- ದೆಹಲಿಯ ಸ್ಫೋಟದ ಬಳಿಕ ದೇಶದೆಲ್ಲೆಡೆ ಹೈ-ಅಲರ್ಟ್
- ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮಾಲ್‌ಗಳು, ಮಾರುಕಟ್ಟೆಗಳಲ್ಲಿ ತೀವ್ರ ತಪಾಸಣೆ
- ಪ್ಯಾನಿಕ್ ಬೇಡ, ಎಚ್ಚರಿಕೆ ಇರಲಿ ಎಂದು ಸಂದೇಶ ನೀಡಿದ ಪೊಲೀಸ್ ಅಧಿಕಾರಿಗಳು
Bengaluru: ದೆಹಲಿಯಲ್ಲಿ ನಡೆದ ವಿಧ್ವಂಸಕ ಘಟನೆಯು ದೇಶದ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. (Delhi explosion High alert in Karnataka)
ರಾಜಧಾನಿಯಲ್ಲಿ ಸಂಭವಿಸಿದ ಸ್ಫೋಟದ ತಕ್ಷಣ, ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸಂಸ್ಥೆಗಳು ಹೈ-ಅಲರ್ಟ್ (High-Alert) ಜಾರಿ ಮಾಡಿದ್ದು, ಪ್ರಮುಖ ನಗರಗಳು, ಪ್ರವಾಸಿ ತಾಣಗಳು, ದೇವಾಲಯಗಳು ಹಾಗೂ ಐತಿಹಾಸಿಕ ಕಟ್ಟಡಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಶ್ರೀರಾಮ ಜನ್ಮಭೂಮಿ, ತಾಜ್‌ಮಹಲ್ (Tajmahal) ಮತ್ತು ಕುತುಬ್ ಮಿನಾರ್ (Qutub Minar) ಸೇರಿ ಸಾವಿರಾರು ಜನರ ಸಂಚಾರ ನಡೆಯುವ ಸ್ಥಳಗಳಲ್ಲಿ CISF ಹಾಗೂ ಸ್ಥಳೀಯ ಪೋಲೀಸರು ಒಗ್ಗಟ್ಟಾಗಿ ತಪಾಸಣೆ ನಡೆಸುತ್ತಿದ್ದಾರೆ.
ಸ್ಕ್ಯಾನರ್‌ಗಳು, ಬಾಗೇಜ್ ಚೆಕ್, ನೈಟ್ ವಿಸನ್ ಕ್ಯಾಮೆರಾ ಮಾನಿಟರಿಂಗ್ (Night Vision Camera Monitoring) ಮೂಲಕ ಪ್ರತಿಯೊಂದು ಸಂಶಯಾಸ್ಪದ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ. (Delhi explosion High alert in Karnataka)
ಈ ಘಟನೆ ದೇಶದ ವಿವಿಧ ನಗರಗಳಲ್ಲಿ ಮತ್ತೊಂದು ದಾಳಿ ಸಂಭವಿಸುವ ಸಾಧ್ಯತೆಯನ್ನು ಎತ್ತಿಹಿಡಿದಿರುವ ಕಾರಣ, ಯಾವುದೇ ಅಪಾಯಕ್ಕೆ ಅವಕಾಶ ಇರದಂತೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ಕೂಡಾ ಪೊಲೀಸರಿಗೆ ತುರ್ತು ಸೂಚನೆ ನೀಡಲಾಗಿದ್ದು ಬೆಂಗಳೂರಿನಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆಯಾಗಿದ್ದು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ಟರ್ಮಿನಲ್ (Bus Terminal), ಮಾಲ್‌ಗಳು, ಹೋಟೆಲ್‌ಗಳು ಹಾಗೂ ಲಾಡ್ಜ್‌ಗಳಲ್ಲಿ ಪರಿಶೀಲನೆ ನಡೆಯುತ್ತಿದೆ.
ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮೈಸೂರಿನಲ್ಲಿ ಪ್ರತಿಕ್ರಿಯಿಸಿ, ದೆಹಲಿಯಲ್ಲಿ ನಡೆದ ಘಟನೆಯ ನಂತರ ನಾವು ಕೂಡಾ ತುಂಬಾ ಎಚ್ಚರಿಕೆಯಿಂದಿರಬೇಕು.
ಜನಸಮೂಹ ಇರುವ ಎಲ್ಲ ಕಡೆ ಭದ್ರತೆ ಬಿಗಿಯಾಗುತ್ತದೆ, ಯಾವುದೇ ಅನುಮಾನಾಸ್ಪದ ಬೆಳವಣಿಗೆ ಕಂಡರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶೇಷವಾಗಿ ಹೊರರಾಜ್ಯದಿಂದ ಬರುವವರ ದಾಖಲೆಗಳ ಪರಿಶೀಲನೆ, ಅತಿಥಿ ದಾಖಲೆ ಪಸ್ತಕಗಳ ತಪಾಸಣೆ, ಸಾರ್ವಜನಿಕ ಸ್ಥಳಗಳಲ್ಲಿ ಸರ್ಪಗಾವಲು ಪ್ರಾರಂಭಿಸಲಾಗಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ-ಹಗಲು ಗಸ್ತು ಸಜ್ಜಾಗಿದೆ.
ಕಮಿಶನರ್ ಎಲ್ಲ ಪೊಲೀಸ್ ಠಾಣೆಗೂ ನೇರ ಆದೇಶ ಬಿತ್ತರಿಸಿದ್ದು,ಲಾಡ್ಜ್‌ಗಳಲ್ಲಿ ತಂಗುವ ಅಪರಿಚಿತ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ, ಅನಧಿಕೃತ ವಾಸ್ತವ್ಯ, ನಕಲಿ ಗುರುತಿನ ಚೀಟಿ, ಶಂಕಾಸ್ಪದ ವಾಹನ ಎಲ್ಲವನ್ನು ಗಮನಿಸುವುದು ಕಡ್ಡಾಯ ಎಲ್ಲ ಠಾಣೆಗಳಿಗೆ ವಿಶೇಷ ಟಾಸ್ಕ್ ಹಂಚಲಾಗಿದ್ದು, ಡಾಗ್ ಸ್ಕ್ವಾಡ್ (Dog Squad) , ಬಾಂಬ್ ಡಿಟೆಕ್ಷನ್ ಯುನಿಟ್‌ಗಳನ್ನೂ (Bomb Detection Unit) ಬಳಸಲಾಗುತ್ತಿದೆ.
ಕೆಆರ್ ಮಾರುಕಟ್ಟೆ, ಎಂ ಜಿ ರೋಡ್,ಮೆಟ್ರೋ ಸ್ಟೇಷನ್‌ಗಳು (Metro Station) , ಕ್ರಿಕೆಟ್ ಮೈದಾನ, ಐಟಿ ಪಾರ್ಕ್‌ಗಳು ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ.
ಯಾವುದೇ ಗೊಂದಲ ಉಂಟಾಗದಂತೆ ಸಾರ್ವಜನಿಕ ಘೋಷಣೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಪೊಲೀಸರು ಪ್ಯಾನಿಕ್ ಬೇಡ, ಎಚ್ಚರಿಕೆ ಇರಲಿ ಎನ್ನುವ ಸಂದೇಶ ನೀಡುತ್ತಿದ್ದಾರೆ.
ದೆಹಲಿಯ ಘಟನೆ ಬೆನ್ನಲ್ಲೇ ಭಾರತದೆಲ್ಲೆಡೆ ಭದ್ರತಾ ವ್ಯವಸ್ಥೆ ಬಿಗಿಯಾಗಿದ್ದು, ಸರ್ಕಾರ ಹಾಗೂ ಗುಪ್ತಚರ ಇಲಾಖೆ ಎಚ್ಚರಿಕೆಯಿಂದ ಕಾರ್ಯಾಚರಿಸುತ್ತಿವೆ.
ಜನಸಾಮಾನ್ಯರು ಸಹ ಸಂಶಯಾಸ್ಪದ ಚಟುವಟಿಕೆ ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಮನವಿ ಕೂಡ ಮಾಡಲಾಗಿದೆ.
ಇದನ್ನು ಓದಿ : ಕರ್ನಾಟಕದಲ್ಲಿ ಶೀಘ್ರವೇ AI ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆ