ಕೆಆರ್ ಪುರಂನಲ್ಲಿದೆ ಡೆಡ್ಲಿ ರೈಲ್ವೇಗೇಟ್‌! ! ಟ್ರ್ಯಾಕ್‌ ಡಾಟಿದ್ರೆ ದಾಳಿ ಮಾಡುತ್ತೆ ಆ ಡೇಂಜರಸ್‌ ಗ್ಯಾಂಗ್. ಮರ್ಡರ್ ಮಾಡಿದ್ರೂ ಪೊಲೀಸರಿಂದ ಕ್ರಮ ಇಲ್ಲ

ಈ ರೈಲ್ವೇ ಟ್ರ್ಯಾಕ್‌ ಅತ್ಯಂತ ಡೆಡ್ಲಿ. ಭಯಂಕರ ಡೇಂಜರ್‌. ಈ ಟ್ರ್ಯಾಕ್‌ನಲ್ಲಿ ಓಡಾಡಬೇಕಾದ್ರೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕು. ಯಾಕಂದ್ರೆ ಇಲ್ಲಿ ಯಾವಾಗ ಬೇಕಾದ್ರೂ ಆ ಡೇಂಜರಸ್‌ ಗ್ಯಾಂಗ್ ನಿಮ್ಮ ಮೇಲೆ ಆಟ್ಯಾಕ್ ಮಾಡಬಹುದು. ಅಷ್ಟು ಮಾತ್ರವಲ್ಲ ಇಲ್ಲಿ ಎರಡು ಮೂರು ಮರ್ಡರ್‌ ಕೂಡ ಆಗಿದೆಯಂತೆ.

ಇಷ್ಟೊಂದು ಭಯಹುಟ್ಟಿಸೋ ಈ ರೈಲ್ವೆ ಟ್ರ್ಯಾಕ್ ಇರೋದು ನಮ್ಮ ರಾಜಧಾನಿ ಬೆಂಗಳೂರಿನ ಕೆ,ಆರ್.ಪುರಂನಲ್ಲಿ. ಯಸ್‌, ಕೆಆರ್ ಪುರಂನ ದೇವಸಂದ್ರದಿಂದ ಬಿ ನಾರಾಯಣಪುರಕ್ಕೆ ಹಾದುಹೋಗುವಾಗ ಸಿಗೋ ರೈಲ್ವೇ ಟ್ರ್ಯಾಕೇ ಜನರಿಗೆ ದುಸ್ವಪ್ನವಾಗಿ ಕಾಡುತ್ತಿರೋದು.

ಈ ರೈಲ್ವೇ ಟ್ರ್ಯಾಕ್‌ ಇರೋ ಜಾಗದಲ್ಲಿ ಅನೇಕ ವರ್ಷಗಳಿಂದಲೂ ದರೋಡೆ ನಡೆಯುತ್ತಿದೆ. ಹಾಡಹಗಲೇ ಜನರಿಗೆ ಚೂರಿತೋರಿಸಿ ಲೂಟಿ ಮಾಡ್ತಾರಂತೆ. ಈ ಜಾಗದಲ್ಲಿ ಮಹಿಳೆಯರು ಮಕ್ಕಳು ಓಡಾಡಲು ಭಾರೀ ಭಯಪಡುತ್ತಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ನಟೋರಿಯಸ್‌ ಗ್ಯಾಂಗ್‌ನ ಮೈನ್‌ ಟಾರ್ಗೆಟ್ ಗಾರ್ಮೆಂಟ್ ಮಹಿಳೆಯರು. ಮಹಿಳೆಯರು ಕೆಲಸ ಮುಗಿಸಿ ಬರುವ ವೇಳೆ ಚಾಕು ಹಿಡಿದು ಅಡ್ಡಗಟ್ಟಿ ಹಣ, ಸರ, ಮೊಬೈಲ್ ಕಿತ್ತುಕೊಳ್ಳುತ್ತಾರೆ.

ಅಷ್ಟೇ ಅಲ್ಲ ಈ ಪುಂಡರು ಹೆಣ್ಮಕ್ಕಳಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ರ ಯಾರು ಸ್ಪಂದಿಸುತ್ತಿಲ್ಲವಂತೆ. ಇಲ್ಲಿ ಪೊಲೀಸ್‌ ಪಹರೆ ಹಾಕಿದ್ರೆ ಪುಂಡರ ಹೆಡೆಮುರಿ ಕಟ್ಟಬಹುದು ಅನ್ನೋದು ಸಾರ್ವಜನಿಕರ ಅಭಿಪ್ರಾಯ.

ಇದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ಕ್ಷೇತ್ರ. ಇಲ್ಲಿ ಹಾಡ ಹಗಲೇ ಇಂಥಾ  ದುರ್ಘಟನೆ ನಡೆಯುತ್ತಿವುದು ನಾಚಿಕೆಗೇಡಿನ ವಿಚಾರ. ಅನೇಕ ವರ್ಷಗಳಿಂದಲೂ ಇಂಥಾ ಕುಕೃತ್ಯ  ನಡೆಯುತ್ತಿದ್ದರೂ ಯಾರೂ ಹೇಳೋರಿಲ್ಲ ಕೇಳೋರಿಲ್ಲ. ಈಗಲಾದ್ರೂ ಶಾಸಕರು ಎಚ್ಚೆತ್ತುಕೊಂಡು ಇಲ್ಲಿ ಪೊಲೀಸ್‌ ಪಹರೆ ಹಾಕಲಿ. ಹೆಣ್ಣುಮಕ್ಕಳು ನಿರ್ಭಯವಾಗಿ ಓಡಾಡುವಂತಾಗಲಿ. ಪುಂಡರ ಪುಂಡಾಡಕ್ಕೆ ಬ್ರೇಕ್ ಬೀಳಲಿ

ಕೆ.ಆರ್‌ಪುರಂನಿಂದ ಪವಿತ್ರ, ಸಿಟಿಜನ್ ಜರ್ನಲಿಸ್ಟ್‌, ವಿಜಯಟೈಮ್ಸ್

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.