ದುಬೈ ಸೆ 23 : ಯುಎಇ ನಲ್ಲಿ ನಡಯುತ್ತಿರುವ ಐಪಿಎಲ್ 33ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಸೋಲಿನ ಮೇಲೆ ಸೋಲು ಕಾಣುತ್ತಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ಲೇಆಫ್ ಕನಸು ಬಹುತೇಕ ನುಚ್ಚುನೂರಾಗಿದೆ.
ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ನೀರಸ ಆರಂಭ ಕಂಡಕೊಂಡಿತು. ಅಬ್ದುಲ್ ಸಮದ್ 28 ಹಾಗೂ ರಶೀದ್ ಖಾನ್ 22 ರನ್ಗಳ ನೆರವಿನಿಂದ ಹೈದರಾಬಾದ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 134 ರನ್ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಗಿಸೋ ರಬಡಾ 3 ಹಾಗೂ ಅನ್ರಿಕ್ ನಾರ್ಕಿಯಾ 2 ಹಾಗೂ ಅಕ್ಷರ್ ಪಟೇಲ್ 2 ವಿಕೆಟ್ ಕಬಳಿಸಿ ರನ್ ಗಳಿಕೆಗೆ ಕಡಿವಾಣ ಹಾಕಿದರು.
ಅಲ್ಪ ಮೊತ್ತದ ಗುರಿ ಬೆನ್ನತಿದ ಡೆಲ್ಲಿ ಕ್ಯಾಪಿಟಲ್ಸ್ 13 ಎಸೆತ ಬಾಕಿ ಇರುವಾಗಲೇ ಗೆಲುವಿನ ಗುರಿ ಬೆನ್ನಟ್ಟಿದರು. .ಆರಂಭಿಕ ಆಟಗಾರ ಶಿಖರ್ ಧವನ್ 42 ರನ್ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಬಂದ ಶ್ರೇಯಸ್ ಐಯ್ಯರ್ 47 ರನ್ ಗಳಿಸಿದರೆ ರಿಶಬ್ ಪಂತ್ ಪಂತ್ 35 ರನ್ ಗಳಿಸಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.5 ಓವರ್ಗಳಲ್ಲಿ 135 ರನ್ಗಳಿಸಿ ಗೆಲವುನ ನಗೆ ಬೀರಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೆ ಒಟ್ಟು 9 ಪಂದ್ಯಗಳನ್ನು ಆಡಿದ್ದು ಏಳರಲ್ಲಿ ಗೆಲುವು ಕಂಡಿದೆ. ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋತಿದೆ. ಒಟ್ಟು 14 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.613 ನೆಟ್ರೇಟ್ನೊಂದಿಗೆ ಮೊದಲ ಸ್ಥಾನದಲ್ಲಿದೆ.