹೋದ ಕೂಡಲೇ ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ಮುಂದೆ ಏನು ಮಾಡಬೇಕು? ಎಂದು ಕೇಳಿದಾಗ, ಆತ ರೂಂಮಿನಲ್ಲಿ ಇರುವ ಹುಡುಗಿಯ ಸುರಕ್ಷತೆ ಹಾಗೂ ನೀನು ಆ ರೂಂ ಪ್ರವೇಶಿಸಲು ನಾನು ಹೇಳಿದ ಹಣವನ್ನು ಈ ಕೂಡಲೇ ಟ್ರಾನ್ಸ್‌ಫರ್ ಮಾಡಬೇಕು ಎಂದು ಹೇಳಿದ್ದಾನೆ.
ಇದನ್ನು ಬಲವಾಗಿ ನಂಬಿದ ಯುವಕ, ಅಪರಿಚಿತ ವ್ಯಕ್ತಿಯ ಖಾತೆಗೆ ಒಟ್ಟು 7,84,000 ರೂ. ಹಣವನ್ನು ಕಳಿಸಿದ್ದಾನೆ. ಇದಾದ ಬಳಿಕ ಹೋಟೆಲ್ ಬಳಿ ಕಾದುಕುಳಿತ ಯುವಕನಿಗೆ ತಿಳಿದದ್ದು, ತಾನು ಮೋಸ ಹೋಗಿದ್ದೇನೆ ಎಂದು!
ಅಪರಿಚಿತ ವ್ಯಕ್ತಿಗೆ ಎಷ್ಟೇ ಬಾರಿ ಕರೆ ಮಾಡಿದರೂ ಆತ ಉತ್ತರಕ್ಕೆ ಸಿಕ್ಕಿಲ್ಲ! ಗಾಬರಿಗೊಂಡ ಯುವಕ ಕೂಡಲೇ ಸೈಬರ್ ಪೊಲೀಸರನ್ನು(Cyber Police) ಭೇಟಿ ಮಾಡಿ ದೂರು ದಾಖಲಿಸಿದ್ದಾನೆ.

ತಾನು ಮೋಸ ಹೋಗಿರುವುದರ ಬಗ್ಗೆ ನನಗೆ ಬಹಳ ಹೊತ್ತು ಕಳೆದ ಮೇಲೆ ತಿಳಿದಿದೆ ಎಂದು ಹೇಳಿಕೊಂಡಿದ್ದಾನೆ. ಪೊಲೀಸರು ಯುವಕನ ದೂರನ್ನು ಪರಿಶೀಲಿಸಿ,
ಐಪಿಸಿ ಸೆಕ್ಷನ್ 420 ಮತ್ತು 2008 ರ ಐಟಿ ತಿದ್ದುಪಡಿ ಕಾಯ್ದೆಯ 66 (ಡಿ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.