- 2025 ಅಂತ್ಯದ ಹಣಕಾಸು ಅಲರ್ಟ್: ಈ 3 ಗಡುವು (december financial task) ಮಿಸ್ ಮಾಡಿದರೆ ಪರ್ಸ್ ಖಾಲಿ
- ಸರ್ಕಾರ ಸೂಚಿಸಿದ ಮೂರು ಪ್ರಮುಖ ಹಣಕಾಸು ಕಾರ್ಯಗಳ ಗಡುವು ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯ
- ನಿರ್ಲಕ್ಷ್ಯ ಮಾಡಿದರೆ ತೆರಿಗೆ, ಪಿಂಚಣಿ ಮತ್ತು KYC ಸಮಸ್ಯೆ ತಪ್ಪದು
ಇನ್ನೇನು 2025ನೇ ವರ್ಷ ಮುಕ್ತಾಯದ ಹಂತಕ್ಕೆ ಕಾಲಿಟ್ಟಿದ್ದು, ಹೊಸ ವರ್ಷದತ್ತ ಹೆಜ್ಜೆ (december financial task) ಇಡುವ ಈ ಸಮಯದಲ್ಲಿ ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆ ಅತ್ಯಗತ್ಯವಾಗಿದೆ.
ಡಿಸೆಂಬರ್ ಅಂತ್ಯ ಎಂದರೆ ಹಬ್ಬ–ಹರ್ಷದ ಸಮಯ ಮಾತ್ರವಲ್ಲ, ಜೊತೆಗೆ ಕೆಲವು ಪ್ರಮುಖ ಹಣಕಾಸು ಸಂಬಂಧಿತ ಗಡುವುಗಳು ಮುಕ್ತಾಯಗೊಳ್ಳುವ ಅವಧಿಯೂ ಹೌದು.

ವಿಶೇಷವಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS), ಆದಾಯ ತೆರಿಗೆ ರಿಟರ್ನ್ಸ್ (ITR) ಮತ್ತು ಪ್ಯಾನ್–ಆಧಾರ್ ಲಿಂಕ್ (PAN-Aadhaar link) ಕುರಿತಂತೆ ಸರ್ಕಾರ ಹಾಗೂ ನಿಯಂತ್ರಣ ಸಂಸ್ಥೆಗಳು ನೀಡಿರುವ ಸೂಚನೆಗಳನ್ನು ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ಹಣಕಾಸಿನ ನಷ್ಟ, ಕಾನೂನು ತೊಂದರೆಗಳು ಹಾಗೂ ತಾಂತ್ರಿಕ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ.
ಆದ್ದರಿಂದ 2025 ಮುಗಿಯುವ ಮೊದಲು ಈ ಮೂರು ಪ್ರಮುಖ ಹಣಕಾಸಿನ (december financial task) ಕೆಲಸಗಳನ್ನು ಪೂರೈಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.
ಮೊದಲನೆಯದಾಗಿ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಮಹತ್ವದ ಬದಲಾವಣೆ ಜಾರಿಗೆ ಬರಲಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಸ್ಕೀಮ್ A (ಆಕ್ಟಿವ್ ಚಾಯ್ಸ್) ಅನ್ನು ಇತರ ಯೋಜನೆಗಳೊಂದಿಗೆ ವಿಲೀನಗೊಳಿಸುವ ನಿರ್ಧಾರ ಕೈಗೊಂಡಿದೆ.
ಈ ಹಿನ್ನೆಲೆಯಲ್ಲಿ, ಸ್ಕೀಮ್ A ನಿರ್ಗಮನ (Exit) ವಿಂಡೋ ಡಿಸೆಂಬರ್ 25ಕ್ಕೆ ಮುಕ್ತಾಯವಾಗಲಿದೆ.
REIT, InvIT, AIF ಹಾಗೂ ರಚನಾತ್ಮಕ ಸಾಲಗಳಂತಹ ಪರ್ಯಾಯ ಹೂಡಿಕೆಗಳಲ್ಲಿ ಸೀಮಿತ ಹೂಡಿಕೆ ಮತ್ತು ಕಡಿಮೆ ಕಾರ್ಪಸ್ ಇರುವುದೇ ಈ ವಿಲೀನದ ಪ್ರಮುಖ ಕಾರಣವಾಗಿದೆ.
ದೇಶದಾದ್ಯಂತ 1.7 ಕೋಟಿಗೂ ಅಧಿಕ NPS ಚಂದಾದಾರರ ಮೇಲೆ ಈ ನಿರ್ಧಾರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಹೂಡಿಕೆದಾರರು ಈ ಬಗ್ಗೆ ವಿಶೇಷ ಗಮನ ಹರಿಸಬೇಕು.
ಡಿಸೆಂಬರ್ 25ರೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಚಂದಾದಾರರ ಹೂಡಿಕೆಗಳನ್ನು ಸ್ವಯಂಚಾಲಿತವಾಗಿ ಇತರ NPS ಯೋಜನೆಗಳಿಗೆ ವರ್ಗಾಯಿಸಲಾಗುತ್ತದೆ.
ಆದರೆ ಇದಕ್ಕೂ ಮುನ್ನ, CRA ಅಥವಾ NSDL ಪೋರ್ಟಲ್‌ಗೆ ಲಾಗಿನ್ (Login) ಮಾಡಿ, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ತಮ್ಮ ಹೂಡಿಕೆ ಆಯ್ಕೆಯನ್ನು ಬದಲಾಯಿಸಲು ಅವಕಾಶವಿದೆ.
ಹೂಡಿಕೆದಾರರು ತಮ್ಮ ಅಪಾಯ ಸಾಮರ್ಥ್ಯ ಮತ್ತು ಹಣಕಾಸಿನ ಗುರಿಗಳಿಗೆ ಅನುಗುಣವಾಗಿ ಸ್ಕೀಮ್ C (ಕಾರ್ಪೊರೇಟ್ ಸಾಲ), ಸ್ಕೀಮ್ E (ಇಕ್ವಿಟಿ) ಅಥವಾ ಸ್ಕೀಮ್ G (ಸರ್ಕಾರಿ ಭದ್ರತೆಗಳು) ಆಯ್ಕೆ ಮಾಡಬಹುದು.
ಭವಿಷ್ಯದ ಪಿಂಚಣಿ ಭದ್ರತೆಗಾಗಿ ಸರಿಯಾದ ಹೂಡಿಕೆ ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಈ ಅವಕಾಶವನ್ನು ನಿರ್ಲಕ್ಷಿಸಬಾರದು.
ಎರಡನೆಯ ಮಹತ್ವದ ಗಡುವು ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆಗೆ ಸಂಬಂಧಿಸಿದೆ. 2025–26ರ ಮೌಲ್ಯಮಾಪನ ವರ್ಷಕ್ಕೆ (FY 2024–25) ವಿಳಂಬಿತ ಅಥವಾ ಪರಿಷ್ಕೃತ ITR ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ.
ಮೂಲ ಗಡುವನ್ನು ತಪ್ಪಿಸಿಕೊಂಡ ತೆರಿಗೆದಾರರು ಈ ಅವಧಿಯಲ್ಲಿ ತಡವಾಗಿ ರಿಟರ್ನ್ (Return) ಸಲ್ಲಿಸುವ ಅಥವಾ ಹಿಂದಿನ ತಪ್ಪುಗಳನ್ನು ಸರಿಪಡಿಸುವ ಅವಕಾಶವನ್ನು ಹೊಂದಿದ್ದಾರೆ.
ಆದರೆ, ಇದಕ್ಕಾಗಿ ತಡ ಶುಲ್ಕ ಮತ್ತು ಬಡ್ಡಿ ಪಾವತಿಸುವುದು ಕಡ್ಡಾಯ. ಮುಖ್ಯವಾಗಿ, ತಡವಾಗಿ ಸಲ್ಲಿಸುವ ITR ಹೊಸ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಮಾತ್ರ ಮಾನ್ಯವಾಗುತ್ತದೆ ಎಂಬುದನ್ನು ತೆರಿಗೆದಾರರು ಗಮನದಲ್ಲಿಟ್ಟುಕೊಳ್ಳಬೇಕು.
ಸರಿಯಾದ ಸಮಯದಲ್ಲಿ ರಿಟರ್ನ್ ಸಲ್ಲಿಸುವುದು ಭವಿಷ್ಯದ ಹಣಕಾಸಿನ ಪ್ಲಾನಿಂಗ್‌ಗೆ (Planning) ಬಹಳ ಸಹಾಯಕವಾಗುತ್ತದೆ.
ಮೂರನೆಯದಾಗಿ, ಪ್ಯಾನ್–ಆಧಾರ್ ಲಿಂಕ್ ವಿಚಾರವೂ ಅತ್ಯಂತ ಗಂಭೀರವಾಗಿದೆ. ಅಕ್ಟೋಬರ್ 1, 2024ರ ಮೊದಲು ಆಧಾರ್ ದಾಖಲಾತಿ ಐಡಿ ಆಧಾರದಲ್ಲಿ ಪ್ಯಾನ್ ಪಡೆದಿರುವವರು, ಡಿಸೆಂಬರ್ 31, 2025ರೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಸಲ್ಲಿಸಿ ಪ್ಯಾನ್‌ಗೆ ಲಿಂಕ್ ಮಾಡಲೇಬೇಕು ಎಂದು CBDT ಸ್ಪಷ್ಟಪಡಿಸಿದೆ.
ಈ ಗಡುವನ್ನು ಮಿಸ್ ಮಾಡಿದರೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗದು, ಹೆಚ್ಚಿನ ಟಿಡಿಎಸ್ ಕಡಿತಗೊಳ್ಳುತ್ತದೆ, ಮರುಪಾವತಿ ವಿಳಂಬವಾಗುತ್ತದೆ ಮತ್ತು ಹೂಡಿಕೆ, KYC, ಸ್ಥಿರ ಠೇವಣಿಗಳಂತಹ ಹಲವು ಹಣಕಾಸು ಸೇವೆಗಳಲ್ಲಿ ತಿರಸ್ಕಾರ ಎದುರಾಗಬಹುದು.
ಆದ್ದರಿಂದ, 2025 ಮುಕ್ತಾಯಕ್ಕೂ ಮುನ್ನ ಈ ಮೂರು ಹಣಕಾಸಿನ ಕಾರ್ಯಗಳನ್ನು ಪೂರ್ಣಗೊಳಿಸುವುದರಿಂದ, ಹೊಸ ವರ್ಷವನ್ನು ಆತಂಕವಿಲ್ಲದೆ ಹಾಗೂ ಹಣಕಾಸಿನ ಶಿಸ್ತುಪಾಲನೆಯೊಂದಿಗೆ ಆರಂಭಿಸಲು ಸಾಧ್ಯವಾಗುತ್ತದೆ.
ಇದನ್ನು ಓದಿ : https://vijayatimes.com/lokayukta-raid-in-karnataka-3/