ನವದೆಹಲಿ, ಮೇ. 20: ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 2,76,110 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 25,772,440 ಆಗಿದೆ. ಇನ್ನು ಇದೇ ಅವಧಿಯಲ್ಲಿ 3,874 ಜನರು ಕೊವಿಡ್ನಿಂದ ಮೃತಪಟ್ಟಿದ್ದು ಏಕದಿನ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಬುಧವಾರ ಕೊವಿಡ್ -19 ನಿಂದ 4,529 ಜನರು ಸಾವಿಗೀಡಾಗಿದ್ದು ಅತಿ ಹೆಚ್ಚು ಏಕದಿನ ಸಾವು ದಾಖಲಾದ ದಿನವಾಗಿತ್ತು.
ಕಳೆದ 24 ಗಂಟೆಗಳಲ್ಲಿ 20.55 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ. ದೇಶದಲ್ಲಿ ನೀಡಲಾಗುವ ಕೊವಿಡ್ -19 ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ 18.58 ಕೋಟಿ ತಲುಪಿದೆ. ಆರೋಗ್ಯ ಸಚಿವರ ತಾತ್ಕಾಲಿಕ ವರದಿಯ ಪ್ರಕಾರ 27,10,934 ಸೆಷನ್ಗಳ ಮೂಲಕ ಒಟ್ಟು 18,58,09,302 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.