Bellari : ತನ್ನ ಮಗಳು ಬೇರೆ ಸಮುದಾಯದ ಹುಡುಗನ ಜೊತೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಮನನೊಂದ ತಂದೆಯೇ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದಿರುವ ಮರ್ಯಾದಾ ಹತ್ಯೆ(Daughter Killed By Father) ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕದ(Karnataka) ಬಳ್ಳಾರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಗಳು ಪ್ರೀತಿಸುತ್ತಿರುವ ವಿಷಯ ತಿಳಿದು ಹಲವು ಬಾರಿ ಎಚ್ಚರಿಕೆ ನೀಡಿದರೂ, ಪ್ರಿಯಕರನೊಂದಿಗೆ ಪ್ರೀತಿಯ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದ್ದಾಳೆ.
ಎಷ್ಟೇ ಬಾರಿ ಹೇಳಿದರೂ ಕಿವಿಗೊಡದ ಮಗಳ ವರ್ತನೆಯನ್ನು ಕಂಡು ಕೋಪಗೊಂಡ ತಂದೆ, ತನ್ನ ಮಗಳನ್ನು ಬಳ್ಳಾರಿ ಜಿಲ್ಲೆಯ ಕುಡತಿನಿ ಸಮೀಪವಿರುವ ಕಾಲುವೆಗೆ ತಳ್ಳಿದ್ದಾನೆ.
ಇದನ್ನೂ ಓದಿ : https://vijayatimes.com/govt-school-student-questions/
ಕೃತ್ಯ ಎಸಗಿದ ಬಳಿಕ ಪೊಲೀಸರ ಬಳಿ ಸಿಲುಕಿಕೊಂಡ ಬಳಿಕ ತಾನೇ ತನ್ನ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅಕ್ಟೋಬರ್ 31 ರಂದು ಈ ಕೃತ್ಯ ನಡೆದಿದ್ದು, ಆರೋಪಿ ಓಂಕಾರ್ ಗೌಡ (Daughter Killed By Father)ತನ್ನ ಮಗಳನ್ನು ಸಿನಿಮಾಗೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ.
ತಮ್ಮ ಮನೆಯಿಂದ ಸಿನಿಮಾ ನೋಡಲು ಹೊರಬಂದ ತಂದೆ-ಮಗಳು ಚಿತ್ರಮಂದಿರಕ್ಕೆ ಹೋಗಿಲ್ಲ! ಚಿತ್ರಮಂದಿರ ಬಿಟ್ಟು ದೇವಸ್ಥಾನಕ್ಕೆ ಹೋಗಿ,
ಬಳಿಕ ಹತ್ತಿರದ ಅಂಗಡಿಯಿಂದ ಮಗಳಿಗೆ ಆಭರಣಗಳನ್ನು ಕೊಡಿಸಿದ್ದಾನೆ. ಅಲ್ಲಿಂದ ಮಗಳನ್ನು ಆ ಪ್ರದೇಶದ ಹೈಲೆವೆಲ್ ಕಾಲುವೆಗೆ ಕರೆದೊಯ್ದು ನೀರಿಗೆ ತಳ್ಳಿದ್ದಾರೆ.

ಸಹಾಯಕ್ಕಾಗಿ ಬಾಲಕಿ ಕೂಗಿಕೊಂಡರೂ ಆಕೆಯ ತಂದೆ ಸಹಾಯ ಮಾಡದೆ ನಿಂತು ನೋಡಿದ್ದಾರೆ. ಮಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂಬುದನ್ನು ಖಚಿತಪಡಿಸಿಕೊಂಡ ಮೇಲೆ ಹೋಗಿದ್ದಾನೆ ಎನ್ನಲಾಗಿದೆ.
ಕೊಲೆ ಮಾಡಿದ ಬಳಿಕ ರಾತ್ರೋರಾತ್ರಿ ತಿರುಪತಿಗೆ ಪರಾರಿಯಾಗಿದ್ದಾನೆ. ಆದರೆ, ಯುವತಿಯ ತಾಯಿ ಮತ್ತು ಸಹೋದರ ಕುಡತಿನಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : https://vijayatimes.com/bbmp-quicks-up/
ಮಂಗಳವಾರ ತಂದೆ ಓಂಕಾರಗೌಡ ವಾಪಸ್ ಬಂದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ವಿಚಾರಣೆ ನಡೆಸಿದಾಗ ಮಗಳನ್ನು ಕೊಂದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಯುವತಿಯ ಶವಕ್ಕಾಗಿ ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.