- ರಾಹುಲ್ ಕ್ಯಾಚ್ ಕೈಚೆಲ್ಲಿ ಪಂದ್ಯ ಸೋತ ಆರ್‌ಸಿಬಿ
- ತವರು ಮೈದಾನದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ
- ಆರ್‌ಸಿಬಿ ವಿರುದ್ಧ ಗೆಲುವಿನ ಬಳಿಕ ಫ್ರಾಂಚೈಸಿಗೆ ತಿರುಗೇಟು ಕೊಟ್ಟ ಕೆಎಲ್ ರಾಹುಲ್!
Bengaluru: ಐಪಿಎಲ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಬೆಂಗಳೂರು (DC wins against RCB) ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ನೀಡಿದ 164 ರನ್ ಗಳ ಗುರಿಯನ್ನು ಡೆಲ್ಲಿ ತಂಡ ಕೇವಲ 17.5 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯ ದಾಖಲಿಸಿತು. ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ನಡೆಸಿ ಅಜೇಯ 93ರನ್ ಗಳಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಸ್ಟಬ್ಸ್ ಅಜೇಯ 38 ರನ್ ಗಳಿಸಿದರು.
ಇನ್ನು ಈ ಪಂದ್ಯದಲ್ಲಿ ಆರ್ ಸಿಬಿ ಕಡಿಮೆ ಮೊತ್ತದ ಹೊರತಾಗಿಯೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. 58 ರನ್ ಗಳಿಗೇ ಡೆಲ್ಲಿ ತಂಡದ 4 ವಿಕೆಟ್ ಗಳನ್ನು ಪಡೆದು ಉತ್ತಮ ಲಯದಲ್ಲಿತ್ತು. ಆದರೆ ಡೆಲ್ಲಿ ಪರ ಕೆಎಲ್ ರಾಹುಲ್ ಅಮೋಘ ಪ್ರದರ್ಶನ ನೀಡಿ ಪಂದ್ಯವನ್ನು ಆರ್ ಸಿಬಿ ಕೈಯಿಂದ ಕಸಿದರು.
ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 93 ರನ್ ಗಳಿಸಿದರು.ಡೆಲ್ಲಿ ಇನ್ನಿಂಗ್ಸ್ ವೇಳೆ 4ನೇ ಓವರ್ ನಲ್ಲಿ ಕೆಎಲ್ ರಾಹುಲ್ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಯಶ್ ದಯಾಳ್ ಎಸೆದ ಆ ಓವರ್ ನ 2ನೇ ಎಸೆತದಲ್ಲಿ ಕೆಎಲ್ ರಾಹುಲ್ ಎಕ್ಸ್ಟ್ರಾ ಕವರ್ ನತ್ತ ಗಾಳಿಯಲ್ಲಿ ಭಾರಿಸಿದ್ದರು.
ಈ ವೇಳೆ ಕವರ್ ನಲ್ಲಿದ್ದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಓಡಿ ಕ್ಯಾಚ್ ಪಡೆಯುವ ಪ್ರಯತ್ನ ಪಟ್ಟರಾದರೂ ಅದು (DC wins against RCB) ಸಾಧ್ಯವಾಗಲಿಲ್ಲ. ಹೀಗಾಗಿ ರಾಹುಲ್ ಗೆ ಇಲ್ಲಿ ಜೀವದಾನ ದೊರೆಯಿತು. ಹಾಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ.
ಇದನ್ನು ಓದಿ : ರಾಜ್ಯಕ್ಕೆ ಮತ್ತೆ ಬೆಲೆ ಏರಿಕೆ ಶಾಕ್, ಮದ್ಯರಾತ್ರಿಯೇ ಡೀಸೆಲ್ ಬೆಲೆ 2 ರೂಪಾಯಿ ಹೆಚ್ಚಳ, ರಾಜ್ಯಸರ್ಕಾರದ ವಿರುದ್ಧ ಜನಾಕ್ರೋಶ!
ಕೆಎಲ್ ರಾಹುಲ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 9 ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಅರ್ಧಶತಕ ಬಾರಿಸಿದರು. ಗೆಲುವಿನ ಶಾಟ್ ಬಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 6 ವಿಕೆಟ್‌ಗಳ ಜಯ ತಂದುಕೊಟ್ಟ ಕೆಎಲ್ ರಾಹುಲ್, ಆರ್‌ಸಿಬಿ ಅಭಿಮಾನಿಗಳು ಹಾಗೂ ಫ್ರಾಂಚೈಸಿ ಮಾಲೀಕರನ್ನೇ ಗುರಿಯಾಗಿಸಿಕೊಂಡು ಭಾವುಕರಾಗಿ ಸಂಭ್ರಮ ಮಾಡಿದರು.
ಗೆಲುವಿನ ರನ್ ಬಾರಿಸಿದ ಬೆನ್ನಲ್ಲಿಯೇ, ಬ್ಯಾಟ್ ಮೂಲಕ ಮೈದಾನದಲ್ಲಿ ವೃತ್ತ ರಚಿಸುವಂತೆ ಮಾಡಿ, ಇದು ನನ್ನ ಗ್ರೌಂಡ್, ಇಲ್ಲಿ ನಾನೇ ಕಿಂಗ್ ಎನ್ನುವ ರೀತಿಯಲ್ಲಿ ಸನ್ನೆ ಮಾಡಿ ತೋರಿಸಿದರು.ಆ ಮೂಲಕ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳದ ಫ್ರಾಂಚೈಸಿ ವಿರುದ್ಧವೂ ಕೆಎಲ್ ರಾಹುಲ್ ಅಸಮಾಧಾನ ತೋರಿಸಿದರು.
ಅದರೊಂದಿಗೆ ಸಹ ಆಟಗಾರನಿಗೆ ಗೆಲುವಿನ ಹಸ್ತಲಾಘವ ಮಾಡುವ ಮುನ್ನ, ಎದೆ ಮುಟ್ಟಿಕೊಂಡು, ಇಟ್ಸ್ ಮೈ ಗ್ರೌಂಡ್ ಎಂದು ಹೇಳಿರುವುದೂ ದಾಖಲಾಗಿದೆ.