ಬೆಂಗಳೂರು ಜ 3 :ರಾಜ್ಯದಲ್ಲಿ ಒಮಿಕ್ರಾನ್ ಮತ್ತು ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ಹಿನ್ನಲೆಯಲ್ಲಿ ತಜ್ಞರು ಸರ್ಕಾರಕ್ಕೆ ಕೆಲವು ಸಲಹೆಯನ್ನು ನೀಡಿದ್ದಾರೆ ಆ ಸಲಹೆಗಳನ್ನು ನೋಡುವುದಾದರೆ
- ಪ್ರತಿನಿತ್ಯ 75,000 ಆರ್ ಟಿಪಿಸಿಆರ್ ಹಾಗೂ RAT ಮೂಲಕ ಶೇ. 30 ರಷ್ಟು ಮಾಡಬೇಕು.
- ಕ್ಲಸ್ಟರ್‌ಗಳಿಂದ ಶೇ. 30 ಎಲ್ಲಾ ಮಾದರಿಗಳನ್ನ ಕಡ್ಡಾಯವಾಗಿ ಜಿನೋಮ್ ಸೀಕ್ವೇನ್ಸಿಂಗ್ ಕಳುಹಿಸಬೇಕು.
- ಎಲ್ಲಾ ವಸತಿ ಶಾಲೆಗಳು, ಹಾಸ್ಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು ಮತ್ತು ಜನಸಂದಣಿ ಇರುವ ಇತರ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲಿಸಬೇಕು.
- ಡೆಲ್ಟಾದಿಂದ ಎರಡನೇ ಅಲೆಯ ತೀವ್ರತೆಯನ್ನ ಜನರು ಎದುರಿಸಿ ಸೋತಿದ್ದಾರೆ. ಡೆಲ್ಟಾಗಿಂತ ಓಮೈಕ್ರಾನ್ ರೂಪಾಂತರಿ ಹರಡುವಿಕೆ ಹೆಚ್ಚುಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ
- ಇನ್ನು ಸರಿಯಾಗಿ ಎಸ್ ಒಪಿ ಜಾರಿಯಾಗಿದೆಯಾ ಎಂಬುದನ್ನ ಪರಿಶೀಲಿಸಲು ಮಾರ್ಷಲ್‌ಗಳ ಮತ್ತು ಪೊಲೀಸ್ ಸಹಾಯ ಪಡೆಯುವುದು. ಇದರ ಜೊತೆಗೆ ಓಮೈಕ್ರಾನ್ ಬಹುಬೇಗ ಆಕ್ರಮಣಕಾರಿಯಾಗಲಿದ್ದು, ಹೀಗಾಗಿ ಮೊದಲು ಆಸ್ಪತ್ರೆಗಳು ಸಜ್ಜಾಗಿ ಇರಲಿ ಎಂದು ತಜ್ಞರ ಸಲಹೆ ನೀಡಿದ್ದಾರೆ.
ಈ ಬಗ್ಗೆ ನಾಳೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲ್ಲಿದ್ದು, ಯಾವ ರೀತಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇನ್ನಷ್ಟೆ ತಿಳಿದುಬರಬೇಕಿದೆ.