Madhya Pradesh : ವ್ಯಕ್ತಿಯೊಬ್ಬ ತನ್ನ ಅಣ್ಣನ 4 ವರ್ಷದ ಬಾಲಕಿ ಅಪಘಾತದಲ್ಲಿ(Accident) ಸಾವನ್ನಪ್ಪಿದ್ದಾಳೆ. ಅಪಘಾತದಲ್ಲಿ ಸಾವನ್ನಪ್ಪಿದ ಬಾಲಕಿಗೆ ತುರ್ತು ಚಿಕಿತ್ಸೆ(Deadbody on shoulder) ಹಾಗೂ ತುರ್ತು ಸೇವೆ ದೊರೆತಿಲ್ಲ.

ಬಾಲಕಿಯ ಮೃತದೇಹವನ್ನು ವ್ಯಕ್ತಿ ತನ್ನ ಭುಜದ ಮೇಲೆ ಹೊತ್ತುಕೊಂಡು ಬಸ್ ನಿಲ್ದಾಣಕ್ಕೆ ಬಂದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಅಪಘಾತದಲ್ಲಿ ಮೃತಪಟ್ಟ ತನ್ನ ಅಣ್ಣನ ನಾಲ್ಕು ವರ್ಷದ ಮಗಳ ಶವವನ್ನು ವ್ಯಕ್ತಿಯೊಬ್ಬರು ಹೊತ್ತುಕೊಂಡು ತನ್ನ ಗ್ರಾಮಕ್ಕೆ ಬಸ್ ಮೂಲಕ ಹೋಗಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಪುಟ್ಟ ಬಾಲಕಿ ಗ್ರಾಮದಲ್ಲಿ ಸಾವನ್ನಪ್ಪಿದ್ದು, ಆಕೆಯ ದೇಹವನ್ನು ಮರಣೋತ್ತರ (Deadbody on shoulder) ಪರೀಕ್ಷೆಗಾಗಿ ಛತ್ತರ್‌ಪುರದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಆದರೆ ಆಕೆಯ ತಮ್ಮ ಹಳ್ಳಿಗೆ ಹಿಂತಿರುಗುವುದು ವ್ಯಕ್ತಿ ಬಹಳ ಕಷ್ಟಕರ ಪರಿಸ್ಥಿತಿಯಾಗಿತ್ತು, ಈ ಹಿನ್ನಲೆ ಮೊದಲೇ ದುಃಖದಲ್ಲಿದ್ದ ವ್ಯಕ್ತಿ ಮುಂದಿನ ಹೆಜ್ಜೆಯ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
ಇದನ್ನೂ ಓದಿ : https://vijayatimes.com/simple-tips-for-good-health/
ಮಗುವಿನ ದೇಹವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ತನ್ನ ಗ್ರಾಮಕ್ಕೆ ಹೋಗಲು ಮುಂದಾದ ವ್ಯಕ್ತಿಗೆ ಸರ್ಕಾರಿ ಶವ ವಾಹನವೂ ಸಿಗದೆ ಖಾಸಗಿ ವಾಹನವೂ ಸಿಗದೆ,
ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗಿ ತನ್ನ ಗ್ರಾಮಕ್ಕೆ ಬಸ್ ಹತ್ತಿದ್ದಾರೆ. ಮೃತದೇಹವನ್ನು ಗ್ರಾಮಕ್ಕೆ ಸಾಗಿಸಲು ಬಸ್ ಹತ್ತಿದ ವ್ಯಕ್ತಿಗೆ ಟಿಕೆಟ್ ಖರೀದಿಸಲು ಬೇಕಾದ ಕನಿಷ್ಠ ಹಣವೂ ಇರಲಿಲ್ಲ.
ಆದ್ರೆ, ಆತನ ಪಕ್ಕದಲ್ಲೇ ಇದ್ದ ಮತ್ತೊಬ್ಬ ಪ್ರಯಾಣಿಕ ಅವರ ಪ್ರಯಾಣ ದರವನ್ನು ಪಾವತಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಇದೇ ರೀತಿ ಮತ್ತೊಂದು ಘಟನೆ ಕೂಡ ವರದಿಯಾಗಿದೆ. ಒಂದೇ ಊರಿನಲ್ಲಿ ಇಂಥ ಎರಡು ಘಟನೆಗಳು ನಡೆದಿದೆ.

ಅದ್ರೆ, ಆರೋಗ್ಯ ಇಲಾಖೆ ಏನು ಮಾಡುತ್ತಿದೆ? ಜನಸಾಮಾನ್ಯರಿಗೆ ಕನಿಷ್ಠ ತುರ್ತು ಸೇವೆ ಒದಗಿಸಲು ತಯಾರಿಲ್ಲ ಎಂದಾದರೆ ಇಂಥ ಸರ್ಕಾರ ಏಕೆ? ಎಂದು ಸಾಮಾಜಿಕ ಜಾಲತಾಣದಲ್ಲಿ ನಟ್ಟಿಗರು ಆಡಳಿತದವರನ್ನು ತರಾಟಗೆ ತೆಗೆದುಕೊಂಡಿದ್ದಾರೆ.
ಎರಡೂ ಘಟನೆಗಳು ಛತ್ತರ್‌ಪುರದಲ್ಲಿ ನಡೆದಿದ್ದು, ಜಿಲ್ಲೆಯಲ್ಲಿ ತುರ್ತು ಸೌಲಭ್ಯಗಳ ಕೊರತೆಯ ಬಗ್ಗೆ ಪ್ರಶ್ನೆಗಳ ಸುರಿಮಳೆ ಹರಿದುಬಂದಿದೆ.