Bengaluru : ‘ಟಿಪ್ಪು ನಿಜಕನಸುಗಳು’ ಶೀರ್ಷಿಕೆಯ ಕನ್ನಡ ನಾಟಕ ಮತ್ತು ಪುಸ್ತಕದ ಲೇಖಕ-ನಿರ್ದೇಶಕರು ಶಿವಮೊಗ್ಗ ಜಿಲ್ಲೆಯ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ (Death Threat Letter) ಕರೆ ಬಂದಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಲೇಖಕ ಅಡ್ಡಂಡ ಸಿ ಕಾರಿಯಪ್ಪ (Death Threat Letter) ಅವರು,“ಜೀವ ಬೆದರಿಕೆ ಕುರಿತು ನಾನು ಎರಡು ಪತ್ರಗಳನ್ನು ಸ್ವೀಕರಿಸಿದ್ದೇನೆ. ಒಂದು ಪೋಸ್ಟ್ಕಾರ್ಡ್ ಮತ್ತು ಇನ್ನೊಂದು ಲಕೋಟೆಯಲ್ಲಿರುವ ಪತ್ರ.
ನಾನು ಸಾವನ್ನಪ್ಪುತ್ತೇನೆ ಮತ್ತು ಯಾವ ದೇವರೂ ನನ್ನನ್ನು ರಕ್ಷಿಸಲಾರನು ಎಂಬ ಸಂದೇಶ ಅದರಲ್ಲಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ (Jaylakshmipuram Police Station) ದೂರು ದಾಖಲಿಸಿದ್ದು, ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 20 ರಿಂದ ಕಾರ್ಯಕ್ರಮ ನಡೆಯುತ್ತಿದ್ದು, ಇದುವರೆಗೆ ಆರು ಪ್ರದರ್ಶನಗಳನ್ನು ಪ್ರದರ್ಶಿಸಲಾಗಿದೆ.
ಇದನ್ನೂ ಓದಿ : https://vijayatimes.com/new-25-e-bus-says-ksrtc/
ಇದಲ್ಲದೆ, ಇನ್ನೂ ಮೂರು ಡಿಸೆಂಬರ್ ಒಂದು, ಮೂರು ಮತ್ತು ನಾಲ್ಕರಂದು ನಡೆಯಲಿವೆ. “ಕರ್ನಾಟಕದಾದ್ಯಂತ 75 ಸ್ಥಳಗಳಲ್ಲಿ ಪ್ರದರ್ಶನಗಳನ್ನು ನಡೆಸುವುದು ನನ್ನ ಆಲೋಚನೆಯಾಗಿದೆ,
ಅದರಲ್ಲೂ ವಿಶೇಷವಾಗಿ ಚಿತ್ರಮಂದಿರಗಳಿರುವ ಸ್ಥಳಗಳಲ್ಲಿ ನಡೆಸುವ ಆಲೋಚನೆ ನನ್ನಲಿದೆ.
ಆದ್ರೆ, ಬೆದರಿಕೆಯ ಕಾರಣ ಅದನ್ನು ನಡೆಸಲಾಗುತ್ತಿಲ್ಲ. ಮುಖ್ಯವಾಗಿ ಇದನ್ನು ಬಯಲು ರಂಗಮಂದಿರಗಳಲ್ಲಿ ಪ್ರದರ್ಶನ ಮಾಡಲು ಸಾಧ್ಯವಿಲ್ಲ ಎಂದು ಕಾರಿಯಪ್ಪ ಹೇಳಿದ್ದಾರೆ.