Health : ಬಾಯಿಗೆ ರುಚಿ ಅನ್ನಿಸೋ ಈ ಸಾಸ್(Deadly Sauce) ಅನ್ನು ಯಾವ ರೀತಿ ತಯಾರಿಸಲಾಗುತ್ತೆ? ಇದ್ರಲ್ಲಿ ಎಂಥೆಂಥಾ ವಿಷಕಾರಿ ಕೆಮಿಕಲ್ಗಳನ್ನು(Chemicals) ಬಳಸಲಾಗುತ್ತೆ? ಸಾಸ್ ಕೆಡದೇ ಇರಲು ಕಾರಣ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಭಯಾನಕ ಉತ್ತರ ಓದಿ.

ಮೀನಿನ ತಲೆಯಿಂದ ಸಾಸ್ : ಮೊದಲನೆಯದಾಗಿ ಸಾಸ್ ತಯಾರಿಕೆಯನ್ನು ಆರಂಭಮಾಡಿದ್ದು ಚೀನಾ ದೇಶ. ಆದರೆ ಈ ಸಾಸ್(Deadly Sauce) ನಲ್ಲಿ ಯಾವುದೇ ತರಹದ ಟೊಮೆಟೊ ಪೇಸ್ಟ್(Tamoto Paste) ಅಥವಾ ಪ್ಯೂರಿಯನ್ನು ಉಪಯೋಗಿಸುತ್ತಿರಲಿಲ್ಲ. ಬದಲಾಗಿ ಮೀನಿನ ತಲೆಯಿಂದ ಸಾಸ್ ಅನ್ನು ತಯಾರಿಸಲಾಗುತ್ತಿತ್ತು.
ಆನಂತರ ಹತ್ತೊಂಬತ್ತನೇ ಶತಮಾನದಲ್ಲಿ ಈಗಿನ ಹೈನ್ಸ್ ಕಂಪನಿ ಟೊಮ್ಯಾಟೊ ಸಾಸ್ ಅನ್ನು ಉತ್ಪಾದಿಸಲು ಪ್ರಾರಂಭಿಸಿತು. ಆದ್ರೆ ಈ ಕಂಪೆನಿ ಸಾಸ್ನಲ್ಲಿ(Deadly Sauce) ಸಂಪೂರ್ಣವಾಗಿ ಟೊಮೊಟೊವನ್ನು ಬಳಕೆ ಮಾಡುತ್ತಿರಲಿಲ್ಲ.
ಬದಲಾಗಿ ಒಂದಿಷ್ಟು ರಾಸಾಯನಿಕಗಳನ್ನು ಬಳಸಿ ಸಾಸ್ ತಯಾರಿಸಲು ಪ್ರಾರಂಭಿಸಿತು.
ಇದನ್ನೂ ಓದಿ : https://vijayatimes.com/infosys-narayanamurthy-statement/
ಮುಂದೆ ಈ ಸಾಸ್ ತಿನ್ನುವವರ ಸಂಖ್ಯೆ ಹೆಚ್ಚಿತು, ಉತ್ಪಾದನೆಯೂ ವಿಪರೀತ ಪ್ರಮಾಣಕ್ಕೆ ಏರಿತು. ಈಗಿನ ಮಕ್ಕಳು ಊಟಕ್ಕೆ ಉಪ್ಪಿನಕಾಯಿ ಬದಲು ಸಾಸನ್ನೇ ತಿನ್ನೋ ಮಟ್ಟಕ್ಕೆ ಸಾಸ್ ಜನಪ್ರಿಯತೆ ಗಳಿಸಿದೆ.
ಬಳಸ್ತಾರೆ ಡೇಂಜರಸ್ ಕೆಮಿಕಲ್ : ನೀವು ಸೇವಿಸುವ ಸಾಸನ್ನು ಹೇಗೆ ತಯಾರು ಮಾಡ್ತಾರೆ ಅನ್ನೋದನ್ನು ಒಮ್ಮೆಯಾದ್ರೂ ಯೋಚನೆ ಮಾಡಿದ್ದೀರಾ?
ಇಲ್ಲವಾದರೆ ಇಲ್ಲಿ ಕೇಳಿ. ಯಾವುದೇ ಸಾಸ್ ಮಾಡಲು ಮೊದಲನೆಯದಾಗಿ ಬಳಸೋ ವಸ್ತುಗಳಂದ್ರೆ ಶುಗರ್ ಅಂದರೆ ಐ ಫ್ರುಕ್ಟೋಸ್ ಕಾರ್ನ್ ಸಿರಪ್, ಸೋಡಿಯಂ ಅಂದರೆ ಉಪ್ಪು, ಟೊಮೆಟೊ ಪೇಸ್ಟ್ , ಅಸಿಡಿಟಿ ರೆಗ್ಯುಲೇಟರ್ಸ್ ,ಪ್ರಿಸರ್ವೆಟಿವ್ಸ್ , ಸ್ಪೈಸಿ ಎಂಬ ಈ ಪ್ರಮುಖ ವಸ್ತುಗಳನ್ನು ಬಳಸುತ್ತಾರೆ.

ಮೊದಲು ನಾನು ಸಾಸ್ಗೆ ಬಳಸೋ ಶುಗರ್ ಕರಾಳ ಸತ್ಯ ಹೇಳ್ತೀನಿ. ಸಾಸ್ನಲ್ಲಿ ಬಳಸೋದೇ ಹೈ ಫ್ರುಕ್ಟೋಸ್ ಕಾರ್ನ್ ಸಿರಪ್ ಅಂದ್ರೆ ಅದು ರಿಫೈನ್ಡ್ ಶುಗರ್.
ಜೋಳದಲ್ಲಿರುವ ಸಕ್ಕರೆ ಅಂಶವನ್ನು ಹೊರತೆಗೆದು ಹೈ ಫ್ರುಕ್ಟೋಸ್ ಕಾರ್ನ್ ಸಿರಪ್ ಅನ್ನು ತಯಾರಿಸಲಾಗುತ್ತೆ.
ಆದ್ರೆ ಈ ಜೋಳದ ಸಕ್ಕರೆ ಅಂಶ ನಾವು ನಿತ್ಯ ಬಳಸೋ ಸಕ್ಕರೆಗಿಂತ ಬಹಳ ಚೀಪ್. ಹಾಗಾಗಿ ಹೆಚ್ಚಿನ ಎಲ್ಲಾ ಆಹಾರ ತಯಾರಿಸುವ ಕಂಪನಿಗಳು ಇದನ್ನೇ ಬಳಸ್ತಾರೆ. ಬಿಸ್ಕೆಟ್, ಸಾಫ್ಟ್ ಡ್ರಿಂಕ್ಸ್ ,ಜ್ಯೂಸ್, ಜಾಮ್, ಬ್ರೆಡ್ ,ಐಸ್ ಕ್ರೀಮ್ ಎಲ್ಲದರಲ್ಲೂ ಇದನ್ನು ಉಪಯೋಗಿಸುತ್ತಾರೆ.
ಈ ಕೆಮಿಕಲ್ ನಲ್ಲಿ 50% ಗುಲ್ಕೋಸ್ 50% ಫ್ರುಕ್ಟೋಸ್ ಅಂಶ ಇರುತ್ತದೆ. ಈ ಫ್ರುಕ್ಟೋಸ್ ನಮ್ಮ ಲಿವರ್ ಡ್ಯಾಮೇಜ್ ಮಾಡುತ್ತೆ. ಒಬೆಸಿಟಿ, ಬ್ಲಡ್ ಪ್ರೆಶರ್ ,ಐ ಕೊಲೆಸ್ಟ್ರಾಲ್, ಕ್ಯಾನ್ಸರ್ ಅಂತ ಅಂಶವನ್ನು ಕೂಡ ತರಬಹುದು.
ಕಂಪನಿಗಳು ಹಣ ಉಳಿಸಲು ಈ ವಿಷಕಾರಿ ಸಕ್ಕರೆಗಳನ್ನು ಸಾಸ್ನಲ್ಲೂ ಬಳಸುತ್ತಾರೆ. ಆದರೆ ಮನುಷ್ಯನ ದೇಹಕ್ಕೆ 1 ದಿನಕ್ಕೆ 4ಗ್ರಾಂ ಶುಗರ್ ಅಷ್ಟೆ ಸಾಕು.
ಆದರೆ ನಾವು ಸೇವಿಸುವ ಸಾಸ್ನಲ್ಲಿ ಬರೋಬ್ಬರಿ 25ಗ್ರಾಂ ನಷ್ಟು ಶುಗರ್ ಬಳಕೆಯಾಗುತ್ತೆ. ಇದರಿಂದ ನಮ್ಮ ದೇಹದ ಮೇಲೆ ನಾನಾ ಅಡ್ಡ ಪರಿಣಾಮಗಳು ಉಂಟಾಗುತ್ತೆ.
ಸೋಡಿಯಂನಿಂದ ಬಿಪಿ ಗ್ಯಾರಂಟಿ : ಈ ಪಾಯಿಂಟ್ ಗಮನ ಇಟ್ಟು ಕೇಳಿ. ಸಾಸ್ ತಯಾರಿಕೆಯಲ್ಲಿ ಬಳಕೆಯಾಗುವ ಮತ್ತೊಂದು ಪ್ರಮುಖ ವಸ್ತುವೆಂದರೆ ಸೋಡಿಯಂ ಅಂದರೆ ಉಪ್ಪು.
ಸಾಸ್ ತಯಾರಿಕೆಯಲ್ಲಿ ಅತಿ ಹೆಚ್ಚು ಉಪ್ಪು ಬಳಸಲಾಗುತ್ತೆ. ಒಳ್ಳೆಯ ಸುಗಂಧ ಮತ್ತು ಸಾಸ್ ಕೆಡದೇ ಇರದಂತೆ ಮಾಡಲು ಉಪ್ಪಿನ ಬಳಕೆ ಹೆಚ್ಚು ಮಾಡ್ತಾರೆ.

ಒಂದು ಟೇಬಲ್ ಸ್ಪೂನ್ ಸಾಸ್ನಲ್ಲಿ ಬರೋಬ್ಬರಿ 150 ಮಿಲಿ ಗ್ರಾಂನಷ್ಟು ಉಪ್ಪು ಅಡಗಿರುತ್ತದೆ. ನಿಮಗೆ ಗೊತ್ತೇ ಇದೆ ಹೆಚ್ಚು ಉಪ್ಪು ಸೇವಿಸಿದ್ರೆ ನಮಗೆ ಹೈಪರ್ ಟೆನ್ಷನ್, ತಲೆನೋವು, ಬಿ ಪಿ ಬರುತ್ತೆ.
ರುಚಿಗೆ ಬಳಸ್ತಾರೆ ಅಜಿನಮೋಟೋ : ಈ ಸಾಸ್ ತಯಾರಿಕೆಯಲ್ಲಿ ಬಳಸೋ ಮತ್ತೊಂದು ಅಪಾಯಕಾರಿ ವಸ್ತು ಯಾವುದು ಗೊತ್ತಾ? ಮೊನೊಸೋಡಿಯಂ ಗ್ಲುಟಾಮೇಟ್.
ಬಾಯಿಗೆ ರುಚಿಯ ಅನುಭವ ಕೊಡಲು ಮೊನೊಸೋಡಿಯಂ ಗ್ಲುಟಾಮೇಟ್ ಅಂದ್ರೆ ಅಜಿನಮೋಟೋ, ಅಥವಾ ನೀವೆಲ್ಲರೂ ಕಾಮನ್ ಆಗಿ ಹೇಳೋ ಟೇಸ್ಟಿಂಗ್ ಪೌಡರ್ ಅನ್ನು ಬಳಸ್ತಾರೆ.
ಇದನ್ನೂ ಓದಿ :https://vijayatimes.com/bjp-mp-cleaning-toilet/
ಆದರೆ ಈ ಕೆಮಿಕಲ್ ಎಷ್ಟು ಡೇಂಜರಸ್ ಅಂದ್ರೆ ಪ್ರಾಣಿಗಳಲ್ಲಿ ಕೊಬ್ಬಿನಂಶವನ್ನು ಹೆಚ್ಚಿಸಲು ಟೇಸ್ಟಿಂಗ್ ಪೌಡರ್ ಬಳಕೆ ಮಾಡಲಾಗುತ್ತೆ.
ಅಂತಹ ವಿಷಕಾರಿ ಕೆಮಿಕಲ್ ನನ್ನ ಈ ಸಾಸ್ ನಲ್ಲಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲ ಇದನ್ನು ಸೇವಿಸುವುದರಿಂದ ಟೈಪ್ 2 ಡಯಾಬಿಟೀಸ್, ಮಕ್ಕಳಲ್ಲಿ ಒಬೀಸಿಟಿ ತರಬಹುದು ಜೋಕೆ.
ಇನ್ನು ಒಂದು ಅಂಶ ನೆನಪಿಡಿ ಸ್ನೇಹಿತ್ಎ ಈ ಸೋಡಿಯಂ ಗ್ಲುಟಮೇಟ್ ಎಂಬ ಕೆಮಿಕಲ್ ನನ್ನ ಎಲ್ಲಾ ಸಂಸ್ಕರಿತ ಆಹಾರದಲ್ಲೂ ಉಪಯೋಗಿಸಲಾಗುತ್ತದೆ.
ಸಾಮಾನ್ಯವಾಗಿ ಜಾಹಿರಾತುಗಳು ತಿಳಿಸುವ ಹಾಗೆ ಸಾಸ್ನಲ್ಲಿ ಯಾವುದೇ ಫೈಬರ್, ಪ್ರೊಟೀನ್, ವಿಟಮಿನ್ ಅಂಶಗಳು ಇರುವುದಿಲ್ಲ. ಬದಲಾಗಿ ಇದರಿಂದ ನಮಗೆ ಸಿಗುವುದು ಕೇವಲ ರೋಗಗಳು.
ಕೆಡದಿರೋ ಕೆಮಿಕಲ್ನಿಂದ ಕ್ಯಾನ್ಸರ್ : ಸ್ನೇಹಿತ್ರೆ ನಾನು ನಿಮಗೆ ಪದೇ ಪದೇ ಹೇಳ್ತಿದ್ದೀನಿ ಆಹಾರ ಕೆಡದಂತೆ ಬಳಸೋ ರಾಸಾಯನಿಕಗಳು ಡೆಡ್ಲಿ.
ಈ ಸಾಸ್ನಲ್ಲೂ ಚೀನಾದ ಪ್ರಿಸರ್ವೇಟಿವ್ಸ್ ನ್ನು ಬಳಕೆಯಾಗುತ್ತಿದೆ. ಇದು ನಮಗೆ ಹೆಚ್ಚು ದಿನ ಬರಲು ಸಹಾಯ ಮಾಡುತ್ತದೆ. ಇದರಿಂದ ಕ್ಯಾನ್ಸರ್ ಬರಬಹುದು ಎಚ್ಚರ.
ಇನ್ನೂ ಸಾಸ್ ಬಳಕೆಯಲ್ಲಿ ಉಪಯೋಗ ವಾಗುವ ಮತ್ತೊಂದು ಕೆಮಿಕಲ್ ಎಂದರೆ ಡಿಸ್ಟಿಲ್ಡ್ ವಿನಿಗರ್. ಇದು ಮೋನೋಸೋಡಿಯಂ ಗ್ಲುಟಮೇಟ್ ನಿಂದ ಹೊರ ತೆಗೆಯಲಾಗುವ ಸಿರಪ್.
ಈ ಡಿಸ್ಟಿಲ್ಡ್ ವಿನೆಗರ್ ನಲ್ಲಿ ಭಾರಿ ಪ್ರಮಾಣದ ಕೆಮಿಕಲ್ಸ್ ಮತ್ತು ಪೆಸ್ಟಿಸೈಡ್ಸ್ ಅಂಶವನ್ನು ಹೊಂದಿರುತ್ತದೆ. ಇದು ನಮ್ಮ ದೇಹಕ್ಕೆ ಮಾರಣಾಂತಿಕ ಕಾಯಿಲೆಗಳನ್ನು ತರಬಹುದು ಜೊಕೆ.
ಇದನ್ನೂ ಓದಿ : https://vijayatimes.com/hd-kumarswamy-slams-bjp-govt/
ಇನ್ನೂ ಅಮೈನ್ ಎಂಬ ಕೆಮಿಕಲ್ ಅನ್ನು ಕೂಡ ಸಾಸ್ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಈ ಅಂಶವನ್ನು ಗಿಡ ಮತ್ತು ಪ್ರಾಣಿಗಳಲ್ಲಿ ಇರುತ್ತದೆ. ಇದನ್ನು ಸಾಸ್ ನಲ್ಲಿ ಬಳಕೆ ಮಾಡುವುದರಿಂದ ಥೈರಾಡ್,ಒಬೆಸಿಟಿ ,ರಕ್ತನಾಳಗಳಿಗೆ ತೊಂದರೆ ಉಂಟು ಮಾಡಬಹುದು.
ಅಸಲಿಯೇ ಹೀಗೆ ನಕಲಿ ಕತೆ ಏನು? : ಅಸಲಿ ಪ್ಯೂರ್ ಅಂತ ಹೇಳೋ ಸಾಸ್ ಸೀಕ್ರೆಟ್ಟೇ ಇಷ್ಟು ಭಯಾನಕವಾಗಿದೆ ಅಂದ್ರೆ ಕೊಳಕು, ನಕಲಿ ಸಾಸ್ಗಳ ಕತೆ ಏನು? ಇದನ್ನು ತಿಂದ್ರೆ ನಮ್ಮ ದೇಹದ ಗತಿ ಏನು? ನಾವು ರಸ್ತೆ ಬದಿಯಲ್ಲಿ ತಿನ್ನೋ ಗೋಬಿ, ಫ್ರೈಡ್ ರೈಸ್ಗೆ ಇದೇ ನಕಲಿ ಸಾಸ್ ಬಳಸ್ತಾರೆ.
ಇದು ನಮ್ಮ ದೇಹಕ್ಕೆ ಎಂಥೆಂತಾ ಕಾಯಿಲೆ ಕೊಡಬಹುದು ಅನ್ನೋದನ್ನ ಒಮ್ಮೆ ಯೋಚಿಸಿ. ಇನ್ನು ಮುಂದೆಯಾದ್ರೂ ನೀವು ನಿಮ್ಮ ಮಕ್ಕಳಿಗೆ ಸಾಸ್ ತಿನ್ನಿಸುವ ಮುನ್ನ ಯೋಚಿಸಿ. ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.
- ಪ್ರೀತು ಮಹೇಂದರ್