English English Kannada Kannada

ಅತ್ಯಾಚಾರ,ಕೊಲೆ ದರೋಡೆ: ಇದು ರಾಷ್ಟ್ರ ರಾಜಧಾನಿ ಸ್ಥಿತಿ!

Share on facebook
Share on google
Share on twitter
Share on linkedin
Share on print

ಹೊಸದಿಲ್ಲಿ, ಫೆ.20: ದಿಲ್ಲಿ ಸ್ಥಿತಿಯನ್ನು ಗಮನಿಸುತ್ತಿದ್ದರೆ ಮನುಷ್ಯನಲ್ಲಿರಬೇಕಾದ ಮಾನವ ಗುಣ ಎತ್ತ ಸಾಗಿದೆ? ಎಂಬ ಆತಂಕವಾಗುತ್ತಿದೆ.  ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಐದು ಗಂಟೆಗೊಂದು ಅತ್ಯಾಚಾರ ನಡೆಯುತ್ತಿದೆ; 19 ಗಂಟೆಗೊಂದು ಕೊಲೆ, 15 ನಿಮಿಷಕ್ಕೊಂದು ಕಾರು ಕಳ್ಳತನ, ಗಂಟೆಗೊಂದು ಸರಗಳ್ಳತನ ನಡೆಯುತ್ತಿದೆ. ದಿಲ್ಲಿ ಪೊಲೀಸರು ನೀಡಿದ ಅಂಕಿ ಅಂಶಗಳಿಂದ ಈ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಕಳ್ಳತನ  ಹೊರತಾಗಿ  ಉಳಿದ ಅಪರಾಧಗಳಲ್ಲಿ ರಾಜಧಾನಿಯ ಸ್ಥಿತಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಧಾರಿಸಿದೆ. 2019ರಲ್ಲಿ ನಾಲ್ಕು ಗಂಟೆಗೊಂದು ಅತ್ಯಾಚಾರ, 17 ಗಂಟೆಗೊಂದು ಹತ್ಯೆ ಮತ್ತು 12 ನಿಮಿಷಕ್ಕೊಂದು ವಾಹನ ಕಳ್ಳತನ ನಡೆಯುತ್ತಿತ್ತು. ಆದರೆ ಸರಗಳ್ಳತನ ಪ್ರಕರಣಗಳು 2019ರಲ್ಲಿ ದಿನಕ್ಕೆ ಸರಾರಿ 17 ವರದಿಯಾದರೆ, ಇದೀಗ ಪ್ರತಿದಿನ ಸರಾಸರಿ 24 ಪ್ರಕರಣಗಳು ವರದಿಯಾಗುತ್ತಿವೆ.

2020ರಲ್ಲಿ ಅಪರಾಧಗಳ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಇಷ್ಟಾದರೂ ರಾಷ್ಟ್ರ ರಾಜಧಾನಿಯಲ್ಲಿ 1,699 ಅತ್ಯಾಚಾರ, 2,186 ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಾಗಿವೆ. 65 ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳೂ ದಾಖಲಾಗಿವೆ. 2019ರಲ್ಲಿ 2,168 ಅತ್ಯಾಚಾರ, 2,921 ಲೈಂಗಿಕ ಕಿರುಕುಳ ಮತ್ತು 109 ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದವು.

ಮಹಿಳೆಯರ ವಿರುದ್ಧದ ಎಲ್ಲ ಬಗೆಯ ಪ್ರಕರಣಗಳು ಕಡಿಮೆಯಾಗಿರುವುದು ಇದೇ ಮೊದಲು ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ. 2020ರ ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಿಸಿದ್ದರಿಂದ ನಾಲ್ಕು ತಿಂಗಳ ಕಾಲ ಜನ ಮನೆಗಳಲ್ಲೇ ಉಳಿದದ್ದು ಕೂಡಾ ಅಪರಾಧ ಪ್ರಕರಣಗಳು ಕಡಿಮೆಯಾಗಲು ಕಾರಣವಿರಬಹುದು. ಒಟ್ಟು ಅತ್ಯಾಚಾರ ಪ್ರಕರಣಗಳ ಪೈಕಿ ಶೇಕಡ 2ರಷ್ಟು ಆರೋಪಿಗಳು ಮಾತ್ರ ಸಂತ್ರಸ್ತರಿಗೆ ಅಪರಿಚಿತರು. ಆಗಂತುಕ ಆರೋಪಿಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ. 2019ರಲ್ಲಿ ಆಗಂತುಕ ಅರೋಪಿಗಳ ಪ್ರಮಾಣ 2.20 ಇದ್ದರೆ ಇದೀಗ 1.77ಕ್ಕೆ ಇಳಿದಿದೆ ಎಂದು ದಿಲ್ಲಿ ಪೊಲೀಸ್ ಆಯುಕ್ತ ಎನ್.ಎಸ್.ಶ್ರೀವಾಸ್ತವ ಹೇಳಿದ್ದಾರೆ.

Submit Your Article