Bengaluru: ಈ ಹಿಂದೆ ಕರ್ನಾಟಕದ (Karnataka) ಹೆಮ್ಮೆಯ ಬ್ರ್ಯಾಂಡ್ ಆಗಿರುವ ನಂದಿನಿಯನ್ನು (Nandini) ಅಮುಲ್ ಜೊತೆ ವಿಲೀನ (Merger with Amul) ಮಾಡಲಾಗುತ್ತದೆ ಎಂದು ಸುಳ್ಳು ಹರಡಿದ್ದು ಕಾಂಗ್ರೆಸ್ ಸರ್ಕಾರ (Congress Govt.) .ಇದೀಗ ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಹಾಳುಗೆಡವುತ್ತಿದೆ ಎಂದು ಆರೋಪಿಸಿದ್ದಾರೆ. ಕೆ.ಎಂ.ಎಫ್.ನ ಎಂ.ಡಿ. (MD of K.M.F.) ಆಗಿದ್ದ ಜಗದೀಶ್ ಅವರನ್ನು ವರ್ಗಾಯಿಸಿದ್ದನ್ನು ಹಾಗೂ ನಂದಿನಿಯ ಬಹುನಿರೀಕ್ಷಿತ ಇಡ್ಲಿ–ದೋಸೆ ಹಿಟ್ಟು (Idli – Dosa batter) ಮಾರುಕಟ್ಟೆಗೆ ಬರುವುದು ವಿಳಂಬವಾಗುತ್ತಿರುವ ಹಿಂದೆ ಬಹು ದೊಡ್ಡ ಲಾಬಿ ಇದೆ. ಪ್ರೈವೇಟ್ ಕಂಪನಿ ಉಳಿಸಲು ನಮ್ಮ ನಂದಿನಿಯ ಮೂಲೆ ಗುಂಪಾಗಿ ಮಾಡುತ್ತಿದ್ದಾರೆ.
ಕೇರಳದ ಐಡಿ ಫ್ರೆಷ್ (Kerala ID Fresh) ನಂತಹ ಪ್ರತಿಸ್ಪರ್ಧಿ ಬ್ರ್ಯಾಂಡ್ಗಳಿಗೆ ಸಡ್ಡು ಹೊಡೆದು ಇಡ್ಲಿ/ದೋಸೆ (Kerala ID Fresh) ಹಿಟ್ಟಿನಂತಹ ನವೀನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೊದಲೇ, ನಂದಿನಿಯ ಯಶಸ್ಸಿನ ಹಿಂದಿನ ಚಾಲನಾ ಶಕ್ತಿಯಾಗಿದ್ದ ಕೆ.ಎಂ.ಎಫ್. ಎಂ.ಡಿ. ಎಂ.ಕೆ. ಜಗದೀಶ್ (K.M.F. MD M.K. Jagdish) ಅವರನ್ನು ಹಠಾತ್ ವರ್ಗಾವಣೆಗೊಳಿಸಲಾಗಿದೆ.ಅವರ ನಾಯಕತ್ವದಲ್ಲಿ ನಂದಿನಿ ಹೊಸ ಎತ್ತರಕ್ಕೆ ಏರಿತ್ತು. ಐಎಸ್ಎಲ್ (ISL) , ಪ್ರೊ ಕಬಡ್ಡಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ (International cricket) ತಂಡಗಳಿಗೆ ಪ್ರಾಯೋಜಕತ್ವ ನೀಡಿದ್ದಲ್ಲದೇ, ದೆಹಲಿ, ದುಬೈ (Delhi, Dubai) ಮಾರುಕಟ್ಟೆಗೆ ವಿಸ್ತರಣೆಗೊಂಡಿತ್ತು.
ಇತ್ತೀಚಿಗೆ ತಿರುಪತಿ (Tirupati) ಜೊತೆಗಿನ ಸಂಬಂಧ ಮತ್ತೆ ಸರಿಯಾಗಿತ್ತು . ಈಗ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ (Chief Minister and Deputy Chief Minister) ಸೇರಿ ಕೇರಳ ಲಾಬಿಗೆ ಮಣಿದು ಖಾಸಗಿ ಬ್ರ್ಯಾಂಡ್ಗಳನ್ನು ರಕ್ಷಿಸಲು ನಂದಿನಿಯನ್ನು ಹಾಳುಗೆಡವುತ್ತಿದ್ದಾರೆ. ಸಮರ್ಪಣಾ ಮನೋಭಾವದ ಅಧಿಕಾರಿ ಒಳ್ಳೆಯ ಕೆಲಸ ಮಾಡಿದ್ದಕ್ಕೆ ವರ್ಗಾವಣೆ ಮಾಡಲಾಗಿದೆ. ಒಳ್ಳೆಯ ಕೆಲಸ ಮಾಡುವುದು ಈ ಸರ್ಕಾರದಲ್ಲಿ (Govt) ಸ್ವೀಕಾರಾರ್ಹವಲ್ಲ ಎಂದು ಟೀಕಿಸಿದ್ದಾರೆ. ಬೇರೆ ರಾಜ್ಯದ ಜನತೆ ಮೇಲಿರುವ ಪ್ರೀತಿಯನ್ನು ನಮ್ಮ ಬ್ರ್ಯಾಂಡ್ ಮೇಲೆ ಕೂಡ ತೋರಿಸಿ ಎಂದು ಕಿಡಿ ಕಾರಿದ್ದಾರೆ.