Delhi excise policy case: Supreme Court grants bail to BRS leader K Kavitha
Delhi: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಯಾಗಿದ್ದ (Delhi excise policy case ) ಬಿಆರ್ಎಸ್ ಎಂಎಲ್ಸಿ ಕೆ ಕವಿತಾ ಅವರಿಗೆ ಸುಪ್ರೀಂಕೋರ್ಟ್ (Supreme Court) ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ಅವರ ಪುತ್ರಿ ಕೆ.ಕವಿತಾ (K Kavitha) ಮಾರ್ಚ್ 15ರಿಂದ ಬಂಧನದಲ್ಲಿದ್ದರು. ವಿಚಾರಣೆಯ ವೇಳೆ, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ಸುಪ್ರೀಂಕೋರ್ಟ್ ಪೀಠವು, ದೆಹಲಿಯ ಅಬಕಾರಿ ನೀತಿ ಹಗರಣದಲ್ಲಿ ಕೆ ಕವಿತಾ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವ ಸಾಕ್ಷ್ಯ ಇದೆ ಎಂಬುದನ್ನು ತೋರಿಸಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ಕೇಳಿದೆ.
ಕವಿತಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಜಾಮೀನು ಕೋರಿದ್ದು, ಆಕೆಯ ವಿರುದ್ಧದ ತನಿಖೆಯನ್ನು ಎರಡು ಸಂಸ್ಥೆಗಳು ಪೂರ್ಣಗೊಳಿಸಿವೆ ಎಂದು ಹೇಳಿದರು. ಸಹ ಆರೋಪಿಯಾಗಿರುವ ಆಪ್ ನಾಯಕ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ ಜಾಮೀನು ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನು ಅವರು ಉಲ್ಲೇಖಿಸಿದ್ದಾರೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ತನಿಖಾ ಸಂಸ್ಥೆಗಳ ಪರವಾಗಿ ವಾದ ಮಂಡಿಸಿದ್ದು, ಕೆ ಕವಿತಾ ಅವರು ತಮ್ಮ ಮೊಬೈಲ್ ಫೋನ್ ಫಾರ್ಮ್ಯಾಟ್ ಮಾಡಿದ್ದಾರೆ. ಆಕೆಯ ನಡವಳಿಕೆಯು ಸಾಕ್ಷ್ಯವನ್ನು ಹಾಳುಮಾಡುವಂತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಆರೋಪವನ್ನು ಕವಿತಾ ಅವರ ವಕೀಲರು “ಬೋಗಸ್” ಎಂದಿದ್ದಾರೆ. ನಂತರ, ಪೀಠವು ಸಿಬಿಐ (CBI) ಪರ ವಾದ ಮಂಡಿಸಿದ ವಕೀಲರಲ್ಲಿ “ಕವಿತಾ ಅವರು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ತೋರಿಸಲು ಸಾಕ್ಷ್ಯ ಯಾವುದಿದೆ ಎಂದು ಕೇಳಿದ್ದಾರೆ.
ಕೆ ಕವಿತಾ ವಿರುದ್ಧವಿರುವ ಆರೋಪ ಏನು?
ಕವಿತಾ ಅವರ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ (Delhi Highcourt) ಆದೇಶವನ್ನು ಪ್ರಶ್ನಿಸಿ ರಾಜಕಾರಣಿಯ ಮನವಿಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಆಗಸ್ಟ್ 12 ರಂದು ಸುಪ್ರೀಂಕೋರ್ಟ್ ಏಜೆನ್ಸಿಗಳನ್ನು ಕೇಳಿತ್ತು. ಎರಡೂ ಪ್ರಕರಣಗಳಲ್ಲಿ ಕವಿತಾ ಅವರ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದ್ದು, ಕ್ರಿಮಿನಲ್ ಪಿತೂರಿಯ ಪ್ರಮುಖ ಸಂಚುಕೋರರಲ್ಲಿ ಅವರು ಪ್ರಾಥಮಿಕವಾಗಿ ಒಬ್ಬರು ಎಂದು ಹೇಳಿದ್ದಾರೆ. ಕೆ ಕವಿತಾ ಅವರು ಸೌತ್ ಗ್ರೂಪ್ ಎಂದು ಕರೆಯಲ್ಪಡುವ ಭಾಗವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಒಲವು ತೋರಿದ್ದಕ್ಕಾಗಿ ಪ್ರತಿಯಾಗಿ ₹ 100 ಕೋಟಿ ಮೌಲ್ಯದ ಕಿಕ್ಬ್ಯಾಕ್ಗಳನ್ನು ಪಾವತಿಸಿದ ಉದ್ಯಮಿಗಳು ಮತ್ತು ರಾಜಕಾರಣಿಗಳ ಗುಂಪು ಎಂದು ಸಿಬಿಐ ಹೇಳಿದೆ.
Delhi Excise Policy Case-Bail For K Kavitha Today
ಆಪಾದಿತ ಹಗರಣದ ಕಿಂಗ್ಪಿನ್ ಎಂದು ಏಜೆನ್ಸಿಗಳು ಕರೆಯುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾರ್ಚ್ (March) 21 ರಿಂದ ಜೈಲಿನಲ್ಲಿದ್ದಾರೆ. ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಇದೇ ಆರೋಪದಲ್ಲಿ ಜೈಲು ಸೇರಿದ್ದರು.
Delhi: The Supreme Court on Tuesday granted bail to BRS MLC K Kavitha, who was arrested in the Delhi excise policy case.
K Kavitha, daughter of former Telangana CM K Chandrasekhar, was in custody since March 15. During the hearing, a Supreme Court bench comprising Justices BR Gavai and KV Viswanathan asked the Enforcement Directorate and the CBI to show what evidence they have to prove K Kavita’s involvement in the Delhi Excise Policy scam.
Senior advocate Mukul Rohatgi, appearing for Kavita, sought bail and said two agencies have completed the investigation against her. He referred to the Supreme Court verdict granting bail to AAP leader Manish Sisodia, who is a co-accused.
Additional Solicitor General SV Raju, appearing for the investigating agencies, said K Kavitha had formatted her mobile phone. He alleged that her conduct amounted to tampering with evidence. Kavita’s lawyer called the allegation “bogus”. Later, the bench said that among the lawyers appearing for the CBI, “Kavitha is involved in the crime.
What is the allegation against K Kavita?
On August 12, the Supreme Court had asked the agencies to submit their responses to the politician’s petition challenging the Delhi High Court’s order denying bail to Kavita. The High Court dismissed Kavita’s bail pleas in both the cases, saying she was primarily one of the main conspirators in the criminal conspiracy. K Kavita has been accused of being part of the so-called South Group. The CBI said it was a group of businessmen and politicians who paid kickbacks worth ₹100 crore to the Aam Aadmi Party in return for favors in policy formulation and implementation.
Delhi Chief Minister Arvind Kejriwal, whom agencies call the kingpin of the alleged scam, has been in jail since March 21. AAP leaders Manish Sisodia and Sanjay Singh were jailed on similar charges.