New delhi: ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ (BJP) ಇತಿಹಾಸ ಸೃಷ್ಟಿಸಿದೆ. ದೆಲ್ಲಿ ಗದ್ದುಗೆಯನ್ನು ಗೆದ್ದು ಬೀಗಿರೋ ಬಿಜೆಪಿ ಸರ್ಕಾರ (BJP Govt) ರಚನೆಗೆ ಸಜ್ಜಾಗಿದೆ. 27 ವರ್ಷದ ವನವಾಸ ಮುಗಿಸಿ ಪುಟಿದೆದ್ದ ಕೇಸರಿ ಪಡೆಯಲ್ಲಿ ಸಿಎಂ ಪಟ್ಟಕ್ಕೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯಾಗಿದೆ. ಮಹಿಳೆಯನ್ನ ಮುಖ್ಯಮಂತ್ರಿಯನ್ನಾಗಿ (Chief Minister) ಆಯ್ಕೆ ಮಾಡಿ ಕಮಲ ಪಡೆ ಕೌತುಕದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ (Chief Minister) ಪಟ್ಟಕ್ಕೆ ಇವತ್ತು ಪಟ್ಟಾಭಿಷೇಕ ನಡೆಯಲಿದೆ.
ದೆಹಲಿ ಮುಖ್ಯಮಂತ್ರಿ (Chief Minister of Delhi) ಯಾರಾಗ್ತಾರೆಂಬ ಕುತೂಹಲಕ್ಕೆ ಬಿಜೆಪಿ (BJP) ತೆರೆ ಎಳೆದಿದೆ. ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಸೋಲಿಸಿ ಗೆದ್ದ ಪರ್ವೇಶ್ ವರ್ಮಾ (Parvesh Verma), ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ (BJP National Secretary) ಆಶಿಶ್ ಸೂದ್, ಜಿತೇಂದ್ರ ಮಹಾಜನ್ (Jitendra Mahajan), ರೇಖಾ ಗುಪ್ತಾ (Rekha Gupta) ಮುಂತಾದವರ ಹೆಸರು ಸಿಎಂ ರೇಸ್ನಲ್ಲಿತ್ತು. ಈ ಪೈಕಿ ರೇಖಾ ಗುಪ್ತಾರನ್ನು ದೆಹಲಿ ಮುಖ್ಯಮಂತ್ರಿಯಾಗಿ (Rekha Gupta as Chief Minister of Delhi) ಕೇಸರಿ ಪಾಳಯ ಆಯ್ಕೆ ಮಾಡಿದೆ.ಶಾಲಿಮಾರ್ ಭಾಗ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿದ್ರೂ ರೇಖಾ ಗುಪ್ತಾಗೆ ಜಾಕ್ಪಾಟ್ ಹೊಡೆದಿದೆ. ವಿಶೇಷ ಏನಂದ್ರೆ ಎಲ್ಲರೂ ಸಿಎಂ ಆಗ್ತಾರೆ ಅಂತಾನೇ ಉಹಿಸಿದ್ದ ಪರ್ವೇಶ್ ವರ್ಮಾರೇ ಖುದ್ದು ರೇಖಾ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್ (Sheila Dixit of Congress), ಬಿಜೆಪಿಯ ಸುಷ್ಮಾ ಸ್ವರಾಜ್ (BJP’s Sushma Swaraj), ಆಮ್ ಆದ್ಮಿ ಪಕ್ಷದ ಅತಿಶಿ ಸಿಂಗ್ (Atishi Singh of Aam Aadmi Party) ಬಳಿಕ ಡೆಲ್ಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ.

ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಇವತ್ತು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಪಮುಖ್ಯಮಂತ್ರಿಯಾಗಿ ಪರ್ವೇಶ್ ವರ್ಮಾ (Parvesh Verma as Deputy Chief Minister) ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ (Ramlila Maidan, Delhi) ಇಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (Prime Minister Modi), ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಮತ್ತು ಹಲವು ಹಿರಿಯ ನಾಯಕರು ಭಾಗಿಯಾಗಲಿದ್ದಾರೆ. ರೇಖಾ ಗುಪ್ತಾ ಸಿಎಂ ಆಗಿ ಆಯ್ಕೆಯಾಗ್ತಿದ್ದಂತೆ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.ಊಹೆಗೂ ನಿಲುಕದ ರೀತಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಆಯ್ಕೆ ಮಾಡಿದೆ. 27 ವರ್ಷಗಳ ವನವಾಸ ಮುಗಿಸಿ ಬಂದಿರೋ ಕಮಲ ಪಡೆ ಮಹಿಳೆಯನ್ನ ಸಿಎಂ ಮಾಡಿದೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ನಾರಿಶಕ್ತಿಯ ಕೈಗೆ ಆಡಳಿತ ಚುಕ್ಕಾಣಿ ಸಿಕ್ಕಂತಾಗಿದೆ.