Visit Channel

ಇಡೀ ಭೂಮಿಯಲ್ಲಿ ಅತೀ ಹೆಚ್ಚಿನ ಉಷ್ಣಾಂಶ ಡೆತ್ ವ್ಯಾಲಿಯಲ್ಲಿ ದಾಖಲು

file7gmj8fr4her909jk161626156349

ಕ್ಯಾಲಿಫೋರ್ನಿಯಾ, ಜು. 13: ಸಾವಿನ ಕಣಿವೆ ಎಂದು ಗುರುತಿಸಲ್ಪಟ್ಟಿರುವ ಅಮೆರಿಕದ ಮರುಭೂಮಿ ಪ್ರದೇಶ ಕ್ಯಾಲಿಫೋರ್ನಿಯಾದ ಡೆತ್‌ ವ್ಯಾಲಿಯಲ್ಲಿ ಇಡೀ ಭೂಮಿಯಲ್ಲೇ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಶನಿವಾರ ಡೆತ್‌ ವ್ಯಾಲಿಯಲ್ಲಿ 54.4 ಡಿಗ್ರಿ ಸೆಲ್ಸಿಯಸ್‌ (130 ಫ್ಯಾರನ್‌ಹೀಟ್‌) ಉಷ್ಣಾಂಶ ದಾಖಲಾಗಿದ್ದು, ಇದುವರೆಗಿನ ಅತ್ಯಂತ ಗರಿಷ್ಠ ಉಷ್ಣಾಂಶವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವರ್ಷವೂ ಡೆತ್‌ ವ್ಯಾಲಿಯಲ್ಲೇ ಇಷ್ಟೇ ಪ್ರಮಾಣದ ಉಷ್ಣಾಂಶ ದಾಖಲಾಗಿತ್ತು.

ಡೆತ್‌ ವ್ಯಾಲಿಯು ಸದಾ ಬಿಸಿಗಾಳಿಯಿಂದ ಕೂಡಿದ ಪ್ರದೇಶದಲ್ಲಿದ್ದು, ಇಲ್ಲಿನ ಉಷ್ಠಾಂಶವು ಕಳೆದ ಮೂರು ದಿನಗಳಲ್ಲಿ ಗರಿಷ್ಠ 53.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ರಾತ್ರಿ ವೇಳೆ ಉಷ್ಠಾಂಶ ಕೊಂಚ ತಗ್ಗಿದರೂ 32 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗೆ ಇಳಿದಿಲ್ಲ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.