• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ವಿದೇಶಿ ಗ್ರಾಹಕರ ಮನ ಗೆದ್ದ ಕನ್ನಡದ ನಂದಿನಿ: ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಲ್ಲಿ ವಿಶೇಷ ಬೇಡಿಕೆ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ವಿದೇಶಿ ಗ್ರಾಹಕರ ಮನ ಗೆದ್ದ ಕನ್ನಡದ ನಂದಿನಿ: ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಲ್ಲಿ ವಿಶೇಷ ಬೇಡಿಕೆ
0
SHARES
66
VIEWS
Share on FacebookShare on Twitter
  • ಕನ್ನಡದ ತುಪ್ಪಕ್ಕೆ ವಿದೇಶಿ (demand for nandini in foreign markets) ಮಾರುಕಟ್ಟೆಯಲ್ಲೂ ಭಾರೀ ಬೇಡಿಕೆ
  • ಅಮೆರಿಕಾ, ಆಸ್ಟ್ರೇಲಿಯಾ, ಸೌದಿಗೆ ಅಧಿಕೃತ ರಫ್ತು ಆರಂಭ
  • ನಂದಿನಿ ಬ್ರ್ಯಾಂಡ್‌ ಕರ್ನಾಟಕದ ಹೆಮ್ಮೆ ಎಂದ ಸಿಎಂ ಸಿದ್ದರಾಮಯ್ಯ

Bengaluru: ಕರ್ನಾಟಕದ ಹೆಮ್ಮೆಯ ಡೈರಿ ಬ್ರ್ಯಾಂಡ್ ‘ನಂದಿನಿ’ ಕಳೆದ ಕೆಲ ವರ್ಷಗಳಲ್ಲಿ (demand for nandini in foreign markets) ದೇಶದ

ಮಟ್ಟದಲ್ಲಷ್ಟೇ ಅಲ್ಲ, ಜಾಗತಿಕ ಮಾರುಕಟ್ಟೆಯಲ್ಲೂ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಲೇ ಬಂದಿದೆ.

ತುಪ್ಪ, ಚೀಸ್‌, ಬೆಣ್ಣೆ, ಸಿಹಿ ಪದಾರ್ಥಗಳು, ಯುಎಚ್‌ಟಿ ಹಾಲು, ಐಸ್‌ಕ್ರೀಂ ಸೇರಿದಂತೆ ಹಲವು ಉತ್ಪನ್ನಗಳಿಗೆ ಈಗಾಗಲೇ ಯುಎಇ, ಕತಾರ್‌, ಬ್ರುನೈ,

ಮಾಲ್ಡೀವ್ಸ್‌, ಸಿಂಗಾಪುರ್‌ ಮೊದಲಾದ ರಾಷ್ಟ್ರಗಳಲ್ಲಿ ಉತ್ತಮ ಬೇಡಿಕೆ ಕಂಡುಬಂದಿತ್ತು.

ಈ ಪೈಕಿ ವಿಶೇಷವಾಗಿ ‘ನಂದಿನಿ ತುಪ್ಪ’ಕ್ಕೆ ಜನಪ್ರಿಯತೆ ಹೆಚ್ಚಾಗಿದ್ದು ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ವಿಶೇಷವಾಗಿ ಕನ್ನಡಿಗರು ಈ

ಉತ್ಪನ್ನದ ಬಗ್ಗೆ ತೋರುತ್ತಿರುವ ನಂಬಿಕೆ ಮತ್ತು ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

demand for nandini in foreign markets

ಇದೇ ಹಿನ್ನೆಲೆ, ಕೆಎಂಎಫ್‌ ತನ್ನ ರಫ್ತು ವ್ಯಾಪ್ತಿಯನ್ನು ವಿಸ್ತರಿಸುವ ಕಾರ್ಯಕ್ಕೆ (demand for nandini in foreign markets) ಮತ್ತೊಂದು ಹೆಜ್ಜೆ

ಹಾಕಿದ್ದು, ಈಗ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾ ದೇಶಗಳಿಗೂ ತುಪ್ಪ ರಫ್ತು ಮಾಡಲು ಅಧಿಕೃತ ಚಾಲನೆ ನೀಡಿದೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬೆಳವಣಿಗೆಯನ್ನು ಮೆಚ್ಚಿ, ನಂದಿನಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಖ್ಯಾತಿ ಗಳಿಸುತ್ತಿರುವುದು ಕರ್ನಾಟಕದ ಹೆಮ್ಮೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಮುನ್ನ ದುಬೈನಲ್ಲಿ 2023ರಲ್ಲಿ ಪ್ರಾರಂಭವಾದ ಅಂತರಾಷ್ಟ್ರೀಯ ಮಟ್ಟದ ಮೊದಲ ‘ನಂದಿನಿ ಕಫೆ ಮೂ’ ಕೇಂದ್ರ ನಂದಿನಿ ಉತ್ಪನ್ನಗಳನ್ನು ವಿದೇಶಿಗರ ಕೈಗೂ ತಲುಪಿಸುವ ಪ್ರಮುಖ ವೇದಿಕೆಯಾಯಿತು.

ಅಲ್ಲಿ ತುಪ್ಪ, ಚೀಸ್‌, ಹಾಲು, ಐಸ್‌ಕ್ರೀಂ ಹಾಗೂ ಸಿಹಿ ಪದಾರ್ಥಗಳಿಗೆ ಭಾರೀ ಮನ್ನಣೆ ದೊರೆತಿತ್ತು. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಮಾತ್ರವಲ್ಲ,

ಸ್ಥಳೀಯ ನಾಗರಿಕರೂ ನಂದಿನಿಯ ರುಚಿ ಮತ್ತು ಗುಣಮಟ್ಟಕ್ಕೆ ಮೆಚ್ಚುಗೆಯನ್ನೇ ವ್ಯಕ್ತಪಡಿಸಿದರು.

ಈ ಪ್ರತಿಕ್ರಿಯೆಯಿಂದ ಪ್ರೇರಿತರಾದ ಕೆಎಂಎಫ್ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ವಿಸ್ತರಣೆ ಕಾರ್ಯಕ್ಕೆ ವೇಗ ನೀಡಿತು.

ಇದೇ ಕ್ರಮವಾಗಿ 2025ರ ಆಗಸ್ಟ್‌ನಲ್ಲಿ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ವಿಶ್ವ ಕನ್ನಡ ಸಮಾವೇಶ ‘ನಾವಿಕ’ ಕಾರ್ಯಕ್ರಮದಲ್ಲಿ ನಂದಿನಿಯ ಹೊಸ

ವಿನ್ಯಾಸದ ತುಪ್ಪ ಮತ್ತು ಸಿಹಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ, ಅಮೆರಿಕಾ ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳು ಅಧಿಕೃತವಾಗಿ ಲಭ್ಯವಾಗುತ್ತವೆ ಎಂದು ಘೋಷಿಸಿತು.

ಅಲ್ಲಿ ನಂದಿನಿ ಪೇಡ, ಮೈಸೂರು ಪಾಕ್‌, ಬರ್ಫಿ ಮತ್ತು ಸೇವರಿಸ್‌ ಉತ್ಪನ್ನಗಳು ವಿಶೇಷವಾಗಿ ಜನರ ಮನಸೆಳೆದವು.

ಇದೀಗ ನಂದಿನಿ ತುಪ್ಪಕ್ಕೆ ವಿದೇಶಗಳಿಂದ ನೇರ ಆರ್ಡರ್‌ಗಳು ಬಂದಿರುವುದು ಕೆಎಂಎಫ್‌ ಯಶಸ್ಸಿನ ಮತ್ತೊಂದು ಹೆಜ್ಜೆ ಎಂದು ಹೇಳಬಹುದು.

ಸೌದಿ ಅರೇಬಿಯಾದಿಂದ 8 ಮೆಟ್ರಿಕ್‌ ಟನ್‌, ಅಮೆರಿಕಾದಿಂದ 5 ಮೆಟ್ರಿಕ್‌ ಟನ್‌ ಮತ್ತು ಆಸ್ಟ್ರೇಲಿಯಾದಿಂದ 1 ಮೆಟ್ರಿಕ್‌ ಟನ್‌ ತುಪ್ಪಕ್ಕೆ ಬೇಡಿಕೆ ಬಂದಿದ್ದು, ಇದರ ಪೂರೈಕೆ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.

ಈ ಪ್ರಮಾಣವು ಮುಂದಿನ ತಿಂಗಳಲ್ಲಿ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ವಿದೇಶಗಳಲ್ಲಿ ವಾಸಿಸುವ ಭಾರತೀಯರು ವಿಶೇಷವಾಗಿ ದಕ್ಷಿಣ ಭಾರತೀಯರು

ತಮ್ಮ ಮನೆಗಳಲ್ಲೇ ನಂದಿನಿ ತುಪ್ಪದಿಂದ ಭೋಜನ ತಯಾರಿಸಲು ಆಸಕ್ತಿ ತೋರಿಸುತ್ತಿರುವುದು ಬೇಡಿಕೆಯನ್ನು ಹೆಚ್ಚಿಸಿದೆ.

ಇನ್ನು ತುಪ್ಪವು ಭಾರತೀಯ ಅಡುಗೆ ಸಂಸ್ಕೃತಿಯಲ್ಲಿ ಬಹುಮುಖ್ಯ ಸ್ಥಾನ ಹೊಂದಿರುವುದರಿಂದ, ಗುಣಮಟ್ಟ ಹಾಗೂ ಸ್ವಾದದಲ್ಲಿ ಯಾವುದೇ ರೀತಿಯ

ಕಲಬೆರಕೆ ಮಾಡದ ನಂದಿನಿ ಬ್ರ್ಯಾಂಡ್‌ ವಿದೇಶಿ ಮಾರುಕಟ್ಟೆಯಲ್ಲಿ ತಕ್ಷಣ ಗ್ರಾಹಕರ ಗಮನ ಸೆಳೆದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ನಂದಿನಿ ನಡೆಸುತ್ತಿರುವ ಈ ವಿಸ್ತರಣೆ ಕೇವಲ ವ್ಯವಹಾರ ವೃದ್ಧಿಗಷ್ಟೇ ಸೀಮಿತವಲ್ಲ; ಇದು ಕರ್ನಾಟಕದ ರೈತರು ಹಾಲು

ಉತ್ಪಾದಕರು ಹಾಗೂ ಗ್ರಾಮೀಣ ಆರ್ಥಿಕತೆಯ ಮೇಲೆಯೂ ಮಹತ್ತರ ಪರಿಣಾಮ ಬೀರುವ ಸಾಧ್ಯತೆಯಿದೆ.

ಪ್ರಸ್ತುತ ರಾಜ್ಯದಲ್ಲಿ ಗುಣಮಟ್ಟದ ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವ್ಯವಸ್ಥೆ ಬಲವಾಗಿರುವುದರಿಂದ, ರಫ್ತು ಮಾರುಕಟ್ಟೆ ವಿಸ್ತರಣೆ ಗ್ರಾಮೀಣ

ಹಾಲು ಉತ್ಪಾದಕರಿಗೆ ಹೆಚ್ಚುವರಿ ಆದಾಯದ ದಾರಿ ತೆರೆದಿದೆ.

ಇದರಿಂದ ಹಾಲು ಉತ್ಪಾದಕರಿಗೆ ಲಾಭವಾಗುವುದಲ್ಲದೆ, ರಾಜ್ಯದ ಬ್ರ್ಯಾಂಡ್‌ ಮೌಲ್ಯವೂ ಜಾಗತಿಕ ಮಟ್ಟದಲ್ಲಿ ಏರಿಕೆಯಾಗುತ್ತದೆ.

ಇದುವರೆಗೆ ನಂದಿನಿ ಭಾರತದೊಳಗೆ ಮಾತ್ರ ಎದುರುಗೊಳ್ಳುತ್ತಿದ್ದ ಸ್ಪರ್ಧೆಯನ್ನು ಮೀರಿಸಿ, ಇನ್ನು ಜಾಗತಿಕ ಮಟ್ಟದಲ್ಲಿ ‘ಕನ್ನಡದ ತುಪ್ಪ’ ಎಂದೇ ಘಮ ಹರಡುವ ಕಾರ್ಯಕ್ಕೆ ಕಾಲಿಟ್ಟಿದೆ.

ಮುಂದಿನ ವರ್ಷಗಳಲ್ಲಿ ಹೆಚ್ಚು ದೇಶಗಳಿಗೆ ನಂದಿನಿ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಕೆಎಂಎಫ್ ಹೊಂದಿದ್ದು, ಕರ್ನಾಟಕದ ಹೆಮ್ಮೆ ನಂದಿನಿ ಇನ್ನಷ್ಟು ರಾಷ್ಟ್ರಗಳ ಅಡುಗೆಮನೆಯಲ್ಲೂ ಸುವಾಸನೆ ಹರಡುವ ದಿನಗಳು ದೂರದಲ್ಲಿಲ್ಲವೆಂಬ ಕೆಎಂಎಫ್ ಆಡಳಿತ ಮಂಡಳಿ ಹೇಳಿದೆ.

ಇದನ್ನು ಓದಿ : ಬಿಎಂಟಿಸಿ ಚಾಲಕರ ಹೃದಯ ಹಿಂಡುತ್ತಿರುವ ಅಧಿಕಾರಿಗಳ ಒತ್ತಡ: ಸಿಬ್ಬಂದಿಯಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಆತಂಕ
Tags: americabengalurubrandnandhini

Related News

ವಿಶ್ವಾದ್ಯಂತ ಗೂಗಲ್ ಸೇವೆಯಲ್ಲಿ ವ್ಯತ್ಯಯ: ಕೋಟ್ಯಂತರ ಇಂಟರ್‌ನೆಟ್ ಬಳಕೆದಾರರಿಗೆ ಶಾಕ್,#GoogleDown ಟ್ರೆಂಡ್
ದೇಶ-ವಿದೇಶ

ವಿಶ್ವಾದ್ಯಂತ ಗೂಗಲ್ ಸೇವೆಯಲ್ಲಿ ವ್ಯತ್ಯಯ: ಕೋಟ್ಯಂತರ ಇಂಟರ್‌ನೆಟ್ ಬಳಕೆದಾರರಿಗೆ ಶಾಕ್,#GoogleDown ಟ್ರೆಂಡ್

May 12, 2026
ಸತತ 2ನೇ ದಿನವೂ ಕುಸಿದ ಸೆನ್ಸೆಕ್ಸ್‌-ನಿಫ್ಟಿ : ಸೆನ್ಸೆಕ್ಸ್ 650 ಪಾಯಿಂಟ್ಸ್‌ ಡೌನ್, ನಿಫ್ಟಿ 23,700 ಅಂಕಗಳ ಇಳಿಕೆ
ದೇಶ-ವಿದೇಶ

ಸತತ 2ನೇ ದಿನವೂ ಕುಸಿದ ಸೆನ್ಸೆಕ್ಸ್‌-ನಿಫ್ಟಿ : ಸೆನ್ಸೆಕ್ಸ್ 650 ಪಾಯಿಂಟ್ಸ್‌ ಡೌನ್, ನಿಫ್ಟಿ 23,700 ಅಂಕಗಳ ಇಳಿಕೆ

May 12, 2026
ದೇಶದ ಅಭಿವೃದ್ಧಿಗೆ ಮಿತವ್ಯಯ ಮಂತ್ರ: ಚಿನ್ನ, ಇಂಧನ ಬಳಕೆ ಕಡಿಮೆ ಮಾಡಿದರೆ ಆರ್ಥಿಕತೆಗೆ ಬಲ
ದೇಶ-ವಿದೇಶ

ದೇಶದ ಅಭಿವೃದ್ಧಿಗೆ ಮಿತವ್ಯಯ ಮಂತ್ರ: ಚಿನ್ನ, ಇಂಧನ ಬಳಕೆ ಕಡಿಮೆ ಮಾಡಿದರೆ ಆರ್ಥಿಕತೆಗೆ ಬಲ

May 12, 2026
ಜೈಲು ಅಕ್ರಮಗಳಿಗೆ ಡಿಜಿಟಲ್ ಬ್ರೇಕ್: ಕೈದಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್ ಜಾರಿ
ಪ್ರಮುಖ ಸುದ್ದಿ

ಜೈಲು ಅಕ್ರಮಗಳಿಗೆ ಡಿಜಿಟಲ್ ಬ್ರೇಕ್: ಕೈದಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್ ಜಾರಿ

May 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.