New delhi: ಮಹಾಕುಂಭ ಮೇಳ (Mahakumbha Mela) ನಡೆಯುತ್ತಿರುವ ಪ್ರಯಾಗರಾಜ್‌ಗೆ (Prayagraj) ಹೊರಡುವ ಧಾವಂತದಲ್ಲಿದ್ದ ಜನರ ನೂಕುನುಗ್ಗಲಿನಿಂದ ದಿಲ್ಲಿ ರೈಲು ನಿಲ್ದಾಣದಲ್ಲಿ (Delhi Railway Station) ಶನಿವಾರ ರಾತ್ರಿ ಕಾಲ್ತುಳಿತ ಉಂಟಾಗಿತ್ತು. ಆಗ ಮಕ್ಕಳು ಸೇರಿ ಒಟ್ಟು 18 ಮಂದಿ ಮೃತಪಟ್ಟಿದ್ದರು.ಇದೀಗ ಹೊಸದಿಲ್ಲಿ ರೈಲ್ವೆ ನಿಲ್ದಾಣದ (New Delhi Railway Station) ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಗೆ (Railway Department) ಚಾಟಿ ಬೀಸಿರುವ ದಿಲ್ಲಿ ಹೈಕೋರ್ಟ್ (High Court of Delhi), ಸಾಮರ್ಥ್ಯಕ್ಕಿಂತ ಹೆಚ್ಚು ಟಿಕೆಟ್ (More tickets) ವಿತರಣೆ ಮಾಡಿದ ಕಾರಣವಾದರೂ ಏನು ಎಂದು ಪ್ರಶ್ನೆ ಮಾಡಿದೆ.ರೈಲು ನಿಲ್ದಾಣಗಳಲ್ಲಿ (Railway station) ಪ್ರಯಾಣಿಕರ ಸುರಕ್ಷತೆಗೆ (Passenger safety) ಮುಂಜಾಗ್ರತೆ ವಹಿಸಲು ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಕೆ.ಉಪಾಧ್ಯಾಯ (Chief Justice .D.K. Upadhyaya) ಹಾಗೂ ನ್ಯಾ.ತುಷಾರ್ ರಾವ್ ಗೆಡೆಲಾ (Justice Tushar Rao Gedela) ಅವರಿದ್ದ ವಿಭಾಗೀಯ ಪೀಠ, ಒಂದು ಬೋಗಿಗೆ ಇಷ್ಟೇ ಜನ ಪ್ರಯಾಣಿಕರು ಎಂದು ನಿಗದಿಪಡಿಸಿದ ಮೇಲೂ ಹೆಚ್ಚುವರಿ ಟಿಕೆಟ್ ನೀಡಿದ್ದೇ ಕಾಲ್ತುಳಿತ ಘಟನೆಗೆ ಕಾರಣ ಎಂದು ಅಭಿಪ್ರಾಯಪಟ್ಟಿದೆ.

ಅಷ್ಟಕ್ಕೂ ಆ ದಿನ ಎಷ್ಟು ಪ್ರಯಾಣಿಕರು ಬರಬಹುದೆಂಬ ಅಂದಾಜು ರೈಲ್ವೆ ಅಧಿಕಾರಿಗಳಿಗೆ (Railway Officers) ಇರಲಿಲ್ಲವೆ? ಒಮ್ಮೆಲೆ ಲಕ್ಷಲಕ್ಷ ಜನ ಆಗಮಿಸಿದರೆ ನಿಯಂತ್ರಣ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಜ್ಞಾನ ಇರಲಿಲ್ಲವೆ? ಜನರ ನಿಯಂತ್ರಣಕ್ಕೆ (People control) ಸೂಕ್ತ ಮುಂಜಾಗ್ರತಾ ಕ್ರಮ (Appropriate precautions) ಕೈಗೊಳ್ಳದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ನ್ಯಾ.ಗೆಡೆಲಾ ಕಿಡಿಕಾರಿದ್ದಾರೆ.ದುರಂತ ನಡೆದ ದಿನ ಪ್ರಯಾಗರಾಜ್ (Prayagraj) ರೈಲಿನ ಕೋಚ್‌ಗಳಲ್ಲಿ ಪ್ರಯಾಣಿಕರ ಸಾಮರ್ಥ್ಯ ಎಷ್ಟಿತ್ತು? ಎಷ್ಟು ಟಿಕೆಟ್ ವಿತರಣೆ ಮಾಡಲಾಗಿತ್ತು? ಹೆಚ್ಚುವರಿ ಟಿಕೆಟ್ ವಿತರಣೆ ಮಾಡಲು ಕಾರಣವೇನು ಎಂಬ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಹೈಕೋರ್ಟ್ (High Court) ರೈಲ್ವೆ ಇಲಾಖೆಗೆ ಆದೇಶಿಸಿದೆ.
ಇನ್ನು ರೈಲ್ವೆ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Solicitor General Tushar Mehta), ಕಾಲ್ತುಳಿತ ಪ್ರಕರಣವನ್ನು ರೈಲ್ವೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕಾನೂನುರೀತ್ಯಾ ಕ್ರಮ ಅನುಸರಿಸಲಾಗಿದೆ. ಅರ್ಜಿದಾರರ ಕಳವಳವನ್ನು ಸರಕಾರ ಪರಿಗಣಿಸಲಿದೆ ಎಂದರು. ಹಾಗಾಗಿ ನ್ಯಾಯಪೀಠವು ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದೆ.